Saturday, 10 July 2021

ಕೋವಿಡ್‌ಗೆ 9 ಬಲಿ; 218 ಮಂದಿಗೆ ಕೊರೋನ ಪಾಸಿಟಿವ್


ಕೋವಿಡ್‌ಗೆ 9 ಬಲಿ; 
218 ಮಂದಿಗೆ ಕೊರೋನ ಪಾಸಿಟಿವ್

ಮಂಗಳೂರು, ಜು.10: ದ.ಕ.ಜಿಲ್ಲೆಯಲ್ಲಿ ಶನಿವಾರ ಕೋವಿಡ್ ಸೋಂಕಿತರ ಮತ್ತು ಸಾವಿನ ಸಂಖ್ಯೆ ಹಾಗೂ ಕೋವಿಡ್ ಪಾಸಿಟಿವಿಟಿ ಪ್ರಮಾಣದಲ್ಲಿ ಯಥಾಸ್ಥಿತಿ ಇದೆ.

ಶನಿವಾರವೂ ಕೋವಿಡ್‌ಗೆ 9 ಮಂದಿ ಬಲಿಯಾಗಿದ್ದರೆ, 218 ಮಂದಿಯಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.2.71ರಿಂದ 2.69ಕ್ಕಿಳಿದಿದೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 1,308ಕ್ಕೇರಿದ್ದರೆ, ಕೊರೋನ ಸೋಂಕಿಗೊಳಗಾದ ವರ ಸಂಖ್ಯೆ 95,229ಕ್ಕೇರಿದೆ. ಅಲ್ಲದೆ 320 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಅದರಂತೆ ಈವರೆಗೆ ಗುಣಮುಖರಾದವರ ಸಂಖ್ಯೆ 91,626ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 2,295 ಸಕ್ರಿಯ ಪ್ರಕರಣವಿದೆ. ಜಿಲ್ಲೆಯಲ್ಲಿ ಈವರೆಗೆ 11,23,422 ಮಂದಿಯ ಗಂಟಲಿನ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 10,28,193 ಮಂದಿಯ ವರದಿ ನೆಗೆಟಿವ್ ಬಂದಿದೆ.


SHARE THIS

Author:

0 التعليقات: