ಪರಸ್ಪರ ಪ್ರೀತಿ ಸಾಭೀತು ಪಡಿಸಲು ವಿಷ ಕುಡಿದ ದಂಪತಿಗಳು
ಡಿಜಿಟಲ್ ಡೆಸ್ಕ್: ಪಂಜಾಬಿನ ಮೋಗಾ ಜಿಲ್ಲೆಯಲ್ಲಿ ವಿವಾಹಿತ ದಂಪತಿಗಳು ಪರಸ್ಪರರ ಮೇಲಿನ ತಮ್ಮ ಪ್ರೀತಿಯನ್ನ ತೋರಿಸಲು ವಿಷ ಕುಡಿದರು. ಆದ್ರೆ, ವಿಷ ಕುಡಿಯುವಾಗ ಇಬ್ಬರೂ ತಮ್ಮ ಒಂದು ವರ್ಷದ ಮಗಳ ಭವಿಷ್ಯದ ಬಗ್ಗೆ ಯೋಚಿಸಲೂ ಇಲ್ಲ.
ಘಟನೆ ನಡೆದ ಮೂರು ದಿನಗಳಿಂದ ಪತಿ ಐಸಿಯುನಲ್ಲಿ ಜೀವನ್ಮರಣ ಹೋರಾಟದಲ್ಲಿರುವಾಗ ವಿಷ ಸೇವಿಸಿ ಪತ್ನಿ ಮೃತಪಟ್ಟಿದ್ದಾಳೆ. ಆದಾಗ್ಯೂ, ಪತಿ ಈಗ ಅಪಾಯದಿಂದ ಹೊರಗುಳಿದಿದ್ದಾನೆ. ಮುನ್ನೆಚ್ಚರಿಕೆಯಾಗಿ, ಅವರನ್ನ ಗುರುವಾರ ಸಂಜೆಯವರೆಗೆ ನಿಹಾಲ್ ಸಿಂಗ್ ವಾಲಾದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಇರಿಸಲಾಗಿದೆ.
ಪೊಲೀಸರ ಪ್ರಕಾರ, ದಂಪತಿಗಳು ಪರಸ್ಪರ ತಮ್ಮ ಪ್ರೀತಿಯನ್ನು ಸಾಬೀತು ಪಡಿಸಲು ತಂಪು ಪಾನೀಯದಲ್ಲಿ ಇಲಿ ಪಾಷಾಣ ಬೆರೆಸಿ ಕುಡಿದಿದ್ದಾರೆ. ಅದರ ನಂತ್ರ ಇಬ್ಬರೂ ಗಂಭೀರ ಸ್ಥಿತಿ ತಲುಪಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ದಂಪತಿಗಳು 5 ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರಿಗೆ ಒಂದು ವರ್ಷದ ಮಗಳು ಕೂಡ ಇದ್ದಾಳೆ. ಮೃತಳನ್ನು ಮನ್ ಪ್ರೀತ್ ಕೌರ್ ಮತ್ತು ಆಕೆಯ ಪತಿ ಹರ್ಜಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಆದ್ರೆ, ಸಧ್ಯ ಮನ್ ಪ್ರೀತ್ ಮೃತ ಪಟ್ಟಿದ್ದು, ಆಕೆಯ ಪತಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ ಹರ್ಜಿಂದರ್ ಅವ್ರು ಅಪಾಯದಿಂದ ಹೊರಗಿದ್ದಾರೆ ಎಂದು ಹರ್ಜಿಂದರ್ ಗೆ ಚಿಕಿತ್ಸೆ ನೀಡುವ ವೈದ್ಯರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ರಾಜ್ ಸಿಂಗ್, 'ಇಬ್ಬರೂ ಮನೆಯಲ್ಲಿ ಮೋಜು ಮಾಡುತ್ತಿದ್ದರು. ಆಟವಾಡುತ್ತಾ, ಪರಸ್ಪರರ ಪ್ರೀತಿಯ ಪರೀಕ್ಷೆಗೆ ಇಳಿಸಿದ್ದಾರೆ. ನಂತ್ರ ಇಬ್ಬರೂ ತಣ್ಣನೆಯ ಪಾನೀಯದಲ್ಲಿ ವಿಷ ಬೆರೆಸಿಕೊಂಡು ಕುಡಿದಿದ್ದಾರೆ. ಇದು ಮನ್ ಪ್ರೀತ್ ಸಾವಿಗೆ ಕಾರಣವಾಯಿತು' ಎಂದಿದ್ದಾರೆ.
0 التعليقات: