Friday, 2 July 2021

ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್ ಟೀಮ್ ಇಸಾಬಾ ವತಿಯಿಂದ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು


 ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್ ಟೀಮ್ ಇಸಾಬಾ ವತಿಯಿಂದ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು

ಈಶ್ವರಮಂಗಲ ವ್ಯಾಪ್ತಿಯಲ್ಲಿರುವ ಡಾಕ್ಟರ್ ಗಳನ್ನು ಬೇಟಿಯಾಗಿ ಅವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಭಾರತದ ಅತ್ಯುನ್ನತ ವೈದ್ಯರಾದ ಡಾಕ್ಟರ್ ಜಾಯಿ ಅವರ ಹುಟ್ಟಿದ  ಮತ್ತು  ನಿಧನರಾದ  ಜುಲೈ ಒಂದು ನಾವು ಡಾಕ್ಟೇರ್ಸ್ ಡೇಯಾಗಿ ಆಚರಿಸುತ್ತಿದ್ದೇವೆ. ಈ ಕೋವಿಡ್ ಕಾಲದ ಸಂಕಷ್ಟದಲ್ಲಿ ತಮ್ಮ ಜೀವನವನ್ನೇ ಮರೆತು ಸಮಾಜಕ್ಕಾಗಿ ಶ್ರಮಪಟ್ಟು ನಿಸ್ವಾರ್ಥ ಸೇವೆಮಾಡುತ್ತಿರುವ ನಮ್ಮ ನೆಚ್ಚಿನ ವೈದ್ಯರುಗಳೇ ನಿಜವಾದ ಹೀರೋಗಳು. ಅವರ ಕಾರ್ಯಾಚರಣೆಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ. ಸಾಮಾಜಿಕವಾಗಿ ಕಾರ್ಯಾಚರಿಸುತ್ತಿರುವ ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್ ಟೀಂ ಇಸಾಬ  ವತಿಯಿಂದ  ಈಶ್ವರಮಂಗಲ ವ್ಯಾಪ್ತಿಯ ಡಾಕ್ಟರುಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮಗಳಲ್ಲಿ ಡಾ ನಿಖಿಲ್, ಡಾ ಶ್ರೀ ಕುಮಾರ್, ಡಾ ಉದನೇಶ್ವರ ಭಟ್, ಡಾ ರಾಜೇಶ್, ಡಾ ಆರತಿ ರಾಜೇಶ್, ಡಾ ಕಾರ್ತಿಕ್ ಗಾಳಿಮುಖ, ಡಾ ನವೀನ್ ಶಂಕರ್ ಕಾವು, ಡಾ ವೆಂಕಟೇಶ್, ಡಾ ಸೌಮ್ಯ, ದಾಮೋದರ್ ವೈದ್ಯರ್,

ಎಸ್ ವೈ ಎಸ್ ಜಿಲ್ಲಾ ನಾಯಕರಾದ ಅಬ್ದುಲ್ ಅಝೀಝ್ ಮಿಸ್ಬಾಹಿ,ಅಬ್ದುಲ್ ಹಮೀದ್ ಕೊಯಿಲ, ಸೆಂಟರ್ ಅಧ್ಯಕ್ಷ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್, ಕೋಶಾಧಿಕಾರಿ  ಹನೀಫ ಹಾಜಿ ಗಾಳಿಮುಖ, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ  ಅಬೂಬಕ್ಕರ್ ಸಿಎಂ ಕರ್ನೂರ್, ಕಾರ್ಯದರ್ಶಿ ಶರೀಫ್ ಪಿಎಚ್, ಇಸಬಾ ಟೀಮ್ ಅಮೀರ್ ಇಸ್ಮಾಯಿಲ್ ಕೆಎಚ್, ಕಾರ್ಯದರ್ಶಿಗಳಾದ ಶಂಸುದ್ದೀನ್ ಹನಿಫಿ,ತ್ವಾಹ ಸಅದಿ, ಉಮರ್ ಸಅದಿ, ತಖ್ಯುದ್ದೀನ್ ಮದನಿ ಮಾಡನ್ನೂರ್, ಕೆಸಿಎಫ್ ನೇತಾರ ಶರೀಫ್ ಜಿಕೆ, ಹಂಝ ತುಳಸಿಯಡ್ಕ, ಮುದಸ್ಸಿರ್ ಶೆರಾವು ಮುಂತಾದವರು ಭಾಗವಹಿಸಿದರು.


SHARE THIS

Author:

0 التعليقات: