Sunday, 11 July 2021

ದಕ್ಷಿಣ ಜಪಾನ್ ನಲ್ಲಿ ಭಾರೀ ಮಳೆ: 1.20 ಲಕ್ಷ ಜನರ ಸ್ಥಳಾಂತರ

ದಕ್ಷಿಣ ಜಪಾನ್ ನಲ್ಲಿ ಭಾರೀ ಮಳೆ: 1.20 ಲಕ್ಷ ಜನರ ಸ್ಥಳಾಂತರ

ಟೋಕಿಯೊ (ಜಪಾನ್): ಜಪಾನ್‌ ನ ದಕ್ಷಿಣ ಭಾಗದಲ್ಲಿ ಹಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ 1.20 ಲಕ್ಷಕ್ಕೂ ಅಧಿಕ ಮಂದಿಗೆ ಸೂಚನೆ ನೀಡಲಾಗಿದೆ ಎಂದು ಎನ್ಎಚ್ಕೆ ಸುದ್ದಿವಾಹಿನಿ ವರದಿ ಮಾಡಿದೆ.

ರಾಜಧಾನಿ ಟೋಕಿಯೊ ನಗರದ ನೈರುತ್ಯದಲ್ಲಿರುವ ಅಟಾಮಿ ನಗರದಲ್ಲಿ ಭೀಕರ ಭೂಕುಸಿತಗಳು ಸಂಭವಿಸಿದ ಕೆಲವೇ ದಿನಗಳ ಬಳಿಕ ಭಾರೀ ಮಳೆ ಸುರಿಯುತ್ತಿದೆ.

ಕ್ಯುಶು ದ್ವೀಪದಲ್ಲಿರುವ ಮೂರು ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆಗಳಿವೆ ಎಂಬುದಾಗಿ ಜಪಾನ್ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ, ಅಪಾಯಕ್ಕೆ ಗುರಿಯಾಗಬಹುದಾದ ಸ್ಥಳಗಳಿಂದ ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಸ್ಥಳೀಯ ರಾಜ್ಯ ಸರಕಾರಗಳು ಜನರಿಗೆ ಸೂಚನೆ ನೀಡಿವೆ.

ವಾರದ ಹಿಂದೆ ಅಟಾಮಿ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತಗಳು ಸಂಭವಿಸಿದ್ದು, ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಹಾಗೂ 20 ಮಂದಿ ನಾಪತ್ತೆಯಾಗಿದ್ದಾರೆ.


SHARE THIS

Author:

0 التعليقات: