Sunday, 18 July 2021

ಮಹಾರಾಷ್ಟ್ರದಲ್ಲಿ ಕಂದಕಕ್ಕೆ ಉರುಳಿ ಬಿದ್ದ ಕ್ರೂಸರ್ : 8 ಮಂದಿ ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ


ಮಹಾರಾಷ್ಟ್ರದಲ್ಲಿ ಕಂದಕಕ್ಕೆ ಉರುಳಿ ಬಿದ್ದ ಕ್ರೂಸರ್ : 8 ಮಂದಿ ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ

ನಂದೂರ್​ಬಾರ್: ಖಾಸಗಿ ಕ್ರೂಸರ್ ವಾಹನವೊಂದು ಕಂದಕದೊಳಗೆ ಬಿದ್ದ ಪರಿಣಾಮ, 8 ಮಂದಿ ಸಾವನ್ನಪ್ಪಿ, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಂದೂರ್​ಬಾರ್​ ಜಿಲ್ಲೆಯ ತೋರನ್​ಮಲ್​ ಕಣಿವೆಯ ಸಿಂದಿದಿಗರ್ ಘಾಟ್​ನಲ್ಲಿ ನಡೆದಿದೆ.

ಕಾರು ಜಿಲ್ಲೆಯ ತೋರಣಮಾಲ್ ಎಂಬ ಗಿರಿಧಾಮದಿಂದ ಸಿಂಧಿಮಾಲ್ ಗ್ರಾಮಕ್ಕೆ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ, ಅದು ರಸ್ತೆಯಿಂದ ಕೆಳಗಿಳಿದು ಕಮರಿಗೆ ಬಿದ್ದಿತು ಎಂದು ಪೊಲೀಸರು ತಿಳಿಸಿದ್ದಾರೆ, ಕೆಲವು ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ವಾಹನದಿಂದ ಜಿಗಿಯುವಲ್ಲಿ ಯಶಸ್ವಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂದಕದೊಳಗೆ ಬಿದ್ದು ಸಾವನ್ನಪ್ಪಿದವರ ಮೃತದೇಹಗಳನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಯುತ್ತಿದೆ.

ಮಸವಾದ್ ಪೊಲೀಸ್ ಠಾಣೆಯ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ ಮತ್ತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.


SHARE THIS

Author:

0 التعليقات: