ಮುಂಬೈನಲ್ಲಿ ಮಳೆಯಿಂದ ಭೀಕರ ದುರಂತ :
ಗುಡಿಸಲುಗಳ ಮೇಲೆ ಗೋಡೆ ಕುಸಿದು 11 ಜನರು ಸಾವು
ಮುಂಬೈ : ಮಹರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಭಾರೀ ಮಳೆಯ ಹಿನ್ನೆಲೆಯಲ್ಲಿ ಭೂಕುಸಿತದಿಂದ ಗುಡಿಸಲುಗಳ ಮೇಲೆ ಗೋಡೆ ಕುಸಿದು 11 ಜನರು ಮೃತಪಟ್ಟಿರುವ ಘಟನೆ ಮುಂಬೈನ ಚೆಂಬೂರ್ ನಲ್ಲಿ ನಡೆದಿದೆ.
ಮುಂಬೈನ ಮಲಾಡ್ ವೆಸ್ಟ್ ನ ನ್ಯೂ ಕಲೆಕ್ಟರ್ ಕಾಂಪೌಂಡ್ ನಲ್ಲಿ ಬುಧವಾರ ತಡರಾತ್ರಿ ವಸತಿ ಕಟ್ಟಡ ಕುಸಿದು ಕನಿಷ್ಠ ಹನ್ನೊಂದು ಜನರು ಮೃತಪಟ್ಟಿದ್ದು, ಹದಿನೇಳು ಜನರು ಗಾಯಗೊಂಡಿದ್ದಾರೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮಾಹಿತಿ ನೀಡಿದ್ದಾರೆ. ಸಿಕ್ಕಿಬಿದ್ದ ಜನರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಗೊಂಡ ವ್ಯಕ್ತಿಗಳನ್ನು ಬಿಡಿಬಿಎ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಕೆಲಕ್ಟರ್ ಕಾಂಪೌಂಡ್ ಗುಡಿಸಲುಗಳ ಮೇಲೆ ಕುಸಿದ ಪರಿಣಾಮ 11 ಜನರು ಮೃತಪಟ್ಟಿದ್ದು, 17 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
0 التعليقات: