Sunday, 18 July 2021

ಮೊದಲ ಏಕದಿನ ಪಂದ್ಯ: ಟೀಂ ಇಂಡಿಯಾಗೆ 263 ರನ್ ಗಳ ಗುರಿ ನೀಡಿದ ಶ್ರೀಲಂಕಾ


ಮೊದಲ ಏಕದಿನ ಪಂದ್ಯ: ಟೀಂ ಇಂಡಿಯಾಗೆ 263 ರನ್ ಗಳ ಗುರಿ ನೀಡಿದ ಶ್ರೀಲಂಕಾ

ಕೊಲಂಬೋ: ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 262 ರನ್ ಪೇರಿಸಿದೆ.

ಕೊಲಂಬೋದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 262 ರನ್ ಪೇರಿಸಿದ್ದು ಟೀಂ ಇಂಡಿಯಾಗೆ ಗೆಲ್ಲಲು 263 ರನ್ ಗುರಿ ನೀಡಿದೆ.

ಲಂಕಾ ಪರ ಅವಿಷ್ಕಾ ಫೆರ್ನಾಂಡೋ 32, ಮಿನೊಡ್ ಭಾನುಕಾ 27, ಭಾನುಕಾ ರಾಜಪಕ್ಸೆ 24, ಚರಿತಾ ಅಸಾಲಂಕಾ 38, ದಸುನ್ ಶನಕಾ 39 ಮತ್ತು ಚಮಿಕಾ ಕರುಣಾರತ್ನೆ ಅಜೇಯ 43 ರನ್ ಬಾರಿಸಿದ್ದಾರೆ.

ಭಾರತದ ಪರ ಬೌಲಿಂಗ್ ನಲ್ಲಿ ದೀಪಕ್ ಚಹಾರ್, ಯಜುವೇಂದ್ರ ಚಹಾಲ್ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ತಲಾ 1 ವಿಕೆಟ್ ಪಡೆದಿದ್ದಾರೆ.SHARE THIS

Author:

0 التعليقات: