ಪರೀಕ್ಷೆ ಬರೆದವರು 219 ವಿದ್ಯಾರ್ಥಿಗಳು
ಪುತ್ತಿಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮುಹಿಮ್ಮಾತ್ ಹೈಯರ್ ಸೆಕೆಂಡರಿ ಸ್ಕೂಲ್ ಮೂರು ಮಾಧ್ಯಮಗಳಲ್ಲಿ ಈ ಬಾರಿಯೂ ಶೇಕಡ ನೂರು ವಿಜಯ ಗಳಿಸಿದೆ. ಕಾಸರಗೋಡು ಜಿಲ್ಲೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದದ್ದು ಮಹಿ ಮಾತಿನಲ್ಲಿ ಆಗಿದೆ. ಇಂಗ್ಲಿಷ್ ಮಲಯಾಳಂ ಕನ್ನಡ ಎಂಬೀ ಮಾಧ್ಯಮಗಳಲ್ಲಿ ಇಲ್ಲಿ ಕಲಿಕೆ ನಡೆಯುತ್ತಿದೆ. 219 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಎಲ್ಲಾ ವಿದ್ಯಾರ್ಥಿಗಳು ಒಳ್ಳೆಯ ಅಂಕಗಳೊಂದಿಗೆ ಉತ್ತೀರ್ಣರಾದರು.21 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿಯೂ ಹಾಗೂ 15 ವಿದ್ಯಾರ್ಥಿಗಳು 9 ವಿಷಯಗಳಲ್ಲಿಯೂ ಹಾಗೂ 18 ವಿದ್ಯಾರ್ಥಿಗಳು 8 ವಿಷಯಗಳಲ್ಲಿಯೂ ಏ ಪ್ಲಸ್ ಗಳಿಸಿದ್ದಾರೆ.
0 التعليقات: