Tuesday, 13 July 2021

ಕಂಟೈನರ್-ಲಾರಿ ನಡುವೆ ಭೀಕರ ಅಪಘಾತ, ಇಬ್ಬರೂ ಚಾಲಕರ ಸಾವು


ಕಂಟೈನರ್-ಲಾರಿ ನಡುವೆ ಭೀಕರ ಅಪಘಾತ, ಇಬ್ಬರೂ ಚಾಲಕರ ಸಾವು

ಬೆಳಗಾವಿ,ಜು.13- ಕಂಟೈನರ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎರಡೂ ವಾಹನಗಳ ಚಾಲಕರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಸುತಗಟ್ಟಿ ಬಳಿ ಇಂದು ನಸುಕಿನ ಜಾವ ನಡೆದಿದೆ. ಮಹಾರಾಷ್ಟ್ರದ ಬೀಡ್ ಮೂಲದ ಲಾರಿ ಚಾಲಕ ರಾಜೇಂದ್ರ ಡೊಯ್ಪಡೆ ಹಾಗೂ ಕಂಟೈನರ್ ಚಾಲಕ ನೀರಜ್ ಮೃತಪಟ್ಟ ವ್ಯಕ್ತಿಗಳು.

ಹಾವೇರಿ ಜಿಲ್ಲೆಯ ಶಿಗ್ಗಾವಿಯಿಂದ ಮಹಾರಾಷ್ಟ್ರದ ಕಡೆಗೆ ಜೋಳದ ಹಿಟ್ಟು ತುಂಬಿಕೊಂಡು ಬರುತ್ತಿದ್ದ ಕಂಟೈನರ್ ಸುತಗಟ್ಟಿ ಇಳಿಜರು ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಪಕ್ಕದ ರಸ್ತೆಗೆ ಚಲಿಸಿದ ಪರಿಣಾಮ ಮಹಾರಾಷ್ಟ್ರದಿಂದ ಬೆಳಗಾವಿ ಕಡೆಗೆ ಈರುಳ್ಳಿ ತುಂಬಿಕೊಂಡು ತೆರಳುತ್ತಿದ್ದ ಲಾರಿಗೆ ಅಪ್ಪಳಿಸಿದ ಪರಿಣಾಮ ಎರಡೂ ವಾಹನಗಳ ಚಾಲಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಿಂದ ಲಾರಿಯಲ್ಲಿದ್ದ ಈರುಳ್ಳಿ ಹಾಗೂ ಕಂಟೈನರ್‍ನಲ್ಲಿದ್ದ ಜೋಳದಹಿಟ್ಟು ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸುದ್ದಿ ತಿಳಿಯುತ್ತಿದ್ದಂತೆ ಕಾಗತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಪಘಾತವಾದ ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು .SHARE THIS

Author:

0 التعليقات: