Sunday, 4 July 2021

ಯೆಮನ್ ನನ್ನ ಹುಟ್ಟೂರು, ನನ್ನದು ಅರೇಬಿಕ್ ರಕ್ತ ಎಂದು ತಂದೆ ಸದಾ ಹೇಳುತ್ತಿದ್ದರು: ಮುಕೇಶ್ ಅಂಬಾನಿ


 ಯೆಮನ್ ನನ್ನ ಹುಟ್ಟೂರು, ನನ್ನದು ಅರೇಬಿಕ್ ರಕ್ತ ಎಂದು ತಂದೆ ಸದಾ ಹೇಳುತ್ತಿದ್ದರು: ಮುಕೇಶ್ ಅಂಬಾನಿ

ಕತರ್: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಅರಬ್ ಜಗತ್ತಿನ ಸಂಬಂಧ ಬಹಳಷ್ಟು ಮಂದಿಗೆ ತಿಳಿದಿರದು. ಆದರೆ ರವಿವಾರ ಕತರ್ ಎಕನಾಮಿಕ್ ಫೋರಂನಲ್ಲಿ ಏಷ್ಯಾದ ಈ ಕುಬೇರ, ಅರಬ್ ಜಗತ್ತಿನ ಜತೆಗಿನ ತಮ್ಮ ನಂಟನ್ನು ಭಾವನಾತ್ಮಕವಾಗಿ ಬಿಚ್ಚಿಟ್ಟರು.

"ನಾನು ಹುಟ್ಟಿದ್ದು ಯೆಮನ್‌ನಲ್ಲಿ. ನನ್ನದು ಅರೇಬಿಕ್ ರಕ್ತ ಎಂದು ತಂದೆ ಸದಾ ಹೇಳುತ್ತಿದ್ದರು" ಎಂದು ಅಂಬಾನಿ ಹೇಳಿದರು.

"ನಾನು ಹುಟ್ಟಿದ್ದು ಯೆಮನ್‌ನಲ್ಲಿ; ಏಕೆಂದರೆ ನನ್ನ ತಂದೆ ಯುವ ಭಾರತೀಯರಾಗಿ ಯೆಮನ್‌ಗೆ ತೆರಳಿದ್ದರು". "ನನ್ನದು ಅರೇಬಿಕ್ ರಕ್ತ ಎಂದು ಅವರು ಸದಾ ಹೇಳುತ್ತಿದ್ದರು" ಎಂದು ನೆನಪಿಸಿಕೊಂಡರು.

"ಎಲ್ಲ ಅರೇಬಿಕ್ ದೇಶಗಳು ಮತ್ತು ಭಾರತದ ನಡುವಿನ ಸಂಬಂಧಕ್ಕೆ ನಾವು ಬೆಲೆ ಕೊಡುತ್ತೇವೆ" ಎಂದು ಅವರು ಹೇಳಿದರು.

ಅರಬ್ ಜಗತ್ತು ಮತ್ತು ಭಾರತದ ಸಂಬಂಧ ಪ್ರಾಚೀನವಾದದ್ದು. ಕತರ್‌ನಲ್ಲಿ ಸುಮಾರು ಏಳು ಲಕ್ಷ ಭಾರತೀಯರಿದ್ದಾರೆ. ಈ ಪೈಕಿ ಪ್ರತಿಯೊಬ್ಬರೂ ಭಾರತದಲ್ಲಿ ಕತರ್‌ನ ವಕ್ತಾರರು. ನಮ್ಮ ಕುಟುಂಬವನ್ನೇ ತೆಗೆದುಕೊಂಡರೂ ವಿಶ್ವಸಂಸ್ಥೆಯ ಸಹಸ್ರಮಾನದ ಅಭಿವೃದ್ಧಿ ಗುಂಪಿನಲ್ಲಿ ಶೇಖಾ ಮೋಝಾ ಜತೆ ಕೆಲಸ ಮಾಡುವ ಅವಕಾಶ ನನ್ನದಾಗಿತ್ತು. ಆದರೆ ನನ್ನ ಪತ್ನಿ, ಅವರ ಕ್ರೀಡೆ ಮತ್ತು ಸಾಂಸ್ಕೃತಿಕ ಸಾಧನೆಯ ದೊಡ್ಡ ಅಭಿಮಾನಿ. ಅವರ ಪ್ರತಿಷ್ಠಾನ ಕಲಾಕ್ಷೇತ್ರದಲ್ಲಿ ಮಾಡಿರುವ ಸಾಧನೆ ಬಗ್ಗೆ ನನ್ನ ಪುತ್ರಿಗೆ ಅಪಾರ ಅಭಿಮಾನವಿದೆ. ಇಡೀ ಕುಟುಂಬದಲ್ಲೇ ಕತರ್ ಫೌಂಡೇಷನ್ ಸಾಧನೆ ಬಗ್ಗೆ ವ್ಯಾಪಕ ಮೆಚ್ಚುಗೆ ಇದೆ. ಕತರ್ ರಾಜಕುಟುಂಬ ನಿಜವಾಗಿಯೂ ಕತರ್ ಜನತೆಗಾಗಿ ದೊಡ್ಡ ಸಾಧನೆ ಮಾಡಿದೆ. ನಾವು ಅವರಿಂದ ಕಲಿಯುವ ಮೂಲಕ, ಪ್ರೇರಣೆ ಪಡೆಯುವ ಮೂಲಕ ಭಾರತ ಹಾಗೂ ಕತರ್ ನಡುವ ಗಾಢ ಸಂಬಂಧ ಬೆಳೆಸಬಹುದು ಎಂದು ಅಭಿಪ್ರಾಯಪಟ್ಟರು.


SHARE THIS

Author:

0 التعليقات: