Thursday, 8 July 2021

24 ದೇಶಗಳಿಂದ ಬರುವ ವಿಮಾನಗಳಿಗೆ ನಿರ್ಬಂಧ ವಿಧಿಸಿದ ಒಮಾನ್‌


24 ದೇಶಗಳಿಂದ ಬರುವ ವಿಮಾನಗಳಿಗೆ ನಿರ್ಬಂಧ ವಿಧಿಸಿದ ಒಮಾನ್‌

ದುಬೈ: ಭಾರತ, ಪಾಕಿಸ್ತಾನ ಸೇರಿದಂತೆ 24 ದೇಶಗಳಿಂದ ಬರುವ ಪ್ರಯಾಣಿಕರ ವಿಮಾನಗಳ ಹಾರಾಟಕ್ಕೆ ಒಮಾನ್‌ ಅನಿರ್ದಿಷ್ಟಾವಧಿಯವರೆಗೆ ನಿರ್ಬಂಧ ವಿಧಿಸಿದೆ.

ಕೊರೊನಾ ವೈರಸ್‌ ಹಬ್ಬುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಒಮಾನ್‌ ಈ ಕ್ರಮಕೈಗೊಂಡಿದೆ.

ಮುಂದಿನ ಸೂಚನೆ ನೀಡುವವರೆಗೂ ಈ ನಿರ್ಬಂಧ ಜಾರಿಯಲ್ಲಿರುತ್ತದೆ. ಏಪ್ರಿಲ್‌ 24ರಿಂದಲೇ ಈಗಾಗಲೇ ಕೆಲವು ದೇಶಗಳಿಂದ ಬರುವ ವಿಮಾನಗಳಿಗೆ ನಿರ್ಬಂಧ ವಿಧಿಸಿತ್ತು.

ಒಮಾನ್‌ನಲ್ಲಿ ಬುಧವಾರ ಹೊಸದಾಗಿ 1,675 ಕೋವಿಡ್‌-19 ಪ್ರಕರಣಗಳು ಪತ್ತೆಯಾಗಿದ್ದವು. ಇದುವರೆಗೆ ದೇಶದಲ್ಲಿ ಸೋಂಕಿನಿಂದ 3,356 ಮಂದಿ ಸಾವಿಗೀಡಾಗಿದ್ದಾರೆ.


SHARE THIS

Author:

0 التعليقات: