Wednesday, 7 July 2021

15 ವರ್ಷಗಳ ಹಿಂದಿನ ಕೊಲೆ ಆರೋಪಿಗಳ ಬಂಧನ


15 ವರ್ಷಗಳ ಹಿಂದಿನ ಕೊಲೆ ಆರೋಪಿಗಳ ಬಂಧನ

ಚಿಕ್ಕಬಳ್ಳಾಪುರ, ಜು.7: ಆಟೋಮಿಟಿಕ್ ಫಿಂಗರ್ ಪ್ರಿಂಟ್ ಐಡೆಂಟಿಫೈಡ್ ಸಿಸ್ಟಂನಲ್ಲಿ ಮೊಕದ್ದಮೆಯೊಂದರ ಬೆರಳಚ್ಚು ಗುರುತನ್ನು ಪತೆಹಚ್ಚುತ್ತಿದ್ದ ಸಮಯದಲ್ಲಿ ಸುಮಾರು 15 ವರ್ಷಗಳ ಹಿಂದೆ ಬೆಂಗಳೂರಿನ ಕೊಲೆಯ ಮೊಕದ್ದಮೆ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಚಿಕ್ಕಬಳ್ಳಾಪುರ ಬೆರಳಚ್ಚು ತಜ್ಞ ಪೊಲೀಸ್ ಇಲಾಖೆ ಯಶಸ್ವಿಯಾಗಿದ್ದಾರೆ.

ಘಟನೆಯ ವಿವರ: 2006ನೇ ಇಸವಿಯಲ್ಲಿ ಬೆಂಗಳೂರಿನ ಯಶವಂತಪುರದ ಬಿಕೆ ನಗರದಲ್ಲಿ ಶಶೀಂದ್ರನ್ ಎಂಬ ವೀಡಿಯೊ ಗೇಮ್ ಅಂಗಡಿ ಮಾಲಕನ ಬಾಯಿ ಮತ್ತು ಮೂಗಿಗೆ ಪ್ಲಾಸ್ಟರ್ ಹಾಕಿ ಕೊಲೆ ಮಾಡಲಾಗಿತ್ತು. ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು 2008ರಲ್ಲಿ ಸಿ.ರಿಪೊರ್ಟನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಕೈ ತೊಳೆದುಕೊಂಡಿದ್ದರು.2010ನೇ ಇಸವಿಯಲ್ಲಿ ನಂದಿಬೆಟ್ಟಕ್ಕೆ ಆಗಮಿಸಿದ್ದ ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ನಿವಾಸಿ ವಾಸಿತ್ ನಿಸಾರ್‌ನಿಂದ ದುರ್ಷ್ಕರ್ಮಿಗಳು ಮೂರು ಚೈನುಗಳನ್ನು ಕಿತ್ತುಕೊಂಡು ಹೋಗಿದ್ದರು. ಈ ಬಗ್ಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಾಸಿತ್ ನಿಸಾರ್ ದೂರನ್ನು ದಾಖಲಿಸಿದ್ದರು.

ಈ ಸಂಬಂಧ ಅಲ್ಲಿ ದೊರೆತಿದ್ದ ಆಕಸ್ಮಿಕ ಬೆರಳು ಮುದ್ರೆಗಳನ್ನು ಜಿಲ್ಲೆ ಬೆರಳಚ್ಚು ಘಟಕದ ಪಿಎಸ್ಸೈ ಹಾಗೂ ಅವರ ಸಿಬ್ಬಂದಿ ನಂದಿಬೆಟ್ಟದಲ್ಲಿನ ಎಂಒಬಿ ಕಾರ್ಡ್‌ಗಳಲ್ಲಿ ಆಸಾಮಿಗಳ ಬೆರಳಚ್ಚುಗಳನ್ನು ಆಟೋಮಿಟಿಕ್ ಫಿಂಗರ್ ಪ್ರಿಂಟ್ ಐಡೆಂಟಿಫೈಡ್ ಸಿಸ್ಟಂನಲ್ಲಿ ಪರೀಕ್ಷ್ಷಿಸುತ್ತಿದ್ದ ವೇಳೆ ಬೆಂಗಳೂರಿನ ಬಿಕೆ ನಗರದ ಕೊಲೆಯ ಕೇಸಿನಲ್ಲಿ ದೊರೆತ್ತಿದ್ದ ಬೆರಳಚ್ಚುಗಳು ಹೋಲಿಕೆಯಾಗಿದ್ದು, ಎರಡನೇ ಆರೋಪಿಯಾಗಿದ್ದ ಜೈವೀರುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ಸ್ನೇಹಿತರಾದ ಅವಿನಾಶ್ ಮತ್ತು ಮೋಸಿನ್ ಖಾನ್ ಜೊತೆಗೂಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.15 ವರ್ಷಗಳ ಹಿಂದಿನ ಕೊಲೆ ಮೊಕದ್ದಮೆಯೊಂದರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಬೆರಳಚ್ಚು ವಿಭಾಗದ ಪಿಎಸ್ಸೈಸುರೇಶ್, ಎಚ್‌ಸಿ ವೆಂಕೋಬರಾವ್, ಪಿಸಿ ಮಧುಚಂದ್ರ ಮತ್ತು ಮಹೇಶ್ ಕುಮಾರ್ ಅವರನ್ನು ಎಸ್ಪಿ ಮಿಥುನ್ ಕುಮಾರ್ ಶ್ಲಾಘಿಸಿದ್ದಾರೆ.


SHARE THIS

Author:

0 التعليقات: