ಉರುಳಿಬಿದ್ದ ಟೆಂಪೋ ಟ್ರಾವಲರ್
ಚಾಮರಾಜನಗರ, ಜು.13: ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪ್ರವಾಸಿಗರಿದ್ದ ಟೆಂಪೋ ಟ್ರಾವಲರ್ ವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಕೆಲವರು ಗಾಯಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹುಣಸೇಮರ ದೊಡ್ಡಿ ಬಳಿ ಇಂದು ಮುಂಜಾನೆ ನಡೆದಿದೆ.
ಮೈಸೂರಿನಿಂದ 15 ಮಂದಿ ಮಹದೇಶ್ವರ ಬೆಟ್ಟಕ್ಕೆ ತೆರಳಲು ಟೆಂಪೋ ಟ್ರಾವಲರ್ ಮೂಲಕ ಹೊರಟಿದ್ದರು. ಅವರು ಕೊಳ್ಳೇಗಾಲ ಮಧುವನಹಳ್ಳಿಗೆ ಬಂದು ಅಲ್ಲಿಂದ ದಾರಿ ತಿಳಿಯದೆ ಲೊಕ್ಕನಹಳ್ಳಿ ಒಡೆಯರಪಾಳ್ಯ ರಸ್ತೆ ಕಡೆಗೆ ತೆರಳಿದ್ದರು. ಮಂಗಳವಾರ ಮುಂಜಾನೆಯ ವೇಳೆ ಟೆಂಪೋ ಟ್ರಾವಲರ್ ಬೂದಿಪಡಗ ಬಳಿಯ ಹುಣಸೇಮರದೊಡ್ಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿತ್ತೆನ್ನಲಾಗಿದೆ. ಈ ವೇಳೆ ವಾಹನದಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಹನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
0 التعليقات: