Tuesday, 6 July 2021

ಕೇರಳ ಬಾಲಕಿ ಅತ್ಯಾಚಾರ-ಹತ್ಯೆ ಪ್ರಕರಣ: ಅಂತ್ಯ ಸಂಸ್ಕಾರದಲ್ಲಿ ದುಃಖಿಸುತ್ತಿದ್ದ ಡಿವೈಎಫ್ ಐ ಕಾರ್ಯಕರ್ತನೇ ಆರೋಪಿ!


 ಕೇರಳ ಬಾಲಕಿ ಅತ್ಯಾಚಾರ-ಹತ್ಯೆ ಪ್ರಕರಣ: ಅಂತ್ಯ ಸಂಸ್ಕಾರದಲ್ಲಿ ದುಃಖಿಸುತ್ತಿದ್ದ ಡಿವೈಎಫ್ ಐ ಕಾರ್ಯಕರ್ತನೇ ಆರೋಪಿ!

ಇಡುಕ್ಕಿ: ಜಿಲ್ಲೆಯ ವಂಡಿಪೆರಿಯಾರ್ ಗ್ರಾಮದಲ್ಲಿ ಕೊಲೆಯಾದ ಆರು ವರ್ಷದ ಬಾಲಕಿಯ ಅಂತ್ಯಸಂಸ್ಕಾರದ ವೇಳೆ ಎಲ್ಲರ ಜೊತೆ 22 ವರ್ಷದ ಅರ್ಜುನ್ ಎಂಬ ಡಿವೈಎಫ್‌ಐ ಕಾರ್ಯಕರ್ತನೂ ದುಃಖಿಸುತ್ತಿದ್ದ. ಮೃತ ಬಾಲಕಿಯ ನೆರೆಮನೆಯವನಾಗಿದ್ದ ಈತ ಪುಟ್ಟ ಬಾಲಕಿಯ ಜತೆ ತಾನು ಆಟವಾಡುತ್ತಿದ್ದುದಾಗಿ ಹೇಳಿ ಜೋರಾಗಿ ರೋದಿಸುತ್ತಿದ್ದುದನ್ನು ಜನ ಗಮನಿಸಿದ್ದರು. ಆದರೆ ದುಃಖ ನಟಿಸುತ್ತಿದ್ದ ಈತನೇ ಆ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ನೇಣುಹಾಕಿ ಸಾಯಿಸಿದ ಆರೋಪಿ ಎಂದು ಯಾರು ಶಂಕಿಸಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಆತನ ಬಂಧನವಾದಾಗ ಎಲ್ಲರೂ ಆಘಾತಕ್ಕೊಳಗಾಗಿದ್ದರು.

ಇಡುಕ್ಕಿ ಜಿಲ್ಲೆಯ ವಂಡಿಪೆರಿಯಾರ್ ಗ್ರಾಮದ ಚಹಾ ಪ್ಲಾಂಟೇಶನ್‌ನ ಕೂಲಿ ಕಾರ್ಮಿಕನೊಬ್ಬ ಆರು ವರ್ಷದ ಮಗಳನ್ನು ಅತ್ಯಾಚಾರ ಎಸಗಿ ಕೊಲೆಗೈಯಲಾಗಿತ್ತು. ಪೊಲೀಸರು ಹೇಳುವಂತೆ ಹಲವು ನಾಗರಿಕ ಅಭಿಯಾನಗಳಲ್ಲಿ ಪರಿಚಿತ ಮುಖವಾಗಿದ್ದ ಆರೋಪಿ ಅರ್ಜುನ್ ಬಾಲಕಿಗೆ ಮೂರು ವರ್ಷವಾಗಿದ್ದಾಗಲೇ ಲೈಂಗಿಕ ಕಿರುಕುಳ ನೀಡುತ್ತಿದ್ದ. ಕೊನೆಯ ಘಟನೆ ನಡೆದದ್ದು ಜೂನ್ 30ರಂದು. ಆರಂಭದಲ್ಲಿ ಬಾಲಕಿ ಆಟವಾಡುವ ವೇಳೆ ಉಸಿರುಗಟ್ಟಿ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿತ್ತು. ಮನೆಯವರು ಕೂಲಿ ಕೆಲಸಕ್ಕೆ ಹೋಗಿದ್ದಾಗ ಬಾಲಕಿ ಒಬ್ಬಳೇ ಮನೆಯಲ್ಲಿದ್ದಳು. ಬಾಲಕಿಯ ಅಣ್ಣ ಅಪರಾಹ್ನ 3ರ ವೇಳೆಗೆ ಮನೆಗೆ ಬಂದು ನೋಡಿದಾಗ ಬಾಲಕಿ ಮೃತಪಟ್ಟಿದ್ದಳು. ಪೊಲೀಸರು ಬಂದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಬಳಿಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದದ್ದು ತಿಳಿದುಬಂತು. ಅಕ್ಕಪಕ್ಕದವರನ್ನು ವಿಚಾರಣೆ ಮಾಡಲಾಯಿತು.

ಎರಡು ದಿನದಿಂದ ಬಾಲಕಿಯನ್ನು ನೋಡಿರಲಿಲ್ಲ ಎಂದು ಅರ್ಜುನ್ ಹೇಳಿದ್ದ. ಬಾಲಕಿಯ ಅಂತ್ಯಸಂಸ್ಕಾರಕ್ಕೂ ನೆರವಾಗಿದ್ದ. ಆದರೆ ಆ ದಿನ ಬಾಲಕಿ ಅರ್ಜುನ್ ಜತೆ ಆಟವಾಡುತ್ತಿದ್ದ ಬಗ್ಗೆ ಮನೆಯವರು ಪೊಲೀಸರಿಗೆ ಹೇಳಿದರು. ಆದರೆ ಇದೀಗ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸೇರಿದಂತೆ ಅರ್ಜುನ್ ವಿರುದ್ಧ ಸಾಕಷ್ಟು ಪುರಾವೆಗಳು ಸಿಕ್ಕಿವೆ.

ಇಡೀ ಪ್ರಕರಣ 2017ರಲ್ಲಿ ಚೆನ್ನೈನಲ್ಲಿ ನಡೆದ ಏಳು ವರ್ಷದ ಬಾಲಕಿ ಹಸಿನಿ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣವನ್ನು ಹೋಲುತ್ತಿದೆ. ಆ ಪ್ರಕರಣದಲ್ಲಿ ಆರೋಪಿ ಧಸ್ವಂತ್ ಕೂಡಾ 23 ವರ್ಷದವನಾಗಿದ್ದು, ಬಾಲಕಿಯ ನೆರೆಮನೆಯಲ್ಲಿ ವಾಸವಿದ್ದ. ಅರ್ಜುನ್‌ನಂತೆ ಈತ ಕೂಡಾ ಬಾಲಕಿಯ ಕುಟುಂಬದ ಜತೆ ಸಲುಗೆಯಿಂದ ಇದ್ದ. ಅರ್ಜುನ್‌ನಂತೆ ಹಸಿನಿ ಮೇಲೆ ಅತ್ಯಾಚಾರ ಎಸಗಿ ಉಸಿರುಗಟ್ಟಿಸಿ ಸಾಯಿಸಿದ್ದ.


SHARE THIS

Author:

0 التعليقات: