ಏರ್ ಕಾರ್ಗೋ ಅಧಿಕಾರಿಗಳ ಕಾರ್ಯಾಚರಣೆ : 6 ಕೋಟಿ ಮೌಲ್ಯದ ರಕ್ತಚಂದನ ವಶ
ದೇವನಹಳ್ಳಿ: ಅಕ್ರಮವಾಗಿ ಸರಕು ಸಾಗಿಣಿಕೆಯ ಮೂಲಕ ವಿದೇಶಕ್ಕೆ ರಪ್ತು ಮಾಡಲು ಯತ್ನಿಸಿದ ರಕ್ತ ಚಂದನವನ್ನ ಏರ್ ಕಾರ್ಗೋ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಮೂಲಕ ದುಬೈಗೆ ಕೋಟಿ ಕೋಟಿ ಬೆಲೆ ಬಾಳುವ ರಕ್ತ ಚಂದನವನ್ನ ಕೆಲವರು ಪೈಪುಗಳೆಂದು ಹೇಳಿಕೊಂಡು ಪಾರ್ಸಲ್ ಮಾಡಿದ್ದಾರೆ. ಆದರೆ ಪಾರ್ಸಲ್ ಮೇಲೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಪಾರ್ಸಲ್ ಅನ್ನ ಒಪನ್ ಮಾಡಿ ನೋಡಿದಾಗ ಅದರಲ್ಲಿ ಆರು ಕೋಟಿಗೂ ಅಧಿಕ ಮೌಲ್ಯದ ರಕ್ತ ಚಂದನವನ್ನ ಪಾರ್ಸಲ್ ಮಾಡ್ತಿರೂದು ಬೆಳಕಿಗೆ ಬಂದಿದೆ.
ಹೀಗಾಗಿ ಪಾರ್ಸಲ್ ನಲ್ಲಿದ್ದ ರಕ್ತ ಚಂದನದ ತುಂಡುಗಳನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಯಾರು ಅಕ್ರಮವಾಗಿ ನಿಷೇದಿತ ರಕ್ತ ಚಂದನ ರವಾನೆ ಮಾಡ್ತಿದ್ರು ಅನ್ನೋ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
0 التعليقات: