ಐ ಕ್ಯೂ ಎಸ್ ವಾರ್ಷಿಕ ಕಾರ್ಯಕ್ರಮಗಳಿಗೆ ಆರಂಭ
ಕಾಸರಗೋಡು: ಅತ್ಯಾಧುನಿಕ ಸವಲತ್ತುಗಳನ್ನು ಬಳಸಿಕೊಂಡು ಪವಿತ್ರ ಕುರ್ಆನ್ ಕಂಠಪಾಠ ಸಹಿತ ವೈವಿಧ್ಯಮಯ ಕಲಿಕೆಗಳಿಗಾಗಿ ಕೋರ್ಸ್ ಗಳು ನೀಡುತ್ತಿರುವ ಐ ಕ್ಯೂ ಎಸ್ ಆನ್ಲೈನ್ ಸಂಸ್ಥೆಯ ವಾರ್ಷಿಕ ಕಾರ್ಯಕ್ರಮಗಳಿಗೆ ಪ್ರಾರಂಭವಾಯಿತು. ವಾರ್ಷಿಕ ದಿನವಾದ ನಿನ್ನೆ ಬೆಳಿಗ್ಗೆ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ ಝಿಯಾರತ್ ನೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಜುಲೈ 1 ರಿಂದ 10 ರವರೆಗಿನ ದಿನಗಳಲ್ಲಿ ಪವಿತ್ರ ಕುರ್ಆನ್ ಚರ್ಚಾ ವೇದಿಕೆ, ಸೂರತುಲ್ ಫಾತಿಹ ಕಲಿಕೆ, ಕುರ್ಆನ್ ಕ್ವಿಝ್ ಸ್ಪರ್ಧೆ, ಪೋಸ್ಟರ್ ಡಿಸೈನಿಂಗ್ ಸ್ಪರ್ಧೆ, ಪೋಷಕರ ಸಭೆ, ಸ್ಟೂಡೆಂಟ್ ಮೀಟ್, ಆಧ್ಯಾತ್ಮಿಕ ಮಜ್ಲಿಸ್, ಕುರ್ಆನ್ ಆಂಡ್ ಸೈನ್ಸ್ ವಿಡಿಯೋ ಪಬ್ಲಿಶಿಂಗ್, ಹದೀಸ್ ಸ್ಟಾಟಸ್, ವೆಬ್ ಸೈಟ್ ಲಾಂಚಿಂಗ್ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ. ಜುಲೈ ಹತ್ತರಂದು ಸಮಾರೋಪ ಸಮ್ಮೇಳನ ನಡೆಯಲಿದೆ.
ಸಯ್ಯಿದ್ ಹಾಮಿದ್ ಅನ್ವರ್ ಅಲ್ ಅಹ್ದಲ್ ತಂಙಳ್ ರವರು ಝಿಯಾರತಿಗೆ ನೇತೃತ್ವ ವಹಿಸಿದರು. ಮೂಸ ಸಖಾಫಿ ಕಳತ್ತೂರ್, ಹಾಫಿಳ್ ಸಜ್ಜಾದ್ ಹಿಮಮಿ ಸಖಾಫಿ, ಹಾಫಿಳ್ ಮಿಕ್'ದಾದ್ ಹಿಮಮಿ, ಹಾಫಿಳ್ ಇಂತಿಯಾಝ್ ಹಿಮಮಿ ಸಖಾಫಿ. , ಹಾಫಿಳ್ ಶಾಹುಲ್ ಹಮೀದ್ ಹಿಮಮಿ ಸಖಾಫಿ ಮುಂತಾದವರು ಭಾಗವಹಿಸಿದರು.
0 التعليقات: