Wednesday, 7 July 2021

ಉಳ್ಳಾಲ: ಮರಳು ಅಕ್ರಮ ಸಾಗಾಟ; ಓರ್ವನ ಸೆರೆ, 15 ಮಂದಿ ವಿರುದ್ಧ ಪ್ರಕರಣ ದಾಖಲು


 ಉಳ್ಳಾಲ: ಮರಳು ಅಕ್ರಮ ಸಾಗಾಟ; ಓರ್ವನ ಸೆರೆ, 15 ಮಂದಿ ವಿರುದ್ಧ ಪ್ರಕರಣ ದಾಖಲು

ಉಳ್ಳಾಲ : ಉಳ್ಳಾಲ ನಗರಸಭಾ ವ್ಯಾಪ್ತಿಯ ಕೋಟೆಪುರದಲ್ಲಿ ಅಕ್ರಮವಾಗಿ ಮರಳು ತುಂಬಿಸಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಬುಧವಾರ ನಾಲ್ಕು ಲಾರಿಗಳನ್ನು ವಶಪಡಿಸಿಕೊಂಡ ಉಳ್ಳಾಲ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಕೋಟೆಪುರ ನಿವಾಸಿ ಶೌಕತ್ (35) ಬಂಧಿತ ಆರೋಪಿ. ಈ ವೇಳೆ ಉಳಿದ ಆರೋಪಿಗಳು ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಮರಳು ಸಹಿತ ನಾಲ್ಕು ಲಾರಿ, ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡಿರುವ ಉಳ್ಳಾಲ ಇನ್ಸ್ ಪೆಕ್ಟರ್ ಸಂದೀಪ್ ನೇತೃತ್ವದ ಪೊಲೀಸರ ತಂಡ 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದೆ.  


SHARE THIS

Author:

0 التعليقات: