ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದವರಿಗೆ 5 ಕೋಟಿ : ಸಿಎಂ ಬಿಎಸ್ವೈ ಘೋಷಣೆ
ಬೆಂಗಳೂರು : ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವ ರಾಜ್ಯದ ಕ್ರೀಡಾಳುಗಳಿಗೆ ಭರ್ಜರಿ ಬಹುಮಾನ ಕಾದಿದೆ. ಚಿನ್ನ ಗೆದ್ದವರಿಗೆ 5 ಕೋಟಿ ರೂ., ಬೆಳ್ಳಿ ಗೆದ್ದವರಿಗೆ 3 ಕೋಟಿ ರೂ. ಹಾಗೂ ಕಂಚು ಗೆದ್ದವರಿಗೆ 2 ಕೋಟಿ ರೂ. ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲು ರಾಜ್ಯ ದಿಂದ ಆಯ್ಕೆಯಾಗಿರುವ ಮೂವರು ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಘೋಷಣೆ ಮಾಡಲಾಗಿದ್ದ ತಲಾ 10 ಲಕ್ಷ ರೂ. ಪ್ರೋತ್ಸಾಹಧನವನ್ನು ಬುಧವಾರ ಸಿಎಂ ವಿತರಿಸಿದರು. ಶ್ರೀಹರಿ ನಟರಾಜ್ ಅವರಿಗೆ ಪ್ರೋತ್ಸಾಹಧನ ಚೆಕ್ ಹಾಗೂ ಅದಿತಿ ಅಶೋಕ್, ಪೌವಾದ್ ಮಿರ್ಜಾ ಅವರ ಪರವಾಗಿ ಅವರ ಪಾಲಕರಿಗೆ ತಲಾ 10 ಲ.ರೂ.ಗಳ ಚೆಕ್ ವಿತರಿಸಲಾಯಿತು
0 التعليقات: