Sunday, 11 July 2021

ಕೇರಳದಲ್ಲಿ ಮತ್ತೆ ಮೂರು ಝೀಕಾ ದೃಢ : ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 18ಕ್ಕೆ ಏರಿಕೆ


ಕೇರಳದಲ್ಲಿ ಮತ್ತೆ ಮೂರು ಝೀಕಾ ದೃಢ : 
ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 18ಕ್ಕೆ ಏರಿಕೆ

ತಿರುವನಂತಪುರ/ಗುವಾಹಾಟಿ: ಕೇರಳದಲ್ಲಿ ರವಿವಾರ ಮತ್ತೆ ಮೂರು ಝೀಕಾ ಪ್ರಕರಣ ಗಳು ದೃಢಪಟ್ಟಿವೆ. ಹೀಗಾಗಿ, ರಾಜ್ಯದಲ್ಲಿ ದೃಢ ಪಟ್ಟ ಪ್ರಕರಣಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

ತಿರುವನಂತಪುರ, ತ್ರಿಶ್ಶೂರ್‌ ಮತ್ತು ಕಲ್ಲಿಕೋಟೆಯಲ್ಲಿರುವ ಸರಕಾರಿ ವೈದ್ಯ ಕಾಲೇಜುಗಳಲ್ಲಿ ಸೋಂಕು ದೃಢಪಡಿಸುವ ವ್ಯವಸ್ಥೆ ಮಾಡಲಾಗಿದೆ. ಆಲಪ್ಪಳದಲ್ಲಿ ರಾಷ್ಟ್ರೀಯ ವೈರಾಣು ಸಂಸ್ಥೆಯ ಘಟಕವನ್ನೂ ಆರಂಭಿಸ ಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಹೇಳಿದ್ದಾರೆ.

ಎರಡು ಹಂತಗಳಲ್ಲಿ 27 ಮಾದರಿಗಳನ್ನು ಕಳುಹಿಸಲಾಗಿತ್ತು. ಮೂರನೇ ಹಂತದಲ್ಲಿ 8 ಮಾದರಿಗಳನ್ನು ಕಳುಹಿಸಿದ್ದರ ಪೈಕಿ ಮೂವರಿಗೆ ಸೋಂಕು ದೃಢಪಟ್ಟಿದೆ ಎಂದರು. ಸೋಂಕಿನ ಪತ್ತೆಗಾಗಿ 2,100 ಕಿಟ್‌ಗಳನ್ನು ರಾಷ್ಟ್ರೀಯ ವೈರಾಣು ಸಂಸ್ಥೆಯಿಂದ ಕೇರಳಕ್ಕೆ ನೀಡಲಾಗಿದೆ.

ಅಸ್ಸಾಂನಲ್ಲಿ 2.5 ಲಕ್ಷ ರೂ. ಪರಿಹಾರ: ಕೊರೊನಾದಿಂದಾಗಿ ಪತಿಯನ್ನು ಕಳೆದು ಕೊಂಡ ಮಹಿಳೆಯರಿಗೆ 2.5 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲು ಅಸ್ಸಾಂ ಸರಕಾರನಿರ್ಧರಿಸಿದೆ. ಕುಟುಂಬದ ಆದಾಯ ವರ್ಷಕ್ಕೆ 5 ಲಕ್ಷ ರೂ.ಗಳಿಗಿಂತ ಕಡಿಮೆಯಿದ್ದರೆ, ಅಂಥವರಿಗೆ ಮಾತ್ರ ಈ ನೆರವು ನೀಡಲಾಗುವುದು ಎಂದು ಸಿಎಂ ಹಿಮಂತ್‌ ಬಿಸ್ವಾ ಶರ್ಮಾ ಹೇಳಿದ್ದಾರೆ. “ಮುಖ್ಯಮಂತ್ರಿಳ ಕೋವಿಡ್‌-19 ವಿಧವಾ ನೆರವು ಯೋಜನೆ’ಗೆ ರವಿವಾರ ಚಾಲನೆ ನೀಡಿದ ಅವರು, 176 ಅರ್ಹ ಫ‌ಲಾನುಭವಿಗಳಿಗೆ ತಲಾ 2.5 ಲಕ್ಷ ರೂ.ಗಳನ್ನು ವಿತರಿಸಿದ್ದಾರೆ.SHARE THIS

Author:

0 التعليقات: