Thursday, 15 July 2021

ಪಂಪ್‌ವೆಲ್ ಮೇಲ್ಸೇತುವೆಯಿಂದ ಜಾರಿದ ಕಾರು


 ಪಂಪ್‌ವೆಲ್ ಮೇಲ್ಸೇತುವೆಯಿಂದ ಜಾರಿದ ಕಾರು

ಮಂಗಳೂರು: ನಗರದ ಪಂಪ್‌ವೆಲ್ ಮೇಲ್ಸೇತುವೆಯಿಂದ ಸರ್ವಿಸ್ ರಸ್ತೆಗೆ ಕಾರೊಂದು ಜಾರಿದ ಘಟನೆ ಗುರುವಾರ ಸಂಜೆ ನಡೆದಿದೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರೊಬ್ಬರಿಗೆ ಈ ಕಾರು ಸೇರಿದೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ಈ ಕಾರು ಆಗಮಿಸುತ್ತಿತ್ತು. ಎದುರಿನಿಂದ ವೇಗವಾಗಿ ವಾಹನವೊಂದು ಬಂದಿದೆ. ವಾಹನದ ವೇಗಕ್ಕೆ ರಸ್ತೆಯಲ್ಲಿ ನಿಂತಿದ್ದ ಮಳೆನೀರು ವೈದ್ಯರ ಕಾರಿನ ಮುಂಭಾಗದ ಗ್ಲಾಸ್ ಮೇಲೆ ಚೆಲ್ಲಿವೆ. ಈ ವೇಳೆ ನಿಯಂತ್ರಣ ತಪ್ಪಿದ ಕಾರು ಸರ್ವಿಸ್ ರಸ್ತೆಗೆ ಜಾರಿಕೊಂಡಿದೆ ಎಂದು ತಿಳಿದುಬಂದಿದೆ.

ಕೆಳ ರಸ್ತೆಗೆ ಜಾರಿದ ಕಾರನ್ನು ಸ್ಥಳೀಯರು ಸಹಕಾರದೊಂದಿಗೆ ಪೊಲೀಸರು ಸಮತಟ್ಟಾದ ರಸ್ತೆಗೆ ತಳ್ಳಿ ನಿಲ್ಲಿಸಿದರು. ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.


SHARE THIS

Author:

0 التعليقات: