Tuesday, 27 July 2021

ಭಾರತ ಸೇರಿ 'ಕೆಂಪು ಪಟ್ಟಿ' ದೇಶಗಳಿಗೆ ಭೇಟಿ ನೀಡಿದ ನಾಗರಿಕರಿಗೆ 3 ವರ್ಷ ಪ್ರಯಾಣ ನಿಷೇಧ ಹೇರಿದ ಸೌದಿ ಅರೇಬಿಯಾ


ಭಾರತ ಸೇರಿ 'ಕೆಂಪು ಪಟ್ಟಿ' ದೇಶಗಳಿಗೆ ಭೇಟಿ ನೀಡಿದ ನಾಗರಿಕರಿಗೆ 3 ವರ್ಷ ಪ್ರಯಾಣ ನಿಷೇಧ ಹೇರಿದ ಸೌದಿ ಅರೇಬಿಯಾ

ಡಿಜಿಟಲ್‌ ಡೆಸ್ಕ್:‌ ಕೊರೊನಾ ವೈರಸ್ ಹರಡುವಿಕೆ ಮತ್ತು ಅದರ ಹೊಸ ರೂಪಾಂತರಗಳನ್ನ ತಡೆಯುವ ಪ್ರಯತ್ನಗಳ ಅಡಿಯಲ್ಲಿ ಸೌದಿ ಅರೇಬಿಯಾ ರಾಜ್ಯದ 'ಕೆಂಪು ಪಟ್ಟಿ'ಯಲ್ಲಿರುವ ದೇಶಗಳಿಗೆ ಪ್ರಯಾಣಿಸುವ ನಾಗರಿಕರ ಮೇಲೆ ಮೂರು ವರ್ಷಗಳ ಪ್ರಯಾಣ ನಿಷೇಧವನ್ನ ಹೇರಲಿದೆ.

ಮಾರ್ಚ್ 2020ರ ನಂತರ ಮೊದಲ ಬಾರಿಗೆ ಅಧಿಕಾರಿಗಳಿಂದ ಪೂರ್ವಾನುಮತಿ ಇಲ್ಲದೆ ವಿದೇಶಕ್ಕೆ ಪ್ರಯಾಣಿಸಲು ಮೇ ತಿಂಗಳಲ್ಲಿ ಅನುಮತಿ ಪಡೆದ ಕೆಲವು ಸೌದಿ ನಾಗರಿಕರು ಪ್ರಯಾಣ ನಿಯಮಗಳನ್ನ ಉಲ್ಲಂಘಿಸಿದ್ದಾರೆ ಎಂದು ಹೆಸರಿಸದ ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿರುವುದನ್ನು ಅದು ಉಲ್ಲೇಖಿಸಿದೆ. ಇನ್ನು 'ಯಾರೇ ಭಾಗಿಯಾಗಿದ್ದರೂ ಅವ್ರು ಹಿಂದಿರುಗಿದ ನಂತ್ರ ಕಾನೂನುಬದ್ಧ ಉತ್ತರದಾಯಿತ್ವ ಮತ್ತು ಭಾರಿ ದಂಡಗಳಿಗೆ ಒಳಗಾಗುತ್ತಾರೆ ಮತ್ತು ಅವರನ್ನ ಮೂರು ವರ್ಷಗಳ ಕಾಲ ಪ್ರಯಾಣದಿಂದ ನಿಷೇಧಿಸಲಾಗುವುದು' ಎಂದು ಅಧಿಕಾರಿ ಹೇಳಿದರು.

ಅಂದ್ಹಾಗೆ, ಅಫ್ಘಾನಿಸ್ತಾನ, ಅರ್ಜೆಂಟೀನಾ, ಬ್ರೆಜಿಲ್, ಈಜಿಪ್ಟ್, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ಲೆಬನಾನ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಟರ್ಕಿ, ವಿಯೆಟ್ನಾಂ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಹಲವಾರು ದೇಶಗಳಿಗೆ ಪ್ರಯಾಣ ಅಥವಾ ಸಾಗಣೆಯನ್ನು ಸೌದಿ ಅರೇಬಿಯಾ ನಿಷೇಧಿಸಿದೆ.

'ಸಾಂಕ್ರಾಮಿಕ ರೋಗವನ್ನು ಇನ್ನೂ ನಿಯಂತ್ರಿಸದ ಅಥವಾ ಹೊಸ ತಳಿಗಳು ಹರಡಿರುವ ಯಾವುದೇ ರಾಜ್ಯಗಳಿಗೆ ನೇರವಾಗಿ ಅಥವಾ ಬೇರೆ ದೇಶದ ಮೂಲಕ ಪ್ರಯಾಣಿಸುವುದನ್ನ ನಾಗರಿಕರು ಇನ್ನೂ ನಿಷೇಧಿಸಲಾಗಿದೆ ಎಂದು ಆಂತರಿಕ ಸಚಿವಾಲಯ ಒತ್ತಿ ಹೇಳುತ್ತದೆ' ಎಂದು ಅಧಿಕಾರಿ ಹೇಳಿದರು.


SHARE THIS

Author:

0 التعليقات: