Thursday, 15 July 2021

ಬಾವಿಗೆ ಬಿದ್ದ ಮಗುವಿನ ರಕ್ಷಣೆ ವೇಳೆ ಕುಸಿದ ಬಾವಿಕಟ್ಟೆ: ಬಾವಿಗೆ ಬಿದ್ದ 25ಕ್ಕೂ ಅಧಿಕ ಮಂದಿ, ನಾಲ್ವರು ಮೃತ್ಯು


 ಬಾವಿಗೆ ಬಿದ್ದ ಮಗುವಿನ ರಕ್ಷಣೆ ವೇಳೆ ಕುಸಿದ ಬಾವಿಕಟ್ಟೆ: ಬಾವಿಗೆ ಬಿದ್ದ 25ಕ್ಕೂ ಅಧಿಕ ಮಂದಿ, ನಾಲ್ವರು ಮೃತ್ಯು

ಭೋಪಾಲ್: ಬಾವಿಗೆ ಬಿದ್ದ ಮಗುವನ್ನು ಪಾರು ಮಾಡುವ ಕಾರ್ಯಾಚರಣೆ ವೀಕ್ಷಿಸಲು ಸೇರಿದ್ದ ಅಪಾರ ಜನಸ್ತೋಮದ ಭಾರ ತಡೆಯಲಾರದೇ ಬಾವಿಯ ಕಟ್ಟೆ ಕುಸಿದ ಪರಿಣಾಮ 25ಕ್ಕೂ ಹೆಚ್ಚು ಮಂದಿ ಬಾವಿಗೆ ಬಿದ್ದು, ನಾಲ್ವರು ಮೃತಪಟ್ಟ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ನಡೆದಿದೆ.

ಇಬ್ಬರು ಗ್ರಾಮಸ್ಥರು ಮೃತಪಟ್ಟಿದ್ದು, 16 ಮಂದಿಯನ್ನು ರಕ್ಷಿಸಿ, ಆಸ್ಪತ್ರೆಗೆ ಸಾಗಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿದಿಶಾ ಉಸ್ತುವಾರಿ ಸಚಿವ ವಿಶ್ವಾಸ್ ಸಾರಂಗ್ ಹೇಳಿದ್ದಾರೆ. 

ಬಾವಿಗೆ ಬಿದ್ದ ಮಗುವನ್ನು ರಕ್ಷಿಸಲು ನಡೆಸುತ್ತಿದ್ದ ಕಾರ್ಯಾಚರಣೆಯನ್ನು ವೀಕ್ಷಿಸಲು ಗ್ರಾಮಸ್ಥರು ಸೇರಿದ್ದರು. ಲಾಲ್‌ಪತ್ತಾರ್ ಎಂಬ ಗ್ರಾಮದಲ್ಲಿ ಗುರುವಾರ ರಾತ್ರಿ 7:30ರ ವೇಳೆಗೆ ಈ ಘಟನೆ ನಡೆದಿದೆ.

ಬಾವಿಯೊಳಗೆ ಎಷ್ಟು ಮಂದಿ ಬಿದ್ದಿದ್ದಾರೆ ಎನ್ನುವ ನಿಖರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ ಎಂದು ಡಿಜಿಪಿ ವಿವೇಕ್ ಜೋಹ್ರಿ ಹೇಳಿದ್ದಾರೆ.


SHARE THIS

Author:

0 التعليقات: