ಯುರೋಪ್ನ ಹಲವು ದೇಶಗಳಲ್ಲಿ ಭಾರಿ ಪ್ರವಾಹ : 110 ಜನ ಸಾವು,ಹಲವರು ನಾಪತ್ತೆ
ಬರ್ಲಿನ್: ಯುರೋಪ್ನ ಹಲವು ದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಪಶ್ಚಿಮ ಜರ್ಮನಿ ಮತ್ತು ಬೆಲ್ಜಿಯಂನ ಕೆಲವು ಭಾಗಗಳಲ್ಲಿ ಭೀಕರ ಪ್ರವಾಹ ಉಂಟಾಗಿದ್ದು ಸುಮಾರು 110 ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಕಣ್ಮರೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
'ಜರ್ಮನಿಯ ರೈನ್ಲ್ಯಾಂಡ್ ಪಲಾಟಿನೇಟ್ ರಾಜ್ಯದಲ್ಲಿ ಸುಮಾರು 60 ಮಂದಿ ಪ್ರವಾಹದಲ್ಲಿ ಸಾವಿಗೀಡಾಗಿದ್ದಾರೆ. ಉತ್ತರ ರೈನ್-ವೆಸ್ಟ್ಫಾಲಿಯಾ ರಾಜ್ಯದಲ್ಲಿ ಒಟ್ಟು 43 ಮಂದಿ ಸಾವಿಗೀಡಾಗಿದ್ದಾರೆ. ಬೆಲ್ಜಿಯಂನಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜರ್ಮನಿಯಲ್ಲಿ ಸುಮಾರು 1,300 ಮಂದಿ ಕಾಣೆಯಾಗಿದ್ದಾರೆ. ರಸ್ತೆಗಳು ಜಲಾವೃತವಾಗಿದ್ದು, ಫೋನ್ ಸಂಪರ್ಕಕ್ಕೆ ಅಡ್ಡಿ ಎದುರಾಗಿದೆ. ಹಾಗಾಗಿ, ಸಂಕಷ್ಟದಲ್ಲಿರುವ ಜನರ ಬಳಿ ತಲುಪಲು ತೊಂದರೆಯಾಗುತ್ತಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
0 التعليقات: