Thursday, 15 July 2021

ಕಳೆದ 24 ತಾಸಿನಲ್ಲಿ 193 ತಾಲಿಬಾನಿ ಉಗ್ರರನ್ನು ಹೊಡೆದುರುಳಿಸಿದ ಆಫ್ಘಾನಿಸ್ತಾನ್ ಭದ್ರತಾ ಪಡೆ


ಕಳೆದ 24 ತಾಸಿನಲ್ಲಿ 193 ತಾಲಿಬಾನಿ ಉಗ್ರರನ್ನು ಹೊಡೆದುರುಳಿಸಿದ ಆಫ್ಘಾನಿಸ್ತಾನ್ ಭದ್ರತಾ ಪಡೆ

ಕಾಬೂಲ್‍: ಆಫ್ಘಾನಿಸ್ತಾನದಲ್ಲಿ ಕಳೆದ 24 ತಾಸಿನಲ್ಲಿ ಭದ್ರತಾ ಪಡೆಗಳು 193 ತಾಲಿಬಾನ್‍ ಉಗ್ರರನ್ನು ಹತ್ಯೆಗೈದಿದ್ದು, 13 ಐಇಡಿಗಳನ್ನು ನಿಷ್ಕ್ರಿಯಗೊಳಿಸಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಫವಾದ್‍ ಅಮಾನ್‍ ತಿಳಿಸಿದ್ದಾರೆ.

ಕಳೆದ 24 ತಾಸಿನಲ್ಲಿ ಪಕ್ತಿಕಾ, ಘಜ್ನಿ, ಕುನಾರ್, ನಗರ್ ಹರ್, ಕಂದಹಾರ್, ಜಬುಲ್‍, ಹೆರಾತ್, ಬಡ್ಗಿಸ್‍, ಹೆಲ್ಮಂಡ್‍, ನಿಮೃಜ್‍, ಬಲಾಖ್‍, ಸಮನ್‍ ಗನ್‍, ಜೊವ್‍ ಜಾನ್‍, ಟಕಾರ್ ಮತ್ತು ಕುಂಡುಜ್‍ ಪ್ರಾಂತ್ಯಗಳಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ 193 ಉಗ್ರರು ಹತರಾಗಿದ್ದು, ಇತರ 74 ಉಗ್ರರು ಗಾಯಗೊಂಡಿದ್ದಾರೆ ಎಂದು ಅಮಾನ್‍ ಟ್ವೀಟ್ ಮಾಡಿದ್ದಾರೆ.

ಹೆಲ್ಮಂಡ್ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಆಸ್ಪತ್ರೆಯೊಂದನ್ನು ದೋಚಿ, ನಂತರ ಅದನ್ನು ನಾಶಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಟ್ವೀಟ್‍ ನೊಂದಿಗೆ ಆಸ್ಪತ್ರೆಯ ಫೋಟೋಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.SHARE THIS

Author:

0 التعليقات: