Thursday, 8 July 2021

ಅಕ್ಕನ ಮೇಲೆಯೇ ರೇಪ್ ಮಾಡಿ ಗರ್ಭಿಣಿಯಾಗಿಸಿದ 12ರ ಬಾಲಕ

ಅಕ್ಕನ ಮೇಲೆಯೇ ರೇಪ್ ಮಾಡಿ ಗರ್ಭಿಣಿಯಾಗಿಸಿದ 12ರ ಬಾಲಕ

ನೋಯ್ಡಾ: ಆತಂಕಕಾರಿ ಘಟನೆಯೊಂದರಲ್ಲಿ 12 ವರ್ಷದ ಬಾಲಕ 16 ವರ್ಷದ ಸಹೋದರಿಯ ಮೇಲೆಯೇ ಅತ್ಯಾಚಾರ ಎಸಗಿದ್ದು, ಅದರ ಪರಿಣಾಮ ಆಕೆ ಇದೀಗ ಗರ್ಭಿಣಿಯಾಗಿದ್ದಾಳೆ.

ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದ ಬಡ ಕುಟುಂಬದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಆರೋಪಿ ಬಾಲಕನ ತಂದೆ ಕಟ್ಟಡ ಕಾರ್ಮಿಕನಾಗಿದ್ದರೆ, ತಾಯಿ ಮನೆಗೆಲಸ ಮಾಡುತ್ತಾ ಜೀವನ ಸಾಗಿಸುತ್ತಾರೆ.

ಬಡ ದಂಪತಿಗೆ ಮೂವರು ಮಕ್ಕಳಿದ್ದಾರೆ. ಪಾಲಕರು ಕೆಲಸಕ್ಕೆ ಹೋದಾಗ ಬಾಲಕ ತನ್ನ ಅಕ್ಕನ ಮೇಲೆ ಎರಡು ಬಾರಿ ಅತ್ಯಾಚಾರ ಮಾಡಿದ್ದಾನೆ. ಕೆಲವು ತಿಂಗಳಿಂದ ಸಂತ್ರಸ್ತೆಯ ದೇಹದಲ್ಲಿನ ಬದಲಾವಣೆಯನ್ನು ಗಮನಿಸಿ ಆಕೆಯನ್ನು ಪ್ರಶ್ನಿಸಿದಾಗ ನಡೆದ ಎಲ್ಲ ಘಟನೆಯನ್ನು ಆಕೆ ತಾಯಿ ಮುಂದೆ ವಿವರಿಸಿದ್ದಾಳೆ.

ಕಿರಿಯ ಸಹೋದರ ಎರಡು ಬಾರಿ ಆಕೆ ಮೇಲೆ ಬಲತ್ಕಾರ ಮಾಡಿದ್ದಾಗಿ ತಾಯಿಯ ಮುಂದೆ ಸಹೋದರಿ ಹೇಳಿಕೊಂಡಿದ್ದಾಳೆ. ಮೂರು ತಿಂಗಳ ಹಿಂದೆ ಘಟನೆ ನಡೆದಿದ್ದಾಗಿ ಹೇಳಿದ್ದಾಳೆ. ಈ ರೀತಿಯಾಗುತ್ತದೆ ಎಂದು ಇಬ್ಬರಿಗೆ ತಿಳಿದಿರಲಿಲ್ಲ ಎಂದು ಬಿಸ್ರಾಕ್​ ಎಸ್​ಎಚ್​ಒ ಅನಿತಾ ಚೌಹಾಣ್​ ತಿಳಿಸಿದ್ದಾರೆ. ಆರಂಭದಲ್ಲಿ ಸಂತ್ರಸ್ತೆ ಈ ಬಗ್ಗೆ ಹೇಳಿಕೊಂಡರು ಆಕೆಯ ತಾಯಿ ಆ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ. ಹುಡುಗಾಟಿಕೆ ಎಂದು ನಿರ್ಲಕ್ಷಿಸಿದ್ದರಂತೆ.

ಸಂತ್ರಸ್ತೆ ವಿದ್ಯಾರ್ಥಿನಿಯಾಗಿದ್ದು, ಲಾಕ್​ಡೌನ್​ ವೇಳೆ ಶಾಲೆಗಳು ಮುಚ್ಚಿದ್ದ ಸಮಯದಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ವೈದ್ಯಕೀಯ ಪರೀಕ್ಷೆಯಲ್ಲೂ ಹುಡುಗಿ ಗರ್ಭಿಣಿಯಾಗಿರುವುದು ದೃಢವಾಗಿದೆ. ಬಾಲಕನನ್ನು ಬಾಲಾಪರಾಧಿ ಮಂಡಳಿ ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಪೊಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


SHARE THIS

Author:

0 التعليقات: