Tuesday, 6 July 2021

ಜಾಮಿಯಾ ವಿದ್ಯಾರ್ಥಿಗಳತ್ತ ಗುಂಡು ಹಾರಿಸಿದ್ದ ಯುವಕನಿಂದ ಹರ್ಯಾಣ ಮಹಾಪಂಚಾಯತಿನಲ್ಲಿ ಪ್ರಚೋದನಕಾರಿ ಭಾಷಣ


 ಜಾಮಿಯಾ ವಿದ್ಯಾರ್ಥಿಗಳತ್ತ ಗುಂಡು ಹಾರಿಸಿದ್ದ ಯುವಕನಿಂದ ಹರ್ಯಾಣ ಮಹಾಪಂಚಾಯತಿನಲ್ಲಿ ಪ್ರಚೋದನಕಾರಿ ಭಾಷಣ

ಹೊಸದಿಲ್ಲಿ : ಕಳೆದ ವರ್ಷದ ಜನವರಿ 30ರಂದು ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ  ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ  ಹೊರಗಡೆ ಆಜಾದಿ ಘೋಷಣೆ ಮೊಳಗಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳತ್ತ ʼತೆಗೆದುಕೊಳ್ಳಿ ಆಜಾದಿʼ ಎಂದು ಹೇಳಿ ಪೊಲೀಸರು ನೋಡುತ್ತಿದ್ದಂತೆಯೇ  ತನ್ನ ಕೈಯ್ಯಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿ ಒಬ್ಬ ವಿದ್ಯಾರ್ಥಿಯನ್ನು ಗಾಯಗೊಳಿಸಿದ್ದ ಅನಾಮಿಕ ಯುವಕನನ್ನು ಪೊಲೀಸರು  ಅಲ್ಲಿಂದ ಕರೆದೊಯ್ದಿದ್ದರಲ್ಲದೆ ಆತನೊಬ್ಬ ಅಪ್ರಾಪ್ತ ಎಂದು ಹೇಳಿದ್ದರು. ಇದೇ ಕಾರಣದಿಂದ ಈ ಘಟನೆಯ ಛಾಯಾಚಿತ್ರಗಳಲ್ಲಿ ಆತನ ಮುಖವನ್ನು ಅಸ್ಪಷ್ಟಗೊಳಿಸಲಾಗಿತ್ತು.

ಇದೇ ಯುವಕ ಹರ್ಯಾಣಾದ ಪಟೌಡಿಯಲ್ಲಿ ಭಾನುವಾರ ನಡೆದ ಮಹಾಪಂಚಾಯತ್‍ನಲ್ಲಿ ಕಾಣಿಸಿಕೊಂಡು ಥೇಟ್ ಪ್ರಖರ ಹಿಂದುತ್ವವಾದಿಯಂತೆ ಪ್ರಚೋದನಕಾರಿ ಭಾಷಣ ನೀಡಿದ್ದಾನೆ.

ಜೈ ಶ್ರೀ ರಾಮ್ ಘೋಷಣೆಯೊಂದಿಗೆ ತನ್ನ ಭಾಷಣ ಆರಂಭಿಸಿದ ಆತ  ಮುಸ್ಲಿಮರ ಮೇಲೆ ದಾಳಿಗೆ ಕರೆ ನೀಡುವುದರೊಂದಿಗೆ ಭಾಷಣ ಅಂತ್ಯಗೊಳಿಸಿದ್ದ.

"ಜಬ್ ಮುಲ್ಲೇ ಕಾಟೇ ಜಾಯೇಂಗೆ" ಎಂದು ತನ್ನ ಭಾಷಣ ಆತ ಆರಂಭಿಸುತ್ತಿದ್ದಂತೆಯೇ ನೆರೆದ ಸಭೆ "ತಬ್ ರಾಮ್ ರಾಮ್ ಚಿಲ್ಲಾಯೇಂಗೆ" ಎಂದು ಬೊಬ್ಬಿಟ್ಟಿದೆ.

ಕೇಸರಿ ಧ್ವಜಗಳನ್ನು ಹಿಡಿದುಕೊಂಡಿದ್ದ ಹಲವು ಜನರು ಸುತ್ತುವರಿದಿರುವಂತೆಯೇ ಈತ ವೇದಿಕೆ ಏರಿದ್ದ. ತನ್ನ ಭಾಷಣದಲ್ಲಿ ಆತ ಹಿಂದು ಮಂದಿಯನ್ನು ಪ್ರಚೋದಿಸಿದ್ದಾನೆ. "ನಿಮ್ಮಲ್ಲಿ ಐಫೋನ್ ಇಲ್ಲವೇ, ದೊಡ್ಡ ಕಾರುಗಳು ಇಲ್ಲವೇ? ಅವರು ನಿಮ್ಮ ಸೋದರಿಯರನ್ನು ಲಪಟಾಯಿಸಬಹುದಾದರೆ ನೀವೇಕೆ ಅವರ ಮಂದಿಯನ್ನು ಪಡೆಯಬಾರದು?" ಎಂದು ಆತ ಹೇಳಿರುವ ವೀಡಿಯೋ ಕೂಡ ಕಾಣಿಸಿಕೊಂಡಿದೆ.


SHARE THIS

Author:

0 التعليقات: