Monday, 12 July 2021

ಡೀಸೆಲ್ ಬೆಲೆ ಸ್ಥಿರ, ಪೆಟ್ರೋಲ್ ಬೆಲೆ ಮತ್ತೆ 29 ಪೈಸೆ ಏರಿಕೆ!


ಡೀಸೆಲ್ ಬೆಲೆ ಸ್ಥಿರ, ಪೆಟ್ರೋಲ್ ಬೆಲೆ ಮತ್ತೆ 29 ಪೈಸೆ ಏರಿಕೆ!


 ದೇಶದಲ್ಲಿ ತೈಲ ಬೆಲೆ ನಾಗಾಲೋಟ ಮುಂದುವರೆದಿದೆ. ಪೆಟ್ರೋಲ್ ಮತ್ತು ಡೀಸೆಲ್​ ಬೆಲೆಯನ್ನು ಇಂದು ಮತ್ತೆ ಹೆಚ್ಚಿಸಲಾಗಿದೆ. ಪೆಟ್ರೋಲ್ 29 ಪೈಸೆಗಳಷ್ಟು ದುಬಾರಿಯಾದರೆ, ಡೀಸೆಲ್ ಬೆಲೆ ಸ್ಥಿರವಾಗಿದೆ. ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಮಂಗಳವಾರ ಪ್ರತಿ ಲೀಟರ್‌ಗೆ 101.48 ರೂ. ಅದೇ ಸಮಯದಲ್ಲಿ ಡೀಸೆಲ್ ಅನ್ನು ಲೀಟರ್​ಗೆ 89.72 ರೂ.ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್​ಗೆ 104.58 ರೂ ಮತ್ತು ಡೀಸೆಲ್ 95.26 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ, ದೇಶದ 17 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಲಡಾಖ್, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ತಮಿಳುನಾಡು, ಬಿಹಾರ, ಕೇರಳ, ಪಂಜಾಬ್, ಸಿಕ್ಕಿಂ, ದೆಹಲಿ, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ಈ 17 ರಾಜ್ಯಗಳಲ್ಲಿ ಪೆಟ್ರೋಲ್ ಇದೀಗ ದುಬಾರಿಯಾಗಿದೆ. 13 ಜುಲೈ 2021 ಭಾರತದ ವಿವಿಧ ನಗರದಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ >> ದೆಹಲಿ - ಪೆಟ್ರೋಲ್ ರೂ 101.48 ಮತ್ತು ಡೀಸೆಲ್ ಲೀಟರ್‌ಗೆ 89.72 ರೂ

 ಮುಂಬೈ - ಪೆಟ್ರೋಲ್ ರೂ 107.49 ಮತ್ತು ಡೀಸೆಲ್ ಲೀಟರ್‌ಗೆ 97.29 ರೂ

 ಚೆನ್ನೈ - ಪೆಟ್ರೋಲ್ ರೂ 101.96 ಮತ್ತು ಡೀಸೆಲ್ ಲೀಟರ್‌ಗೆ 94.39 ರೂ

 ಕೋಲ್ಕತಾ - ಪೆಟ್ರೋಲ್ ರೂ 101.30 ಮತ್ತು ಡೀಸೆಲ್ ಲೀಟರ್‌ಗೆ 92.97 ರೂ

 ಬೆಂಗಳೂರು - ಪೆಟ್ರೋಲ್ ರೂ 104.58 ಮತ್ತು ಡೀಸೆಲ್ ಲೀಟರ್‌ಗೆ 95.26 ರೂ>> ಲಕ್ನೋ - ಪೆಟ್ರೋಲ್ ರೂ 98.30 ಮತ್ತು ಡೀಸೆಲ್ ಲೀಟರ್‌ಗೆ 90.27 ರೂ>> ಪಾಟ್ನಾ - ಪೆಟ್ರೋಲ್ 103.47 ಮತ್ತು ಡೀಸೆಲ್ ಲೀಟರ್‌ಗೆ 95.46 ರೂ

 ಭೋಪಾಲ್ - ಪೆಟ್ರೋಲ್ ರೂ 109.53 ಮತ್ತು ಡೀಸೆಲ್ ಲೀಟರ್‌ಗೆ 98.67 ರೂ

ಜೈಪುರ - ಪೆಟ್ರೋಲ್ ರೂ .108.03 ಮತ್ತು ಡೀಸೆಲ್ ರೂ .99.02

 ಗುರುಗ್ರಾಮ್ - ಪೆಟ್ರೋಲ್ ರೂ 98.85 ಮತ್ತು ಡೀಸೆಲ್ ಲೀಟರ್‌ಗೆ 90.47 ರೂ


SHARE THIS

Author:

0 التعليقات: