Tuesday, 6 July 2021

ರಷ್ಯಾ: ಸಂಪರ್ಕ ಕಳೆದುಕೊಂಡ 28 ಪ್ರಯಾಣಿಕರಿದ್ದ ವಿಮಾನ


 ರಷ್ಯಾ: ಸಂಪರ್ಕ ಕಳೆದುಕೊಂಡ 28 ಪ್ರಯಾಣಿಕರಿದ್ದ ವಿಮಾನ

ಮಾಸ್ಕೋ: ರಷ್ಯಾದ ಪೂರ್ವ  ಪ್ರದೇಶದಲ್ಲಿ 28 ಜನರನ್ನು ಹೊತ್ತ ಪ್ರಯಾಣಿಕರ ವಿಮಾನ ವೊಂದು ಸಂಪರ್ಕ ಕಳೆದುಕೊಂಡಿದೆ ಎಂದು ತುರ್ತು ಸೇವೆಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ಮಂಗಳವಾರ ತಿಳಿಸಿವೆ.

ಎಎನ್ -26 ವಿಮಾನವು ಕಮ್ಚಟ್ಕಾ ಪೆನಿನ್ಸುಲಾದ ಪೆಟ್ರೊಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿಯಿಂದ ಪಲಾನಾಗೆ ಹಾರಾಟ ನಡೆಸುತ್ತಿದ್ದಾಗ ಅದು ನಿಗದಿತ ಕರೆ ಮಾಡಲಿಲ್ಲ. ವಿಮಾನ ಇಳಿಯಲು ಪ್ರಯತ್ನಿಸುತ್ತಿದ್ದಾಗ ವಾಯು ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕವನ್ನು ಕಳೆದುಕೊಂಡಿತು ಎಂದು ಇಂಟರ್ಫ್ಯಾಕ್ಸ್, ಆರ್ ಐ ಎ ನೊವೊಸ್ಟಿ ಮತ್ತು ಟಾಸ್ ಏಜೆನ್ಸಿಗಳು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.

ವಿಮಾನದಲ್ಲಿ ಆರು ಸಿಬ್ಬಂದಿಗಳು ಸೇರಿದಂತೆ 28 ಮಂದಿ  ಪ್ರಯಾಣಿಸುತ್ತಿದ್ದರು.  ಪ್ರಯಾಣಿಕರಲ್ಲಿ ಒಬ್ಬರು ಅಥವಾ ಇಬ್ಬರು ಮಕ್ಕಳಿದ್ದಾರೆ ಎಂದು ವರದಿ ತಿಳಿಸಿದೆ.

ಶೋಧಕಾರ್ಯ ಆರಂಭಿಸಲಾಗಿದ್ದು ಇದಕ್ಕೆ ಕನಿಷ್ಠ ಎರಡು ಹೆಲಿಕಾಪ್ಟರ್‌ಗಳನ್ನು ಬಳಸಲಾಗಿದ್ದು, ರಕ್ಷಣಾ ಕಾರ್ಯಕರ್ತರು ಸರ್ವಸನ್ನದ್ದರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.


SHARE THIS

Author:

0 التعليقات: