7 ಕೋಟಿ ತಲುಪಿದ ಪ್ರಧಾನಿ ಮೋದಿಯ ಟ್ವಿಟರ್ ಫಾಲೋವರ್ಸ್ ಸಂಖ್ಯೆ
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಗೆ ಈಗ ಟ್ವಿಟರ್ ನಲ್ಲಿ 7 ಕೋಟಿ ಫಾಲೋವರ್ಸ್ ಇದ್ದು ಈ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿದ ಜಾಗತಿಕ ನಾಯಕರಲ್ಲಿ ಅವರು ಮೊದಲ ಸ್ಥಾನದಲ್ಲಿದ್ದಾರೆ ಎಂದು ವರದಿಯಾಗಿದೆ.
ಮೋದಿ ಅವರ ನಂತರದ ಸ್ಥಾನದಲ್ಲಿ ಪೋಪ್ ಫ್ರಾನ್ಸಿಸ್ ಅವರಿದ್ದು, ಅವರಿಗೆ ಟ್ವಿಟರ್ನಲ್ಲಿ 5.3 ಕೋಟಿ ಅನುಯಾಯಿಗಳಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಟ್ವಿಟರ್ನಲ್ಲಿ 3.9 ಕೋಟಿ ಫಾಲೋವರ್ಸ್ ಇದ್ದಾರೆ.
ಭಾರತದಲ್ಲಿ ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ವಿಟ್ಟರ್ನಲ್ಲಿ 2.63 ಕೋಟಿ ಫಾಲೋವರ್ಸ್ ಇದ್ದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ 1.94 ಕೋಟಿ ಫಾಲೋವರ್ಸ್ ಇದ್ದಾರೆ.
0 التعليقات: