Tuesday, 6 July 2021

ಯೆಸ್‌ ಬ್ಯಾಂಕ್‌ಗೆ ಬರೋಬ್ಬರಿ 712 ಕೋಟಿ ರೂ ವಂಚನೆ; 11 ಮಂದಿ ವಿರುದ್ಧ ಎಫ್‌ಐಆರ್


ಯೆಸ್‌ ಬ್ಯಾಂಕ್‌ಗೆ ಬರೋಬ್ಬರಿ 712 ಕೋಟಿ ರೂ ವಂಚನೆ; 11 ಮಂದಿ ವಿರುದ್ಧ ಎಫ್‌ಐಆರ್

ಬೆಂಗಳೂರು, ಜುಲೈ 06: ಯೆಸ್‌ ಬ್ಯಾಂಕ್‌ಗೆ 712 ಕೋಟಿ ರೂಪಾಯಿ ವಂಚನೆ ಎಸಗಿರುವ ಪ್ರಕರಣದಲ್ಲಿ ಹನ್ನೊಂದು ಮಂದಿ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಯೆಸ್‌ ಬ್ಯಾಂಕ್‌ನಿಂದ ಬರೋಬ್ಬರಿ 712 ಕೋಟಿ ರೂಪಾಯಿ ಸಾಲ ಪಡೆದ ಆರೋಪಿಗಳು ಸಾಲ ಹಿಂತಿರುಗಿಸಿರಲಿಲ್ಲ. ಕಳೆದೆರೆಡು ವರ್ಷದಿಂದ ಇಎಂಐ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಯಸ್ ಬ್ಯಾಂಕ್ ಮ್ಯಾನೇಜರ್ ಆಶೀಶ್ ವಿನೋದ್ ಜೋಶಿ ಮಂಗಳವಾರ ಕಬ್ಬನ್ ಪಾರ್ಕ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ನಿತೀಶ್ ರಿಯಲ್ ಎಸ್ಟೇಟ್ ಕಂಪನಿ ಹೆಸರಿನಲ್ಲಿ ಈ ಹನ್ನೊಂದು ಆರೋಪಿಗಳು ಸಾಲ ಪಡೆದುಕೊಂಡಿದ್ದರು. 2016ರಿಂದಲೂ ಇವರು ಯೆಸ್‌ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡುತ್ತಿದ್ದರು. 2019ರವರೆಗೆ ಕಂತು ಕಟ್ಟಿದ್ದರು. 2019ರ ಡಿಸೆಂಬರ್‌ನಿಂದ ಕಂತು ಕಟ್ಟುವುದನ್ನು ನಿಲ್ಲಿಸಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಹಣ ಕಟ್ಟುವುದು ಸಾಧ್ಯವಿಲ್ಲವೆಂದು ಆರೋಪಿಗಳು ಹೇಳಿದ್ದರು. ಇದೀಗ ಈ ಹನ್ನೊಂದು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


SHARE THIS

Author:

0 التعليقات: