7 ವಿಕೆಟ್ ಗಳಿಂದ ಸರಣಿ ಗೆದ್ದ ಶ್ರೀಲಂಕಾ
ಕೊಲಂಬೊ: ಭಾರತ-ಶ್ರೀಲಂಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಲಂಕಾ ಬೌಲಿಂಗ್ ದಾಳಿಗೆ ತತ್ತರಿಸಿರುವ ಟೀಂ ಇಂಡಿಯಾ 20 ಓವರ್ಗಳಲ್ಲಿ 8ವಿಕೆಟ್ ನಷ್ಟಕ್ಕೆ ಕೇವಲ 81 ರನ್ಗಳಿಕೆ ಮಾಡಿದೆ.
ಲಂಕಾ ಗೆಲುವಿಗೆ 82ರನ್ಗಳ ಸಾಧಾರಣ ಟಾರ್ಗೆಟ್ ನೀಡಿದೆ.ಲಂಕಾ ಪರ 4 ಓವರ್ ಎಸೆದ ಹಸರಂಗ 9ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದುಕೊಂಡು ಟೀಂ ಇಂಡಿಯಾಗೆ ವೈಫಲ್ಯಕ್ಕೆ ಕಾರಣವಾಗಿದ್ದಾರೆ.
ಆರಂಭಿಕ ಓವರ್ನಲ್ಲಿ ಶಿಖರ್ ಧವನ್ (0), ಗಾಯ್ಕವಾಡ(14), ಪಡಿಕ್ಕಲ್(9) ಹಾಗೂ ಸಂಜು ಸ್ಯಾಮನ್ಸ್(0) ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ನಿತೀಶ್ ರಾಣಾ ಕೂಡ 6ರನ್ಗಳಿಕೆ ಮಾಡಿ ಔಟ್ ಆದರು.
ಇದಾದ ಬಳಿಕ ಭುವನೇಶ್ವರ್ ಕುಮಾರ್(16) ಹಾಗೂ ಕುಲ್ದೀಪ್ ಯಾದವ್(23)ರನ್ಗಳಿಕೆ ಮಾಡಿ ತಂಡ 50ರನ್ ಗಡಿದಾಟುವಂತೆ ಮಾಡಿತು. ಬಳಿಕ ಬಂದ ಚಹರ್(5) ಹಾಗೂ ಸಕಾರಿಯಾ(5)ರನ್ಗಳಿಕೆ ಮಾಡಿದರು. ತಂಡ ಕೊನೆಯದಾಗಿ 20 ಓವರ್ಗಳಲ್ಲಿ 8ವಿಕೆಟ್ ಕಳೆದುಕೊಂಡು 81ರನ್ಗಳಿಕೆ ಮಾಡಿದ್ದು, ಲಂಕಾ ಗೆಲುವಿಗೆ 82ರನ್ ಟಾರ್ಗೆಟ್ ನೀಡಿದೆ.
0 التعليقات: