Wednesday, 14 July 2021

ವಾಮಾಚಾರದ ಭಯ; ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಂದೆ

ವಾಮಾಚಾರದ ಭಯ;
ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಂದೆ

ಬೆಳಗಾವಿ (ಜುಲೈ,14): ಬೆಳಗಾವಿಯಲ್ಲಿ ಇಂದು ತಂದೆಯೊಬ್ಬ ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸದ್ಯ ಆತನ ಸ್ಥಿತಿ ಗಂಭೀರವಾಗಿದ್ದು ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಬ್ಬರು ಪುಟ್ಟ ಮಕ್ಕಳ ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಯತ್ನಿಸಿರೋ ವ್ಯಕ್ತಿಗೆ ವಾಮಾಚಾರದ ಭಯ ಇತ್ತು ಎಂದು ಹೇಳಲಾಗುತ್ತಿದೆ. ಆದರೇ ಈ ಕೊಲೆ, ಆತ್ಮಹತ್ಯೆ ಬಗ್ಗೆ ಅನೇಕ ಅನುಮಾನುಗಳು ಇರೋದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಎಪಿಎಂಸಿ ಪೊಲೀಸರು ಪ್ರಕರಣವನ್ನು 

ಬೆಳಗಾವಿಯ ಕೆ ಎಚ್ ಕಂಗ್ರಾಳಿ ಗ್ರಾಮದ ಅನಿಲ್ ಬಾಂದೇಕರ್ ತನ್ನ ಇಬ್ಬರು ಮಕ್ಕಳಾದ ಅನನ್ಯಾ(4), ಅಂಜಲಿ(8) ಇಬ್ಬರಿಗೆ ವಿಷ ನೀಡಿ ಕೊಲೆ ಮಾಡಿದ್ದಾನೆ. ನಂತರ ತಾನು ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾನೆ. ಮನೆಯಿಂದ ಹೋಗಿದ್ದ ಪತಿ ವಾಪಸ್ ಬರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪತ್ನಿ ವಾಪಸ್ ಬಂದು ನೋಡಿದಾಗ ಭೀಕರ ಪ್ರಕರಣ ಬಯಲಾಗಿದೆ. ಮಕ್ಕಳನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೂ ಅನಿಲ್ ಸ್ಥಿತಿ ಸಹ ಗಂಭೀರವಾಗಿದ್ದು, ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅನಿಲ್ ಬಾಂದೇಕರ್ ಟೈಲ್ಸ್ ಅವಳಡಿಕೆ ಕೆಲಸ ಮಾಡುತ್ತಿದ್ದ ಕಾರ್ಮಿಕ. ಜುಲೈ 11ರಂದು ಅನಿಲ್ ವಾಸವಿದ್ದ ಬಾಡಿಗೆ ಮನೆಯ ಮುಂಭಾಗದಲ್ಲಿ ಯಾರೋ ವಾಮಾಚಾರ ಮಾಡಿಸಿದ್ದರು ಎನ್ನಲಾಗಿದೆ. ಈ ವಿಚಾರ ಮನೆಯ ಮಾಲೀಕರು ಅನಿಲ್ ಗಮನಕ್ಕೆ ತಂದಿದ್ದರು. ಈ ವಿಚಾರ ಗೊತ್ತಾದ ಬಳಿಕ ಅನಿಲ್ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ಪತ್ನಿ ಹಾಗೂ ಸೋದರ ಮಾವ ಸಹ ಏನು ಆಗಲ್ಲ ಎಂದು ಧೈರ್ಯ ಹೇಳಿದ್ದರು.

ಅನಿಲ್ ಮನೆಯಲ್ಲಿ ಬೆಳಗ್ಗೆ ಎಲ್ಲರ ಜತೆಗೆ ಉಪಹಾರ ಸೇವಿಸಿದ್ದಾರೆ. ಬಳಿಕ ಪತ್ನಿ ಜಯಶ್ರೀ ಮಗನ ಜತೆಗೆ ತವರು ಮನೆಯಾಗಿ ವಿಜಯ ನಗರಕ್ಕೆ ಹೋಗಿ ವಾಪಸ್ ಬರೋದಾಗಿ ಹೇಳಿ ಹೋಗಿದ್ದಾರೆ. ಬಳಿಕ ಅನಿಲ್ ಮನೆಯ ಬೆಡ್ ರೂಂ ಬಾಗಿಲು ಹಾಕಿಕೊಂಡು ಮಕ್ಕಳಿಗೆ ವಿಷ ನೀಡಿ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಫೋನ್ ಮಾಡಿದ್ರು ರಿಸಿವ್ ಮಾಡದ ಹಿನ್ನೆಲೆಯಲ್ಲಿ ಪತ್ನಿ ಬಂದು ನೋಡಿದಾಗ ಕೃತ್ಯ ಬಯಲಾಗಿದೆ. ತಕ್ಷಣ ಎಲ್ಲರನ್ನುಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆದರೇ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇನ್ನೂ ಅನಿಲ್ ಗಂಭೀರ ಸ್ಥಿತಿಯಲ್ಲಿ ಇದ್ದು ಆಸ್ಪತ್ರೆಯ ಐಸಿಯುಗೆ ದಾಖಲು ಮಾಡಲಾಗಿದೆ.

ಈ ಬಗ್ಗೆ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಅನಿಲ್ ವಿರುದ್ಧ ಕೊಲೆ ಹಾಗೂ ಆತ್ಮಹತ್ಯೆ ಯತ್ನದ ಬಗ್ಗೆ ದೂರು ದಾಖಲಾಗಿದೆ. ಸ್ಥಳಕ್ಕೆ ಡಿಸಿಪಿ ವಿಕ್ರಮ ಅಮಟೆ, ಎಸಿಪಿ ನಾರಾಯಣ ಬರಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದಲ್ಲಿ ಹಲವು ಅನುಮಾನಗಳು ಇದ್ದು, ಈ ಬಗ್ಗೆ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮನೆಯಿಂದ ಹೊರ ಹೋಗುವುದನ್ನು ಕಡಿಮೆ ಮಾಡಿ. ಗುಂಪುಗೂಡುವುದನ್ನು ನಿಯಂತ್ರಿಸಿ.


SHARE THIS

Author:

1 comment:

  1. Best news site.... good . Keep it up

    Owner of : https://www.1stepforlife.in

    ReplyDelete