ಬಾಂಗ್ಲಾದೇಶದ ಕಾರ್ಖಾನೆಯಲ್ಲಿ ಬೆಂಕಿ ದುರಂತ: ಮೃತರ ಸಂಖ್ಯೆ 52ಕ್ಕೇರಿಕೆ
ರೂಪ್ ಗಂಜ್(ಬಾಂಗ್ಲಾದೇಶ): ಬಾಂಗ್ಲಾದೇಶದ ಆರು ಮಹಡಿಯ ಜ್ಯೂಸ್ ಕಾರ್ಖಾನೆಯೊಂದರಲ್ಲಿ ಗುರುವಾರ ಸಂಜೆ 5ರ ಸುಮಾರಿಗೆ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಜ್ವಾಲೆಯಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ 52 ಕ್ಕೇರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿ ದುರಂತದಲ್ಲಿ ಸುಮಾರು 30 ಜನರು ಗಾಯಗೊಂಡಿದ್ದು, ಸಂತ್ರಸ್ತರ ಸಂಬಂಧಿಕರು ಹಾಗೂ ಇತರ ಕಾರ್ಮಿಕರು ಆಹಾರ ಕಾರ್ಖಾನೆಯ ಹೊರಗೆ ಆತಂಕದಿಂದ ಕಾಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಮಧ್ಯಾಹ್ನ ಢಾಕಾ ಹೊರಗಿನ ಕೈಗಾರಿಕಾ ಪಟ್ಟಣವಾದ ರೂಪ್ ಗಂಜ್ ನಲ್ಲಿರುವ ಆಹಾರ ಹಾಗೂ ಪಾನೀಯ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 24 ಗಂಟೆಗಳ ನಂತರವೂ ಬೆಂಕಿ ಉಲ್ಬಣಗೊಂಡಿದೆ.
ಫೆಬ್ರವರಿ 2019 ರಲ್ಲಿ ರಾಸಾಯನಿಕಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಢಾಕಾ ಅಪಾರ್ಟ್ಮೆಂಟ್ನಲ್ಲಿ ಅಗ್ನಿ ದುರಂತದಿಂದ ಕನಿಷ್ಠ 70 ಜನರು ಸಾವನ್ನಪ್ಪಿದ್ದರು.
0 التعليقات: