Friday, 9 July 2021

ರಾಜ್ಯದಲ್ಲಿಂದು 2290 ಜನರಿಗೆ ಸೋಂಕು ದೃಢ


ರಾಜ್ಯದಲ್ಲಿಂದು 2290 ಜನರಿಗೆ ಸೋಂಕು ದೃಢ 

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 2290 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇವತ್ತು 3045 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 68 ಸೋಂಕಿತರು ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 28,67,158 ಕ್ಕೆ ಏರಿಕೆಯಾಗಿದೆ. ಇದುವರೆಗೆ 35,731 ಸೋಂಕಿತರು ಸಾವನ್ನಪ್ಪಿದ್ದಾರೆ. 27,93,498 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 37,906 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 1.48 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ, ಇಂದು ಹೊಸದಾಗಿ 472 ಜನರಿಗೆ ಸೋಂಕು ತಗುಲಿದ್ದು, 12 ಮಂದಿ ಮೃತಪಟ್ಟಿದ್ದಾರೆ. ಇಂದು 814 ಜನ ಬಿಡುಗಡೆಯಾಗಿದ್ದಾರೆ. 13,536 ಸಕ್ರಿಯ ಪ್ರಕರಣಗಳು ಇವೆ.



SHARE THIS

Author:

0 التعليقات: