ಭಾರತ ಕ್ರಿಕೆಟಿಗರಾದ ಚಾಹಲ್, ಕೃಷ್ಣಪ್ಪ ಗೌತಮ್ ಗೆ ಕೊರೋನ
ಹೊಸದಿಲ್ಲಿ: ಭಾರತೀಯ ಕ್ರಿಕೆಟಿಗರಾದ ಯುಜ್ವೇಂದ್ರ ಚಾಹಲ್ ಹಾಗೂ ಕೃಷ್ಣಪ್ಪ ಗೌತಮ್ ಶ್ರೀಲಂಕಾದಲ್ಲಿ ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ ಎಂದು ಮೂಲಗಳು ಎನ್ಡಿಟಿವಿಗೆ ತಿಳಿಸಿವೆ.
ಆತಿಥೇಯ ಶ್ರೀಲಂಕಾ ವಿರುದ್ಧದ ಸೀಮಿತ ಓವರ್ ಗಳ ಸರಣಿಯಲ್ಲಿ ಭಾಗವಹಿಸಲು ಈ ಜೋಡಿ ಭಾರತೀಯ ತಂಡದೊಂದಿಗೆ ಇತ್ತು. ಆದರೆ ಕೃನಾಲ್ ಪಾಂಡ್ಯ ಅವರ ಸಂಪರ್ಕಕ್ಕೆ ಬಂದ ನಂತರ ಎರಡನೇ ಮತ್ತು ಮೂರನೇ ಟ್ವೆಂಟಿ-20 ಪಂದ್ಯಗಳನ್ನು ಆಡಲಿಲ್ಲ.
ಕೃನಾಲ್ ಪಾಂಡ್ಯ ಕೊರೋನ ಸೋಂಕಿಗೆ ಒಳಗಾದ ಬಳಿಕ ಎರಡನೇ ಟಿ-20 ಪಂದ್ಯವನ್ನು ಒಂದು ದಿನ ಮುಂದೂಡಲಾಗಿತ್ತು.
0 التعليقات: