Tuesday, 13 July 2021

ಭಾರತದ ಮಾಜಿ ಕ್ರಿಕೆಟಿಗ, 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಯಶ್ಪಾಲ್ ಶರ್ಮಾ ನಿಧನ


 ಭಾರತದ ಮಾಜಿ ಕ್ರಿಕೆಟಿಗ, 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಯಶ್ಪಾಲ್ ಶರ್ಮಾ ನಿಧನ

ಹೊಸದಿಲ್ಲಿ: ಭಾರತದ ಮಾಜಿ ಕ್ರಿಕೆಟಿಗ ಯಶ್ಪಾಲ್ ಶರ್ಮಾ ಮಂಗಳವಾರ ತೀವ್ರ ಹೃದಯಾಘಾತದಿಂದ ದಿಲ್ಲಿಯಲ್ಲಿ ನಿಧನರಾಗಿದ್ದಾರೆ. ಶರ್ಮಾ ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ  ಓರ್ವ ಪುತ್ರನನ್ನು ಅಗಲಿದ್ದಾರೆ.

1983 ರ ವಿಶ್ವಕಪ್ ವಿಜೇತ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿದ್ದ ಯಶ್ಪಾಲ್ ಶರ್ಮಾ ಅವರಿಗೆ  66 ವರ್ಷ ವಯಸ್ಸಾಗಿತ್ತು. ಬಲಗೈ ಬ್ಯಾಟ್ಸ್ ಮನ್ ಶರ್ಮಾ ಅವರು ಆಗಸ್ಟ್ 11, 1954ರಲ್ಲಿ ಪಂಜಾಬ್ ನ ಲುಧಿಯಾನದಲ್ಲಿ ಜನಿಸಿದ್ದರು.

1979ರಿಂದ 1983ರ ತ ನಕ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿ  ಕ್ರಿಕೆಟ್ ರಂಗದಲ್ಲಿ ಮಿಂಚಿದ್ದ ಮಾಜಿ ಪಂಜಾಬ್ ಕ್ರಿಕೆಟಿಗನನ್ನು ಪ್ರತಿಭಾನ್ವಿತ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿತ್ತು. ಶರ್ಮಾ ಅವರು 37 ಟೆಸ್ಟ್, 42 ಏಕದಿನ ಕ್ರಿಕೆಟ್ ನಲ್ಲಿ ಆಡಿದ್ದರು.  ಈ ಎರಡು ಮಾದರಿ ಕ್ರಿಕೆಟ್ ನಲ್ಲಿ ಕ್ರಮವಾಗಿ 1,606 ರನ್ ಹಾಗೂ 883 ರನ್ ಗಳಿಸಿದ್ದರು.  ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 160 ಪಂದ್ಯಗಳಲ್ಲಿ ಒಟ್ಟು 8,933 ರನ್ ಗಳಿಸಿದ್ದರು.

1983ರ ವಿಶ್ವಕಪ್ ನಲ್ಲಿ ಮ್ಯಾಂಚೆಸ್ಟರ್  ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ನಲ್ಲಿ ಶರ್ಮಾ ಗಳಿಸಿರುವ ಅರ್ಧಶತಕವು(61 ರನ್) ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸದಾ ಸ್ಮರಣೀಯ ಇನಿಂಗ್ಸ್ ಆಗಿದೆ.

2000ರಲ್ಲಿ ಅವರು ರಾಷ್ಟ್ರೀಯ ಆಯ್ಕೆಗಾರರಾಗಿ ಸೇವೆ ಸಲ್ಲಿಸಿದ್ದರು.


SHARE THIS

Author:

0 التعليقات: