Tuesday, 6 July 2021

ಸದ್ಯದ ಪರಿಸ್ಥಿತಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ: ಡಿಸಿಎಂ ಲಕ್ಷ್ಮಣ ಸವದಿ


 ಸದ್ಯದ ಪರಿಸ್ಥಿತಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ: ಡಿಸಿಎಂ ಲಕ್ಷ್ಮಣ ಸವದಿ

ಮೈಸೂರು: ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಹಾಗು ಸಾರಿಗೆ ಸಚಿವ ಲಕ್ಷ್ಮಣ ಎಂ.ಸವದಿ ಸ್ಪಷ್ಟಪಡಿಸಿದರು.

ಮಂಗಳವಾರ ಮೈಸೂರಿಗೆ ಆಗಮಿಸಿದ ಅವರು ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿದ್ದರು ಸದ್ಯದ ಪರಿಸ್ಥಿಯಲ್ಲಿ ಬಸ್ ದರ ಹೆಚ್ಚಳ ಮಾಡುವುದಿಲ್ಲ. ಜನ ಈಗ ತಾನೆ ಕೊರೋನ ಸಂಕಷ್ಟ ದಿಂದ ಹೊರ ಬಂದಿದ್ದಾರೆ. ಜೊತೆಗೆ ಸಾರಿಗೆ ಬಸ್ ನಲ್ಲಿ ಬಡವರು, ಮಧ್ಯಮ ವರ್ಗದವರೆ ಹೆಚ್ಚು ಪ್ರಯಾಣ ಮಾಡುತ್ತಿರುವುದು. ಹಾಗಾಗಿ ನಮ್ಮ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿ ಇದ್ದರೂ ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂದು ಹೇಳಿದರು.

ಕೋವಿಡ್-19 ಲಾಕ್ ಡೌನ್ ನಿಂದ ಕೆಎಸ್ಸಾರ್ಟಿಸಿ ನಿಗಮಕ್ಕೆ ನಾಲ್ಕುವರೆ ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ. ಬಸ್ ಗಳಿಗೆ ಇಂಧನ ತುಂಬಿಸುವುದೇ  ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ನೌಕರರ ವೇತನ ಹೆಚ್ಚಳ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಈಗಾಗಲೇ ಸಾರಿಗೆ ನೌಕರರು ಇಟ್ಟಿದ್ದ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಲಾಗಿದೆ. ಸದ್ಯಕ್ಕೆ ವೇತನ ಪರಿಷ್ಕರಣೆ ಸಾಧ್ಯವಿಲ್ಲ ಎಂದರು.

ಕಾರು ಅಫಘಾತದಲ್ಲಿ ನಮ್ಮ ಪುತ್ರನ ಮೇಲಿನ ಆರೋಪ ಸುಳ್ಳು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಎಂ.ಸವಧಿ ತಿಳಿಸಿದರು.

ನನ್ನ ಪುತ್ರ ಮತ್ತು ಆತನ ಸ್ನೇಹಿತರು ಹನುಮನ ದೇವಸ್ಥಾನಕ್ಕೆ ಹೋಗಿ ವಾಪಸ್ ಅಥಣಿಗೆ ಬರುವ ವೇಳೆ ಬೈಕ್ ಸವಾರನಿಗೆ ಢಿಕ್ಕಿ ಸಂಭವಿಸಿದೆ. ಆದರೆ ಅಪಘಾತ ನಡೆದ ಕಾರಿನಲ್ಲಿ ನನ್ನ ಪುತ್ರ ಇರಲಿಲ್ಲ, ಮುಂದಿನ ಸ್ನೇಹಿತನ ಕಾರಿನಲ್ಲಿ ಹೋಗುತ್ತಿದ್ದ.‌ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ವಾಪಸ್ ಬಂದು ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಚಿಕಿತ್ಸೆ ಫಲಿಸದೆ ಆ ವ್ಯಕ್ತಿ ಮೃತಪಟ್ಟಿದ್ದಾರೆ. ಇದರಿಂದ ನಮಗೂ ಬೇಸರವಿದೆ ಎಂದು ಹೇಳುದರು.

ಸಾವುಗೀಡಾದ ವ್ಯಕ್ತಿಯ ಜೀವಕ್ಕೆ ಬೆಲೆ ಕಟ್ಟಲಾಗದು, ಮೃತ ವ್ಯಕ್ತಿಯ ಕುಟುಂಬದವರನ್ನು ಸದ್ಯದಲ್ಲಿಯೇ ಭೇಟಿ ಮಾಡಿ ಅವರಿಗೆ ಸಹಾಯ ಮಾಡುವುದಾಗಿ ಹೇಳಿದರು.


SHARE THIS

Author:

0 التعليقات: