Tuesday, 6 July 2021

ಜುಲೈ 8 ರಂದು ಕೇಂದ್ರ ಸಚಿವ ಸಂಪುಟ ಪುನರ್ ರಚನೆ ನಿರೀಕ್ಷೆ


 ಜುಲೈ 8 ರಂದು ಕೇಂದ್ರ ಸಚಿವ ಸಂಪುಟ ಪುನರ್ ರಚನೆ ನಿರೀಕ್ಷೆ

ಹೊಸದಿಲ್ಲಿ: ಬಹು ನಿರೀಕ್ಷಿತ ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಜುಲೈ 8 ರಂದು ನಡೆಯುವ ನಿರೀಕ್ಷೆ ಇದೆ  ಎಂದು ಮೂಲಗಳು ಮಂಗಳವಾರ ತಿಳಿಸಿವೆ ಎಂದು ANI  ವರದಿ ಮಾಡಿದೆ.

ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ , ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಡುವೆ ಸರಣಿ ಸಭೆಗಳ ನಂತರ ಶೀಘ್ರ ಸಂಪುಟ ಪುನರ್ ರಚನೆಯ ಕುರಿತು ಮಾತು ಕೇಳಿಬಂದಿತ್ತು.

ಈಗ ಒಂದು ತಿಂಗಳಿನಿಂದ ನಡ್ಡಾ ಅವರು ಪ್ರಧಾನಿ ನಿವಾಸಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ, ನಾಲ್ಕು ಮಂತ್ರಿಗಳನ್ನು ಬಿಹಾರದಿಂದ ಸೇರಿಸಿಕೊಳ್ಳುವ ಸಾಧ್ಯತೆಯಿದೆ.

ಸಂಪುಟದಲ್ಲಿ ಸೇರ್ಪಡೆಗೊಳ್ಳುವ ನಾಲ್ವರಲ್ಲಿ ಇಬ್ಬರು ಜನತಾದಳ (ಸಂಯುಕ್ತ), ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಬಂಡಾಯ ಗುಂಪಿನ  ಪಶುಪತಿ ಪರಾಸ್ ಹಾಗೂ  ಒಬ್ಬರು ಭಾರತೀಯ ಜನತಾ ಪಕ್ಷ (ಬಿಜೆಪಿ) ದವರು ಎಂದು ಮೂಲಗಳು ಎಎನ್‌ಐಗೆ ತಿಳಿಸಿವೆ.

ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹಾಗೂ  ಜ್ಯೋತಿರಾದಿತ್ಯ ಸಿಂಧಿಯಾ ಅವರಂತಹ ಹಲವಾರು ಹಿರಿಯ ನಾಯಕರಿಗೆ ಅವಕಾಶ ಕಲ್ಪಿಸಲಾಗುವುದು ಎಂಬ ಊಹಾಪೋಹಗಳಿವೆ. ಇತ್ತೀಚೆಗೆ ಉತ್ತರಾಖಂಡ ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು ಪ್ರಧಾನಿ ಅವರನ್ನು ಭೇಟಿಯಾದರು.

ಶಿವಸೇನೆ ಹಾಗೂ  ಶಿರೋಮಣಿ ಅಕಾಲಿ ದಳ ನಿರ್ಗಮನ,  ಜನ ಲೋಕ ಶಕ್ತಿ ಪಕ್ಷದ ರಾಮ್‌ವಿಲಾಸ್ ಪಾಸ್ವಾನ್ ಅವರ ನಿಧನದಿಂದಾಗಿ ಕೇಂದ್ರ ಸಂಪುಟದಲ್ಲಿ ಹಲವಾರು ಸಚಿವ ಸ್ಥಾನಗಳು ಖಾಲಿ ಇವೆ.


SHARE THIS

Author:

0 التعليقات: