Tuesday, 13 July 2021

ಗಿರಿಧಾಮ, ನಗರದ ಮಾರುಕಟ್ಟೆಗಳಲ್ಲಿ ಜನರು ಮಾಸ್ಕ್ ಧರಿಸದೇ ಇರುವುದು ಕಳವಳಕಾರಿ: ಪ್ರಧಾನಿ ಮೋದಿ


 ಗಿರಿಧಾಮ, ನಗರದ ಮಾರುಕಟ್ಟೆಗಳಲ್ಲಿ ಜನರು ಮಾಸ್ಕ್ ಧರಿಸದೇ ಇರುವುದು ಕಳವಳಕಾರಿ: ಪ್ರಧಾನಿ ಮೋದಿ

ಹೊಸದಿಲ್ಲಿ: ಗಿರಿಧಾಮಗಳು ಹಾಗೂ  ನಗರ ಮಾರುಕಟ್ಟೆಗಳಲ್ಲಿ ಇತ್ತೀಚೆಗೆ ಮಾಸ್ಕ್ ಗಳು ಮತ್ತು ದೈಹಿಕ ಅಂತರವಿಲ್ಲದೆ  ಜನಸಮೂಹವು  ಸೇರಿರುವುದು "ಕಳವಳಕ್ಕೆ ಕಾರಣವಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.  ಸೋಂಕಿನ ಮೂರನೇ ಅಲೆಯ ಕಾರಣಕ್ಕೆ ಕೋವಿಡ್ ಶಿಷ್ಟಾಚಾರಗಳನ್ನು ಅನುಸರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.

ಎಂಟು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಆನ್ ಲೈನ್  ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮೂಲಭೂತ ನಿಯಮಗಳನ್ನು ಪಾಲಿಸುವ ಮಹತ್ವವನ್ನು ಒತ್ತಿ ಹೇಳಿದರು. ಕೋವಿಡ್ -19ನ ಮೂರನೆ  ಅಲೆಯನ್ನು ತಡೆಗಟ್ಟಲು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಗಳನ್ನು ಧರಿಸುವುದು, ದೊಡ್ಡ ಕೂಟಗಳನ್ನು ತಪ್ಪಿಸುವುದು ಹಾಗೂ  ವ್ಯಾಕ್ಸಿನೇಷನ್ ಖಾತರಿಪಡಿಸುವುದು  ಮುಖ್ಯವಾಗಿದೆ ಎಂದರು.

“ಕೊರೋನವೈರಸ್ ಕಾರಣದಿಂದಾಗಿ ಪ್ರವಾಸೋದ್ಯಮ  ಹಾಗೂ  ವ್ಯವಹಾರವು ಹೆಚ್ಚು ಪರಿಣಾಮ ಬೀರಿದೆ ಎಂಬುದು ನಿಜ ... ಆದರೆ ಮಾಸ್ಕ್ ಗಳನ್ನು ಧರಿಸದೆ ಗಿರಿಧಾಮಗಳು ಮತ್ತು ಮಾರುಕಟ್ಟೆಗಳಲ್ಲಿ ಹೆಚ್ಚಿನ ಜನಸಂದಣಿ ಸೇರುವುದು  ಸರಿಯಲ್ಲ ಎಂದು ನಾನು ಬಹಳ ದೃಢ ವಾಗಿ ಹೇಳುತ್ತೇನೆ" ಎಂದು ಪ್ರಧಾನಿ ಮೋದಿ ಹೇಳಿದರು.


SHARE THIS

Author:

0 التعليقات: