Thursday, 8 July 2021

ರಾಜ್ಯದಲ್ಲಿಂದು ಕೋವಿಡ್ ಗೆ 62 ಮಂದಿ ಬಲಿ: 2,530 ಪಾಸಿಟಿವ್


ರಾಜ್ಯದಲ್ಲಿಂದು ಕೋವಿಡ್ ಗೆ 62 ಮಂದಿ ಬಲಿ: 2,530 ಪಾಸಿಟಿವ್

ಬೆಂಗಳೂರು, ಜು.8: ರಾಜ್ಯದಲ್ಲಿ ಗುರುವಾರ 2,530 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 62 ಜನರು ಸೋಂಕಿಗೆ ಬಲಿಯಾಗಿದ್ದು, 3,344 ಜನರು ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 28,64,868ಕ್ಕೆ ತಲುಪಿದೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 35,663ಕ್ಕೆ ತಲುಪಿದೆ.

ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 38,729ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

62 ಸೋಂಕಿತರು ಬಲಿ: ಬಳ್ಳಾರಿ 11, ಬೆಳಗಾವಿ 2, ಬೆಂಗಳೂರು ನಗರ 9, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 2, ದಕ್ಷಿಣ ಕನ್ನಡ 8, ದಾವಣಗೆರೆ 4, ಧಾರವಾಡ 5, ಹಾಸನ 1, ಕೋಲಾರ 1, ಮಂಡ್ಯ 2, ಮೈಸೂರು 6, ರಾಮನಗರ 1, ಶಿವಮೊಗ್ಗ 5, ತುಮಕೂರು 3, ಉಡುಪಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.



SHARE THIS

Author:

0 التعليقات: