ಉತ್ತರ ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ :
11 ಕಾರ್ಮಿಕರು ಸಾವು, 30 ಮಂದಿಗೆ ಗಾಯ
ಲಕ್ನೋ : ಡಾಬಾ ಬಳಿ ನಿಂತಿದ್ದ ಬಸ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 11 ಜನ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.
ಕೆಲಸಕ್ಕಾಗಿ ಬಿಹಾರಕ್ಕೆ ಕಾರ್ಮಿಕರನ್ನು ಹೊತ್ತು ಹೊರಟಿದ್ದ ಬಸ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ 11 ಕಾರ್ಮಿಕರು ಮೃತಪಟ್ಟಿದ್ದಾರೆ. 30 ಜನರು ಗಾಯಗೊಂಡಿದ್ದಾರೆ.
ಹರಿಯಾಣದ ಪಲ್ವಾಲ್ ಮತ್ತು ಹಿಸಾರ್ ಜಿಲ್ಲೆಗಳಿಂದ ಸುಮಾರು 100 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಡಬಲ್ ಡೆಕ್ಕರ್ ಬಸ್ ಬಿಹಾರಕ್ಕೆ ಹೋಗುತ್ತಿದ್ದ ವೇಳೆ ಮುಂಜಾನೆ 2.30 ರ ಸುಮಾರಿಗೆ ವೇಗವಾಗಿ ಬಂದ ಟ್ರಕ್ ಹಿಂದಿನಿಂದ ಬಸ್ಗೆ ಡಿಕ್ಕಿ ಹೊಡೆದಿದೆ, ಪರಿಣಾಮ ಬಸ್ಸಿನಲ್ಲಿ ಮಲಗಿದ್ದ ಹಲವಾರು ಪ್ರಯಾಣಿಕರು ರಸ್ತೆಯ ಹೊರಗೆ ಬಿದ್ದು ಮಾರಣಾಂತಿಕ ಗಾಯಗಳಾಗಿವೆ.
ಗಾಯಗೊಂಡವರು ಬಾರಾಬಂಕಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ನಲ್ಲಿರುವ ಪ್ರಯಾಣಿಕರು ಬಿಹಾರದ ವಿವಿಧ ಜಿಲ್ಲೆಗಳಿಗೆ ಸೇರಿದವರು ಎಂದು ಅವರು ಹೇಳಿದರು.
0 التعليقات: