Saturday, 17 July 2021

ಅಂಗರಕ್ಷಕನ ಸಾವಿನ ಪ್ರಕರಣ: ಸುವೇಂದು ಅಧಿಕಾರಿ ಮನೆ ಮೇಲೆ ಸಿಐಡಿ ದಾಳಿ


ಅಂಗರಕ್ಷಕನ ಸಾವಿನ ಪ್ರಕರಣ: ಸುವೇಂದು ಅಧಿಕಾರಿ ಮನೆ ಮೇಲೆ ಸಿಐಡಿ ದಾಳಿ

ಕೋಲ್ಕತಾ: 2018ರಲ್ಲಿ ಅಂಗರಕ್ಷಕನ ಸಾವಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ಸುವೇಂದು ಅಧಿಕಾರಿಯ ನಿವಾಸದ ಮೇಲೆ ಸಿಐಡಿ ಅಧಿಕಾರಿಗಳು ಮತ್ತೊಮ್ಮೆ ದಾಳಿ ಮತ್ತು ಶೋಧ ಕಾರ್ಯಾಚರಣೆ ನಡೆಸಿರುವುದಾಗಿ ವರದಿಯಾಗಿದೆ.

ಸುವೇಂದು ಅಧಿಕಾರಿ ಅಂಗರಕ್ಷಕನ ಹತ್ಯೆ 2018ರಲ್ಲಿ ಸಂಭವಿಸಿತ್ತು. ಹತ್ಯೆಯಾದ ಅಂಗರಕ್ಷಕನೊಂದಿಗೆ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು 4 ಸದಸ್ಯರ ಸಿಐಡಿ ತಂಡ ಶುಕ್ರವಾರ 7 ಗಂಟೆಗಳ ಕಾಲ ವಿಚಾರಣೆ ನಡೆಸಿದೆ ಎಂದು ವರದಿಯಾಗಿದೆ. ಬುಧವಾರವೂ ಸಿಐಡಿ ತಂಡ ಸುವೇಂದು ಅಧಿಕಾರಿಯ ಮನೆಗೆ ಆಗಮಿಸಿ ಅವರ ಕಾರು ಚಾಲಕರು ಹಾಗೂ ಅಲ್ಲಿ ಕೆಲಸ ಮಾಡುತ್ತಿದ್ದ ಇತರ ಸಿಬಂದಿಗಳ ವಿಚಾರಣೆ ನಡೆಸಿತ್ತು.

 ಅಲ್ಲದೆ, ಸುವೇಂದು ಸಹೋದರ, ಸಂಸದ ದಿಬ್ಯೇಂದು ಅಧಿಕಾರಿಯನ್ನೂ ವಿಚಾರಣೆ ನಡೆಸಿತ್ತು. ಸುವೇಂದು ಅಧಿಕಾರಿ ಟಿಎಂಸಿಯಲ್ಲಿದ್ದಾಗ ಅವರಿಗೆ ಅಂಗರಕ್ಷಕನಾಗಿ ನೇಮಕವಾಗಿದ್ದ ತಂಡದಲ್ಲಿದ್ದ ಶುಭ್ರತಾ ಚಕ್ರವರ್ತಿ, 2018ರಲ್ಲಿ ಸ್ವಯಂ ಗುಂಡುಹಾರಿಸಿಕೊಂಡು ಮೃತಪಟ್ಟಿರುವುದಾಗಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಹೊಸದಾಗಿ ಆರಂಭಿಸುವಂತೆ ಕೋರಿ ಚಕ್ರವರ್ತಿಯ ಪತ್ನಿ ಸುಪರ್ಣಾ ಚಕ್ರವರ್ತಿ ಕಾಂತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು


SHARE THIS

Author:

0 التعليقات: