Tuesday, 20 July 2021

ಎಸ್ ವೈ ಎಸ್ ಬೆಳ್ಳಾರೆ ಸೆಂಟರ್ ವತಿಯಿಂದ 75 ಬಡ ಕುಟುಂಬಗಳಿಗೆ ಸುಮಾರು ಒಂದು ಲಕ್ಷ ಮೌಲ್ಯದ ಆಹಾರ ಸಾಮಗ್ರಿಗಳ ವಿತರಣೆ


 ಎಸ್ ವೈ ಎಸ್ ಬೆಳ್ಳಾರೆ ಸೆಂಟರ್ ವತಿಯಿಂದ 75 ಬಡ ಕುಟುಂಬಗಳಿಗೆ ಸುಮಾರು ಒಂದು ಲಕ್ಷ ಮೌಲ್ಯದ ಆಹಾರ ಸಾಮಗ್ರಿಗಳ ವಿತರಣೆ

ಬೆಳ್ಳಾರೆ: ಎಸ್.ವೈ.ಎಸ್ ಬೆಳ್ಳಾರೆ ಸೆಂಟರ್ ವತಿಯಿಂದ ಸೆಂಟರ್ ವ್ಯಾಪ್ತಿಯ ಹನ್ನೆರಡು ಬ್ರಾಂಚ್ ಗಳಿಂದ ಆಯ್ದ 75 ಬಡ ಕುಟುಂಬಗಳಿಗೆ ಸುಮಾರು ಒಂದು ಲಕ್ಷ ಮೌಲ್ಯದ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. 

ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯ ಜಬ್ಬಾರ್ ಹನೀಫಿ ಎಲ್ಲರನ್ನೂ ಸ್ವಾಗತಿಸಿ ಸೆಂಟರ್ ಅಧ್ಯಕ್ಷ  ಸತ್ತಾರ್ ಸಖಾಫಿ ಅಧ್ಯಕ್ಷೀಯ ಭಾಷಣ ಮಾಡಿದರು. ಹುಸೇನ್ ಸಖಾಫಿ, ಹನೀಫ್ ಸಖಾಫಿ, ಉಮ್ಮರ್ ಸೀಗೆಯಡಿ ಆಶಂಷಾ ಮಾತುಗಳನ್ನಾಡಿದರು. ದುವಾ ನೇತೃತ್ವವನ್ನು ದಾರುಲ್ ಹುದಾ ತಂಬಿನಮಕ್ಕಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಹಾಮಿದ್ ಅನ್ವರ್ ಅಲ್ ಅಹ್ದಲ್ ಸಖಾಫಿ ತಂಙಳ್ ರವರು ವಹಿಸಿ ಇದಕ್ಕಾಗಿ ಸಹಾಯ ಮಾಡಿದ ಸಹಕರಿಸಿದ ಎಲ್ಲರಿಗೂ ದುವಾ ನಿರ್ವಹಿಸಿದರು. ವೇದಿಕೆಯಲ್ಲಿ ಜಅಫರ್ ಸ್ವಾದಿಕ್ ತಂಙಳ್ ಮುಹಿಮ್ಮಾತ್, ದಾರುಲ್ ಹುದಾ ತಂಬಿನಮಕ್ಕಿ ಸಂಸ್ಥೆಯ ಮ್ಯಾನೇಜರ್ ಖಲೀಲ್ ಹಿಮಮಿ ಸಖಾಫಿ, ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬುಬಕ್ಕರ್ ಸೆಲೆಕ್ಟ್ ಉಪಸ್ಥಿತರಿದ್ದರು.

ಸೆಂಟರ್ ಕಾರ್ಯಕಾರಿ ಸಮಿತಿಯ ನಿರ್ದೇಶನದ ಮೇರೆಗೆ ಹನ್ನೆರಡು ಜನರನ್ನು ಒಳಗೊಂಡ ಒಂದು ಅಭಯ ಹಸ್ತ ಎಂಬ ಪ್ರತ್ಯೇಕ ಗ್ರೂಪ್ ರಚಿಸಿ ಈ ಕಾರ್ಯಕ್ರಮವನ್ನು ಮಾಡಲಾಯಿತು.ಹಲವು ದಾನಿಗಳ ಸಹಾಯದಿಂದ ಈ ಮೊತ್ತವನ್ನು ಶೇಕರಿಸಿ ಅತ್ಯಂತ ಕಷ್ಟದಿಂದ ಜೀವನ ನಡೆಸುವ ಉಸ್ತಾದ್ ರವರಿಗೂ, ಸ್ಥಳೀಯ ಬಡ ಕುಟುಂಬದವರಿಗೂ ದವಸಧಾನ್ಯಗಳ ಕಿಟ್ ವಿತರಿಸಲಾಯಿತು. 

ಇದಕ್ಕೆ ನೇತೃತ್ವ ನೀಡಿದ ಸೆಂಟರ್ ಅಧ್ಯಕ್ಷ ಸತ್ತಾರ್ ಸಖಾಫಿ, ಸಂಶುದ್ದೀನ್ ಝಂ ಝಂ, ಹನೀಫ್ ಹಾಜಿ ಇಂದ್ರಾಜೆ,ಕೆ ಎಚ್ ಹಾಜಿ ನೆಕ್ಕಿಲ, ಜಬ್ಬಾರ್ ಹನೀಫಿ, ಅಬುಬಕ್ಕರ್ ಸೆಲೆಕ್ಟ್, ಅಶ್ರಫ್ ನೇಲ್ಯಮಜಲ್,K.C ಎಣ್ಮೂರ್, ಉಮ್ಮರ್ ಕುಳಾಯಿತೋಡಿ, ಉಮ್ಮರ್ ಸೀಗೆಯಡಿ,ಇಕ್ಬಾಲ್ ಅಲೆಕ್ಕಾಡಿ,P.M ಸಮಹಾದಿ, ಇವರ  ಪರಿಶ್ರಮದಿಂದ ಸುಮಾರು ಎಪ್ಪತ್ತೈದು ಕುಟುಂಬಕ್ಕೆ ಕಿಟ್ ವಿತರಿಸಲು ಸಾಧ್ಯವಾಗಿದೆ ಎಂದು ಸಂಘಟನೆಯವರು ತಿಳಿಸಿದರು . ದಾನಿಗಳು ಈ ಸಂಭ್ರಮಕ್ಕೆ ಕೈ ಜೋಡಿಸಿ ಸಹಕರಿಸಿದ್ದಾರೆ ಎಂದು ಸಂಘಟನೆಯ ಹಿರಿಯರು ಪ್ರಶಂಸಿದರು. 





SHARE THIS

Author:

0 التعليقات: