Saturday, 10 July 2021

ಪೆಟ್ರೋಲ್ 35 ಪೈಸೆ, ಡೀಸೆಲ್ 26 ಪೈಸೆ ಏರಿಕೆ


ಪೆಟ್ರೋಲ್ 35 ಪೈಸೆ, ಡೀಸೆಲ್ 26 ಪೈಸೆ ಏರಿಕೆ

ಹೊಸದಿಲ್ಲಿ, ಜು. 9: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಶನಿವಾರ ಅನುಕ್ರಮವಾಗಿ 35 ಪೈಸೆ ಹಾಗೂ 26 ಪೈಸೆ ಏರಿಕೆಯಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ನ ಬೆಲೆ ಕಳೆದ 68 ದಿನಗಳಲ್ಲಿ ಏರಿಕೆಯಾಗುತ್ತಿರುವುದು ಇದು 38ನೇ ಬಾರಿ.

ದಿಲ್ಲಿಯಲ್ಲಿ ಈಗ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100.91 ರೂ. ಹಾಗೂ ಡೀಸೆಲ್ ಬೆಲೆ 89.88 ರೂ. ಮುಂಬೈಯಲ್ಲಿ ಈಗ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 106.93 ರೂ. ಹಾಗೂ ಡೀಸೆಲ್ ಬೆಲೆ 97.46 ರೂ. ರಾಜಸ್ಥಾನದ ಗಂಗಾನಗರದಲ್ಲಿ ಅತ್ಯಧಿಕ ತೈಲ ಬೆಲೆ ದಾಖಲಾಗಿದೆ. ಇಲ್ಲಿ ಪೆಟ್ರೋಲ್ ಪಂಪ್ಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 112.24 ರೂ. ಹಾಗೂ ಡೀಸೆಲ್ ಬೆಲೆ 103.15ಕ್ಕೆ ತಲುಪಿದೆ. 


SHARE THIS

Author:

0 التعليقات: