Sunday, 18 July 2021

ಮಳೆಗೆ ತತ್ತರಿಸಿದ ಮುಂಬೈ : ಹಲವೆಡೆ ಕಟ್ಟಡ ಕುಸಿದು 32 ಮಂದಿ ಸಾವು


ಮಳೆಗೆ ತತ್ತರಿಸಿದ ಮುಂಬೈ : 
ಹಲವೆಡೆ ಕಟ್ಟಡ ಕುಸಿದು 32 ಮಂದಿ ಸಾವು

ಮುಂಬಯಿ: ಮಹಾನಗರಿ ಮುಂಬಯಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಮಳೆ ಸಂಬಂಧಿ ಅನಾಹುತಗಳಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ.

ಕಳೆದ ಶನಿವಾರ ೨೦೦ ಮೀ ಮಳೆಯಾಗಿದ್ದು, ಹವಾಮಾನ ಇಲಾಖೆಯು ನಗರದಲ್ಲಿ 'ರೆಡ್‌ ಅಲರ್ಟ್‌' ಘೋಷಿಸಿದ್ದು, ಸೋಮವಾರ ಮುಂಜಾನೆವರೆಗೂ ಇದೇ ಪ್ರಮಾಣದ ಮಳೆಯಾಗುವ ಎಚ್ಚರಿಕೆ ನೀಡಿದೆ.

ಈ ಪೈಕಿ 23 ಮಂದಿ ಕಟ್ಟಡಗಳ ಕೆಳಗೆ ಸಿಲುಕಿ ಮೃತಪಟ್ಟಿದ್ದಾರೆ. ಉಳಿದವರು ವಿದ್ಯುತ್‌ ಶಾಕ್‌, ಮರ ಉರುಳಿ ಬಿದ್ದು ಅಸುನೀಗಿದ್ದಾರೆ. ಭಾರತ್‌ನಗರ ಎಂಬಲ್ಲಿ ಗುಡ್ಡದ ಮೇಲಿದ್ದ ಮನೆ ಕುಸಿದು 17 ಜನ ಮೃತಪಟ್ಟರೆ, ವಿಕ್ರೋಲಿಯಲ್ಲಿ ಗುಡಿಸಲು ಕುಸಿದು ಏಳು ಮಂದಿ ಅಸುನೀಗಿದ್ದಾರೆ. 11 ಕಡೆ ಗೋಡೆ, ಕಟ್ಟಡ ಕುಸಿತದ ಅನಾಹುತಗಳು ಸಂಭವಿಸಿವೆ.

ಛತ್ರಪತಿ ಶಿವಾಜಿ ಮಹಾರಾಜ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ 9 ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಜತೆಗೆ ಅನೇಕ ವಿಮಾನಗಳ ಮಾರ್ಗಗಳನ್ನು ಕೂಡ ಬದಲಾವಣೆ ಮಾಡಲಾಗಿತ್ತು. ರೈಲು ಹಳಿಗಳ ಮೇಲೆ ನೀರು ನಿಂತಿದ್ದರಿಂದ ಕೆಲಕಾಲ ಸ್ಥಳೀಯ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.



SHARE THIS

Author:

0 التعليقات: