Saturday, 31 July 2021

ಇಂದಿನಿಂದ 1 ವಾರ ಮಂಗಳೂರು -ಕಾಸರಗೋಡು ಬಸ್ ಸಂಚಾರ ಬಂದ್:

ಇಂದಿನಿಂದ 1 ವಾರ ಮಂಗಳೂರು -ಕಾಸರಗೋಡು ಬಸ್ ಸಂಚಾರ ಬಂದ್: 

ಮಂಗಳೂರು: ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಗಳೂರು-ಕಾಸರಗೋಡು ನಡುವೆ ಇಂದಿನಿಂದ ಒಂದು ವಾರ ಕಾಲ ಬಸ್ ಸಂಚಾರವನ್ನು ಸ್ಥಗಿತ ಮಾಡಲಾಗುವುದು.

ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಈ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವಾರ ಮಂಗಳೂರು-ಕಾಸರಗೋಡು ನಡುವೆ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಬಂದ್ ಮಾಡಲಿದ್ದು, ಕೇರಳದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿರುತ್ತದೆ.

ಎರಡು ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶ ನೀಡಲಾಗುತ್ತದೆ. 72 ಗಂಟೆಯೊಳಗಿನ RTPCR ನೆಗೆಟಿವ್ ವರದಿ ಕಡ್ಡಾಯವಾಗಿರುತ್ತದೆ. ಕೇರಳ ಮತ್ತು ಮಹಾರಾಷ್ಟ್ರಗಳ ಗಡಿಯಲ್ಲಿ ಇಂದಿನಿಂದ ನಿಯಮ ಕಡ್ಡಾಯವಾಗಿದೆ ಎನ್ನಲಾಗಿದೆ.SHARE THIS

Author:

0 التعليقات: