Wednesday, 14 July 2021

ಕೋವಿಡ್-19 ಎರಡನೇ ಅಲೆಯನ್ನು ಉತ್ತರಪ್ರದೇಶ ಸರಿಸಾಟಿಯಿಲ್ಲದೆ ನಿರ್ವಹಿಸುತ್ತಿದೆ : ಪ್ರಧಾನಿ ಮೋದಿ


 ಕೋವಿಡ್-19 ಎರಡನೇ ಅಲೆಯನ್ನು ಉತ್ತರಪ್ರದೇಶ ಸರಿಸಾಟಿಯಿಲ್ಲದೆ ನಿರ್ವಹಿಸುತ್ತಿದೆ : ಪ್ರಧಾನಿ ಮೋದಿ

ಹೊಸದಿಲ್ಲಿ: ಉತ್ತರಪ್ರದೇಶ ಸರಕಾರವು ಕೋವಿಡ್-19 ಪ್ರಕರಣಗಳನ್ನು ನಿಭಾಯಿಸಿರುವ ರೀತಿ ಅಭೂತಪೂರ್ವವಾಗಿತ್ತು ಎಂದು ಗುರುವಾರ ಬೆಳಿಗ್ಗೆ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಕೋವಿಡ್ ಬೆದರಿಕೆಯ ಹೊರತಾಗಿಯೂ ಕನ್ವರ್ ಯಾತ್ರೆಯನ್ನು ಮುಂದಿನ ವಾರದಿಂದ ಅನುಮತಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಉತ್ತರಪ್ರದೇಶ ಸರಕಾರಕ್ಕೆ ನೋಟಿಸ್ ಕಳುಹಿಸಿದ ಒಂದು ದಿನದ ನಂತರ ಪ್ರಧಾನಮಂತ್ರಿಯವರಿಂದ ಈ ಪ್ರಶಂಸೆ ವ್ಯಕ್ತವಾಗಿದೆ.

ಉತ್ತರಪ್ರದೇಶ ರಾಜ್ಯದ ನಿರ್ಧಾರದಿಂದ ಭಾರತೀಯ ನಾಗರಿಕರು "ಗೊಂದಲಕ್ಕೊಳಗಾಗಿದ್ದಾರೆ" ಎಂದು ಸರ್ವೋಚ್ಚ ನ್ಯಾಯಾಲಯ  ಹೇಳಿತ್ತು. ಕೊರೋನದ ಮೂರನೇ ಅಲೆ ಬಾರದಂತೆ ನೋಡಿಕೊಳ್ಳಲು ದೊಡ್ಡ ಸಭೆಗಳನ್ನು ತಪ್ಪಿಸಲು ಹಾಗೂ ಸೂಕ್ತವಾದ ನಡವಳಿಕೆಯನ್ನು ಅನುಸರಿಸಲು ಪ್ರಧಾನ ಮಂತ್ರಿ  ಕರೆ ನೀಡಿದ ನಂತರ ಸುಪ್ರೀಂಕೋರ್ಟ್ ಕನ್ವರ್ ಯಾತ್ರೆಯ ಕುರಿತಾಗಿ ಉತ್ತರಪ್ರದೇಶ ಸರಕಾರಕ್ಕೆ ಬುಧವಾರ ನೋಟಿಸ್ ನೀಡಿತ್ತು.


SHARE THIS

Author:

0 التعليقات: