Saturday, 31 July 2021

 ಮಹಾರಾಷ್ಟ್ರದಲ್ಲಿ ಮೊಟ್ಟಮೊದಲ ಝೀಕಾ ವೈರಸ್ ಪ್ರಕರಣ ಪತ್ತೆ

ಮಹಾರಾಷ್ಟ್ರದಲ್ಲಿ ಮೊಟ್ಟಮೊದಲ ಝೀಕಾ ವೈರಸ್ ಪ್ರಕರಣ ಪತ್ತೆ


 ಮಹಾರಾಷ್ಟ್ರದಲ್ಲಿ ಮೊಟ್ಟಮೊದಲ ಝೀಕಾ ವೈರಸ್ ಪ್ರಕರಣ ಪತ್ತೆ

ಪುಣೆ: ಜಿಲ್ಲೆಯ ಬೆಲ್ಸರ್ ಗ್ರಾಮದಲ್ಲಿ ರಾಜ್ಯದ ಮೊಟ್ಟಮೊದಲ ಝೀಕಾ ವೈರಸ್ ಪ್ರಕರಣ ಶನಿವಾರ ಪತ್ತೆಯಾಗಿದೆ. ಇದರೊಂದಿಗೆ ಕೇರಳ ಬಳಿಕ ಝೀಕಾ ವೈರಸ್ ಪತ್ತೆಯಾದ ಎರಡನೇ ರಾಜ್ಯವಾಗಿದೆ ಮಹಾರಾಷ್ಟ್ರ.

ಪುಣೆಯ ಪುರಂದರ್ ತಾಲೂಕಿನಲ್ಲಿ ಶುಕ್ರವಾರ ಝೀಕಾ ವೈರಸ್ ಪರೀಕ್ಷೆಯಲ್ಲಿ 50 ವರ್ಷದ ಮಹಿಳೆಗೆ ಪಾಸಿಟಿವ್ ಫಲಿತಾಂಶ ಬಂದಿದೆ ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಮಹಿಳೆಗೆ ಚಿಕೂನ್‌ ಗುನ್ಯಾ ಸೋಂಕು ಕೂಡಾ ತಗುಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತಜ್ಞರ ತಂಡ ಬೆಲ್ಸರ್ ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದೆ. "ಬೆಲ್ಸರ್ ಗ್ರಾಮದ ಝೀಕಾ ವೈರಸ್ ಸೋಂಕಿತ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದಾರೆ. ಇದೀಗ ಯಾವುದೇ ರೋಗಲಕ್ಷಣ ಇಲ್ಲ. ರಾಜ್ಯದ ಕ್ಷಿಪ್ರಸ್ಪಂದನೆ ತಂಡ ಕೂಡಾ ಗ್ರಾಮದಲ್ಲಿ ತಪಾಸಣೆ ನಡೆಸಿದ್ದು, ಸ್ಥಳೀಯ ಆಡಳಿತದ ಜತೆ ಹಾಗೂ ಆರೋಗ್ಯ ಸಿಬ್ಬಂದಿ ಜತೆ ಸಭೆ ನಡೆಸಿ, ಮಾರ್ಗಸೂಚಿಯ ಬಗ್ಗೆ ಮಾಹಿತಿ ನೀಡಲಾಗಿದೆ" ಎಂದು ರಾಜ್ಯ ಸರ್ವೇಕ್ಷಣಾ ಅಧಿಕಾರಿ ಡಾ.ಪ್ರದೀಪ್ ಅವಟೆ ಹೇಳಿದ್ದಾರೆ.

ಝೀಕಾ ವೈರಸ್ ಸೋಂಕು ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕವಾಗಿದ್ದು, ಈಡಿಸ್ ಪ್ರಬೇಧದ ಸೊಳ್ಳೆಗಳಿಂದ ಪ್ರಮುಖವಾಗಿ ಹರಡುತ್ತದೆ. ಇವು ಸಾಮಾನ್ಯವಾಗಿ ಮುಂಜಾನೆ ಮತ್ತು ಮುಸ್ಸಂಜೆಯ ವೇಳೆ ಹೆಚ್ಚಾಗಿ ಕಂಡು ಬರುತ್ತವೆ. ಜ್ವರ, ಗುಳ್ಳೆಗಳು, ಕೆಂಗಣ್ಣು, ಮಾಂಸಂಖಂಡ ಮತ್ತು ಕೀಲು ನೋವು, ಆಲಸ್ಯ, ತಲೆನೋವಿನಂಥ ರೋಗಲಕ್ಷಣಗಳಿರುತ್ತವೆ.

 ಬೆಂಗಳೂರು: 'ಸೈಕಲ್ ರೈಡ್'ಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ಬೆಂಗಳೂರು: 'ಸೈಕಲ್ ರೈಡ್'ಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ


 ಬೆಂಗಳೂರು: 'ಸೈಕಲ್ ರೈಡ್'ಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ಬೆಂಗಳೂರು: ನಗರದ ನಾಲ್ಕೂ ದಿಕ್ಕುಗಳಲ್ಲಿ ಅತ್ಯುತ್ತಮವಾದ ಸೈಕ್ಲಿಂಗ್‌ ಪಥಗಳನ್ನು ನಿರ್ಮಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರೀಡಾಪಟುಗಳನ್ನು ಬೆಂಬಲಿಸಿ ಬಿಜೆಪಿ ಯುವ ಮೋರ್ಚಾ ಆಯೋಜಿಸಿದ್ದ ಸೈಕ್ಲಿಂಗ್‌ ರೈಡ್'ಗೆ ರವಿವಾರ ಬೆಳಗ್ಗೆ ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಚಾಲನೆ ನೀಡಿ ನಂತರ ಮಾತನಾಡಿದರು.

ಒಲಿಂಪಿಕ್‌ನಲ್ಲಿ ಭಾಗವಹಿಸಿರುವ ಭಾರತೀಯ ಕ್ರೀಡಾಪಟುಗಳಿಗೆ ಬೆಂಬಲ ನೀಡುವ ಮೂಲಕ ಪ್ರೋತ್ಸಾಹ ತುಂಬಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಅದರ ಭಾಗವಾಗಿ ‘ಚಿಯರ್‌ ಇಂಡಿಯಾʼ ಎಂಬ ಕಾರ್ಯಕ್ರಮವನ್ನು ಪ್ರಧಾನಿ ಘೋಷಿಸಿದ್ದಾರೆ. ಸೈಕ್ಲಿಂಗ್‌ ಜಾಥಾ ಕೂಡ ಚಿಯರ್‌ ಇಂಡಿಯಾದ ಭಾಗವಾಗಿಯೇ ನಡೆಯುತ್ತಿರುವುದು ಸಂತೋಷ ಎಂದರು.

ಸಂಸದ ಡಿ.ವಿ. ಸದಾನಂದ ಗೌಡ, ತೇಜಸ್ವಿ ಸೂರ್ಯ,  ಡಾ. ಕೆ. ಸುಧಾಕರ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 ಸೆಮಿಫೈನಲ್‌ನಲ್ಲಿ ಸೋತ ಸಿಂಧು : ಇಂದು ಕಂಚಿನ ಪದಕಕ್ಕಾಗಿ ಹೋರಾಟ

ಸೆಮಿಫೈನಲ್‌ನಲ್ಲಿ ಸೋತ ಸಿಂಧು : ಇಂದು ಕಂಚಿನ ಪದಕಕ್ಕಾಗಿ ಹೋರಾಟ


ಸೆಮಿಫೈನಲ್‌ನಲ್ಲಿ ಸೋತ ಸಿಂಧು : ಇಂದು ಕಂಚಿನ ಪದಕಕ್ಕಾಗಿ ಹೋರಾಟ

ಟೋಕಿಯೋ : ಟೋಕಿಯೋ ಒಲಿಂಪಿಕ್ಸ್​​ನ ನಿನ್ನೆ ನಡೆದ ಮಹಿಳೆಯರ ಸಿಂಗಲ್ಸ್​​ನ ಸೆಮಿಫೈನಲ್​ನಲ್ಲಿ ತೈ ಜು ಯಿಂಗ್​ ವಿರುದ್ಧ ಭಾರತದ ಭರವಸೆಯ ಬ್ಯಾಡ್ಮಿಂಟನ್​  ತಾರೆ​ ಪಿ ವಿ ಸಿಂಧು ಸೋಲುಂಡಿದ್ದಾರೆ.

ಸೆಮಿಫೈನಲ್‌ನಲ್ಲಿ ತೈ ಜು-ಯಿಂಗ್ ವಿರುದ್ಧ 18-21, 12-21 ಸೋಲನುಭವಿಸಿದ್ದಾರೆ. ಎರಡು ನೇರ ಸೆಟ್ ಗಳಲ್ಲಿ ಪಂದ್ಯವನ್ನು ಕೈ ಚೆಲ್ಲಿದ ಸಿಂಧು, ಬಂಗಾರ ಗೆಲ್ಲುವ ಅವಕಾಶವನ್ನು ಕಳೆದುಕೊಂಡರು. ಆ ಮೂಲಕ ಚಿನ್ನ ಬೆಳ್ಳಿಯ ಕನಸು ಭಗ್ನವಾಗಿದೆ.

ಸೆಮಿಫೈನಲ್​ನಲ್ಲಿ ಸೋಲು ಕಂಡಿರುವ ಕಾರಣ ಇದೀಗ ಪಿವಿ ಸಿಂಧು ಕಂಚಿನ ಪದಕಕ್ಕಾಗಿ ಚೀನಾದ ಆಟಗಾರ್ತಿ ವಿರುದ್ಧ ಹೋರಾಟ ನಡೆಸಲಿದ್ದಾರೆ.

 ಇಂದಿನಿಂದ 1 ವಾರ ಮಂಗಳೂರು -ಕಾಸರಗೋಡು ಬಸ್ ಸಂಚಾರ ಬಂದ್:

ಇಂದಿನಿಂದ 1 ವಾರ ಮಂಗಳೂರು -ಕಾಸರಗೋಡು ಬಸ್ ಸಂಚಾರ ಬಂದ್:

ಇಂದಿನಿಂದ 1 ವಾರ ಮಂಗಳೂರು -ಕಾಸರಗೋಡು ಬಸ್ ಸಂಚಾರ ಬಂದ್: 

ಮಂಗಳೂರು: ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಗಳೂರು-ಕಾಸರಗೋಡು ನಡುವೆ ಇಂದಿನಿಂದ ಒಂದು ವಾರ ಕಾಲ ಬಸ್ ಸಂಚಾರವನ್ನು ಸ್ಥಗಿತ ಮಾಡಲಾಗುವುದು.

ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಈ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವಾರ ಮಂಗಳೂರು-ಕಾಸರಗೋಡು ನಡುವೆ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರ ಬಂದ್ ಮಾಡಲಿದ್ದು, ಕೇರಳದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿರುತ್ತದೆ.

ಎರಡು ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶ ನೀಡಲಾಗುತ್ತದೆ. 72 ಗಂಟೆಯೊಳಗಿನ RTPCR ನೆಗೆಟಿವ್ ವರದಿ ಕಡ್ಡಾಯವಾಗಿರುತ್ತದೆ. ಕೇರಳ ಮತ್ತು ಮಹಾರಾಷ್ಟ್ರಗಳ ಗಡಿಯಲ್ಲಿ ಇಂದಿನಿಂದ ನಿಯಮ ಕಡ್ಡಾಯವಾಗಿದೆ ಎನ್ನಲಾಗಿದೆ.


 ಅನಾಥ ಹಿಂದೂ ಯುವತಿಯ ಮದುವೆ ಮಾಡಿಸಿದ ಮುಸ್ಲಿಂ ಮುಖಂಡ!

ಅನಾಥ ಹಿಂದೂ ಯುವತಿಯ ಮದುವೆ ಮಾಡಿಸಿದ ಮುಸ್ಲಿಂ ಮುಖಂಡ!


ಅನಾಥ ಹಿಂದೂ ಯುವತಿಯ ಮದುವೆ ಮಾಡಿಸಿದ ಮುಸ್ಲಿಂ ಮುಖಂಡ!

ಆಲಮೇಲ(ವಿಜಯಪುರ): ಪಟ್ಟಣದ ಮುಸ್ಲಿಂ ಮುಖಂಡ ಮಹಿಬೂಬ ಮಸಳಿ ಅವರು ಅನಾಥ ಹಿಂದೂ ಬಾಲಕಿಯನ್ನು ಸಾಕಿ, ಸಲುಹಿ ಪ್ರಾಯಕ್ಕೆ ಬಂದ ಬಳಿಕ ಆಕೆಗೆ ಹಿಂದೂ ಸಮಾಜದ ವರನೊಂದಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡುವ ಮೂಲಕ ಸೌಹಾರ್ದ ಸಾರಿದಿದ್ದಾರೆ.

ಆಲಮೇಲ ಪಟ್ಟಣದ ದನದ ಬಜಾರ್‌ ಬಡಾವಣೆಯ ಪುಟ್ಟ ಬಾಲಕಿ ಪೂಜಾಳ ತಂದೆ ಹಾಗೂ ತಾಯಿ ಸುಮಾರು 10 ವರ್ಷದ ಹಿಂದೆ ಸಾವಿಗೀಡಾಗಿದ್ದರು. ನಂತರ ಅಜ್ಜಿಯೊಂದಿಗೆ ಇದ್ದ ಪೂಜಾ ಕೊನೆಗೆ ಅವರನ್ನು ಕಳೆದುಕೊಂಡು ದಿಕ್ಕು ತೋಚದಾದಳು. ಈಕೆಗೆ ಸಹೋದರ, ಸಹೋದರಿ ಸೇರಿದಂತೆ ಯಾರೂ ಇರಲಿಲ್ಲ.

ಅದೇ ಬಡಾವಣೆಯ ಮುಸ್ಲಿಂ ಮುಖಂಡ ಮಹಿಬೂಬ ಮಸಳಿ ಅವರು ಅನಾಥೆ ಪೂಜಾ ಶೇಖರ ವಡಿಗೇರಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು. ಪ್ರಾಯಕ್ಕೆ ಬಂದ ಪೂಜಾಳಿಗೆ ಮಹಿಬೂಬ ಹಾಗೂ ಅವರ ಪತ್ನಿ ಸೇರಿಕೊಂಡು ಅವಳ ಜಾತಿಗೆ ಸೇರಿದ ವರನನ್ನು ಹುಡುಕಿ, ಆಕೆಯ ಒಪ್ಪಿಗೆ ಮೇರೆಗೆ ಹಿಂದೂ ಸಂಪ್ರದಾಯದ ಪ್ರಕಾರ ಜುಲೈ 30 ರಂದು ಮದುವೆ ಮಾಡಿಸಿದ್ದಾರೆ.

ಅನಾಥಳಾದ ನನ್ನನ್ನು ತಮ್ಮ ಮನೆಯಲ್ಲಿ ಮಗಳ ಹಾಗೆ ಸಾಕಿ ಮದುವೆ ಮಾಡಿ ಕೊಟ್ಟಿದ್ದಾರೆ. ಇವರು ನನ್ನ ಪಾಲಿಗೆ ದೇವರ ಹಾಗೆ. ಒಂದು ದಿನವೂ ಅನಾಥ ಪ್ರಜ್ಞೆ ನನಗೆ ಕಾಡಲಿಲ್ಲ. ಅವರ ಋಣ ನಾನೇಂದೂ ತೀರಿಸಲಾಗದು

-ಪೂಜಾ ವಡಿಗೇರಿ, ಮದುಮಗಳು

ಪೂಜಾಳ ಸಂಕಷ್ಟ ನೋಡಿ ಅವಳ ಜೀವನಕ್ಕೆ ಒಂದು ದಾರಿ ನೀಡಬೇಕು ಎಂದು ನಿರ್ಧರಿಸಿದೆ. ನನ್ನ ಮಗಳ ಜೊತೆಗೆ ಅವಳು ನನಗೆ ಮಗಳು ಎಂದು ತಿಳಿದು ಸಹಾಯ ಮಾಡಿದ್ದೇನೆ

-ಮಹಿಬೂಬ ಮಸಳಿ,ಮುಸ್ಲಿಂ ಮುಖಂಡ

 ಪಡಿತರ ಚೀಟಿ: ಎಲ್ಲ ಸದಸ್ಯರಿಗೆ `ಇ-ಕೆವೈಸಿ' ಕಡ್ಡಾಯ

ಪಡಿತರ ಚೀಟಿ: ಎಲ್ಲ ಸದಸ್ಯರಿಗೆ `ಇ-ಕೆವೈಸಿ' ಕಡ್ಡಾಯ


ಪಡಿತರ ಚೀಟಿ: ಎಲ್ಲ ಸದಸ್ಯರಿಗೆ `ಇ-ಕೆವೈಸಿ' ಕಡ್ಡಾಯ

ಶಿವಮೊಗ್ಗ : ಪಡಿತರ ಚೀಟಿದಾರರಿಗೆ (Ration Card) ಆಹಾರ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಆಗಸ್ಟ್ 1 ರಿಂದ 10 ರವರೆಗೆ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು `ಇ-ಕೆವೈಸಿ' ಮಾಡಿಸುವುದು ಕಡ್ಡಾಯವಾಗಿದೆ.

ಆಗಸ್ಟ್ 1ರಿಂದ 10 ರವರೆಗೆ ಇ-ಕೆವೈಸಿ ಮಾಡಿಸಲು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಇ-ಕೆವೈಸಿ ಮಾಡಿಸದೇ ಇರುವ ಪಡಿತರ ಚೀಟಿದಾರರು/ಕುಟುಂಬ ಸದಸ್ಯರು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ಹೋಗಿ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಉಚಿತವಾಗಿ ಇ-ಕೆವೈಸಿ ಮಾಡಿಸಲು ಸೂಚಿಸಲಾಗಿದೆ.

ಇ-ಕೆವೈಸಿ ಮಾಡಿಸದೇ ಇರುವ ಪಡಿತರ ಚೀಟಿದಾರರಿಗೆ ಮುಂದಿನ ದಿನಗಳಲ್ಲಿ ಪಡಿತರ ಹಂಚಿಕೆ ಸ್ಥಗಿತಗೊಳಿಸಲಾಗುವುದು ಎಂದು ಜಲ್ಲಾಡಳಿತ ಪ್ರಕಟಣೆ ತಿಳಿಸಿದೆ.
 ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಸಿಎಂ ಸೂಚನೆ:

ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಸಿಎಂ ಸೂಚನೆ:

ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಸಿಎಂ ಸೂಚನೆ: 

ಬೆಂಗಳೂರು, ಜು.31: ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿ ಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆಕ್ಸಿಜನ್ ಪೂರೈಕೆ, ಔಷಧಿ ಲಭ್ಯತೆ, ಮುನ್ನೆಚ್ಚರಿಕೆ ಕ್ರಮಗಳು, ಗಡಿ ಭಾಗಗಳಲ್ಲಿ ತಪಾಸಣೆ ಮೊದಲಾದ ವಿಷಯಗಳ ಕುರಿತು ವಿವರವಾಗಿ ಚರ್ಚಿಸಿದರು.

ಕೋವಿಡ್ ಎರಡನೇ ಅಲೆಯನ್ನು ಕಠಿಣ ಪರಿಶ್ರಮದಿಂದ ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ ನಿಯಂತ್ರಿಸಲಾಗಿದೆ. ಈಗ ಮತ್ತೆ ಪ್ರಕರಣಗಳು ಹೆಚ್ಚಳವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅಂತರ್ ರಾಜ್ಯ ಗಡಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಗಡಿಭಾಗದ ರಾಜ್ಯಗಳಿಂದ ರಾಜ್ಯಕ್ಕೆ ಪ್ರವೇಶಿಸುವವರಿಗೆ ಆರ್.ಟಿ.ಪಿ.ಸಿ.ಆರ್. ನೆಗೆಟಿವ್, ಎರಡೂ ಡೋಸ್ ವ್ಯಾಕ್ಸಿನ್ ಕಡ್ಡಾಯಗೊಳಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.

ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಬಿಗಿ ಮಾಡಿ. ಹಿರಿಯ ಅಧಿಕಾರಿಗಳನ್ನು ನಿಯೋಜಿಸಿ. ಡಿವೈಎಸ್ಪಿ, ಉಪ ವಿಭಾಗಾಧಿಕಾರಿ, ವೈದ್ಯರು, ಮತ್ತು ಇತರ ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಬೇಕು. ಜಿಲ್ಲಾಧಿಕಾರಿಗಳು, ಎಸ್ಪಿ ಪ್ರತಿ ಎರಡು ದಿನಕ್ಕೊಮ್ಮೆ ಭೇಟಿ ನೀಡಿ ಪರಿಶೀಲಿಸಿ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಬೇಕು. ಜೊತೆಗೆ ರೈಲು ನಿಲ್ದಾಣದಲ್ಲಿಯೂ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು. ಬಂದರುಗಳಲ್ಲಿಯೂ ಕಟ್ಟೆಚ್ಚರ ವಹಿಸಬೇಕು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕೇರಳದಿಂದ ಶಿಕ್ಷಣ, ಉದ್ಯೋಗಕ್ಕೆಂದು ಪ್ರತಿದಿನ ಪ್ರಯಾಣಿಸುವವರಿಗೆ ಒಂದು ವಾರದ ಅವಧಿಗೆ ಪಾಸ್ ನೀಡುವ ವ್ಯವಸ್ಥೆ ಹಾಗೂ ಅವರಿಗೆ ಪ್ರತಿ ವಾರ ಪರೀಕ್ಷೆ ಮಾಡಿಕೊಳ್ಳುವುದು ಕಡ್ಡಾಯ ಮಾಡುವಂತೆ ಸೂಚಿಸಿದರು. ಈ ಕುರಿತು ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಹೊರ ರಾಜ್ಯದಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದಲ್ಲಿಯೇ ಕ್ವಾರಂಟೈನ್ ಮಾಡುವಂತೆ ಸೂಚಿಸಲಾಗಿದೆ. ಚಿಕಿತ್ಸಾ ಸೌಲಭ್ಯದಲ್ಲಿ, ಆಮ್ಲಜನಕ, ಔಷಧ ಪೂರೈಕೆಯಲ್ಲಿ ಯಾವುದೇ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು. ಆರೋಗ್ಯ ಸೌಲಭ್ಯಕ್ಕೆ ಅಗತ್ಯವಿರುವ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಯಿತು. ಅವುಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಗಳ ಪ್ರಮಾಣ ಹೆಚ್ಚಿಸಬೇಕು. ಪ್ರವಾಸಿಗರು ಹೆಚ್ಚಾಗಿ ಆಗಮಿಸುವ ಕಾರಣ, ಹೋಮ್ ಸ್ಟೇಗಳು, ರೆಸಾರ್ಟ್ ಗಳಲ್ಲಿ ಪರೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ತಿಳಿಸಿದರು.


 ಮನೆ, ದೇವಸ್ಥಾನದಲ್ಲಿ ಕಳವು ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಮನೆ, ದೇವಸ್ಥಾನದಲ್ಲಿ ಕಳವು ಪ್ರಕರಣ: ನಾಲ್ವರು ಆರೋಪಿಗಳ ಬಂಧನ


ಮನೆ, ದೇವಸ್ಥಾನದಲ್ಲಿ ಕಳವು ಪ್ರಕರಣ: ನಾಲ್ವರು ಆರೋಪಿಗಳ ಬಂಧನ

ಬ್ರಹ್ಮಾವರ: ದೇವಸ್ಥಾನ ಹಾಗೂ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ಕು ಮಂದಿ ಆರೋಪಿ ಗಳನ್ನು ಜು.30ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕಲ್ಲುಕಟ್ಟೆಯ ಗೋಪಾಲ (26), ಕೊಕ್ಕರ್ಣೆ ಜಾರುಜೆಡ್ಡುವಿನ ಅರುಣ್(26), ರವಿ ಕುಮಾರ್(28), ಸಾಸ್ತಾನ ಗುಂಡ್ಮಿಯ ರಜಾಕ್(41) ಬಂಧಿತ ಆರೋಪಿಗಳು.

ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ನೆಂಚಾರು ಗ್ರಾಮದ ಕರಬರಬೆಟ್ಟು ಎಂಬಲ್ಲಿ ನೀಲಕಂಠ ಕರಬ ಎಂಬವರ ಮನೆಗೆ ನುಗ್ಗಿದ ಕಳ್ಳರು 38,200 ರೂ. ಮೌಲ್ಯದ ಸೊತ್ತುಗಳನ್ನು ಹಾಗೂ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗುಂಜೆ ಗ್ರಾಮದ ಹ್ರಬ್ಬಾಡಿ ಮೂಲ ಜಟ್ಟಿಗ ಮತ್ತು ಬ್ರಹ್ಮ ದೈವಸ್ಥಾನದ ಕಂಚಿನ ಘಂಟೆಗಳುಮತ್ತು ತೂಕಳಕಗಳು ಕಳವು ಆಗಿರುವ ಬಗ್ಗೆ ಜು.29ರಂದು ಕೋಟ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ಕೋಟ ಎಸ್ಸೈ ಸಂತೋಷ್ ಬಿ.ಪಿ., ಅಪರಾಧ ವಿಭಾಗದ ಎಸ್ಸೈ ಪುಷ್ಪಾ, ಪ್ರೊಬೆಷನರಿ ಎಎಸ್ಸೈ ಭರತೇಶ್, ಸಿಬ್ಬಂದಿಗಳಾದ ಸುರೇಶ್ ಶೆಟ್ಟಿ, ರಾಜು, ಸುರೇಶ್, ರಾಮ ದೇವಾಡಿಗ, ಜಯರಾಮ, ಪ್ರಕಾಶ್, ಕೃಷ್ಣ, ವಿಕ್ರಮ್, ಮಂಜುನಾಥ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ, ಕಳವು ಮಾಡಿದ ದೇವಸ್ಥಾನದ ಘಂಟೆಗಳು, ದೀಪಗಳು ಹಾಗೂ ಇತರ ಪೂಜಾ ಸೊತ್ತುಗಳನ್ನು ವಶಪಡಿಸಿಕೊಂಡಿದೆ.


ರಾಜ್ಯದಲ್ಲಿ ಇನ್ನೂ ಎರಡು ವಾರ ನೈಟ್​ ಕರ್ಫ್ಯೂ

ರಾಜ್ಯದಲ್ಲಿ ಇನ್ನೂ ಎರಡು ವಾರ ನೈಟ್​ ಕರ್ಫ್ಯೂ

ರಾಜ್ಯದಲ್ಲಿ ಇನ್ನೂ ಎರಡು ವಾರ ನೈಟ್​ ಕರ್ಫ್ಯೂ

ಬೆಂಗಳೂರು: ಕೇರಳದಲ್ಲಿ ಕರೊನಾ ಸೋಂಕು ಸ್ಫೋಟ, ಮೂರನೇ ಅಲೆ ಪ್ರವೇಶದ ಸಾಧ್ಯತೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯವ್ಯಾಪಿ ಮತ್ತೆ ಎರಡು ವಾರಗಳ ಕಾಲ ರಾತ್ರಿ ಕರ್ಫ್ಯೂ ವಿಸ್ತರಿಸಲು ನಿರ್ಧರಿಸಲಾಗಿದೆ.

ಕರೊನಾತಂಕದ ಹಿನ್ನೆಲೆಯಲ್ಲಿ ಈ ಹಿಂದೆಯೇ ವಿಸ್ತರಣೆ ಮಾಡಿ ವಿಧಿಸಲಾಗಿದ್ದ ರಾತ್ರಿ ಕರ್ಫ್ಯೂ ಆಗಸ್ಟ್ 2ಕ್ಕೆ ಮುಗಿಯಲಿದೆ. ಆದರೆ ಈ ನಡುವೆ ಗಡಿ ಪ್ರದೇಶಗಳಲ್ಲಿ ಕರೊನಾ ಸೋಂಕು ಹೆಚ್ಚಳದ ಭೀತಿ ಆವರಿಸಿರುವುದರಿಂದ ಇನ್ನು ಎರಡು ವಾರಗಳ ಕಾಲ ರಾತ್ರಿ ಕರ್ಫ್ಯೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಚಿತ್ರಮಂದಿರಗಳಿಗೆ ಶೇ.50 ಆಸನ ಭರ್ತಿ ಅನುಮತಿ, ಪಬ್‌ಗಳಿಗೆ ಅವಕಾಶ ಇಲ್ಲದಿರುವುದು ಸೇರಿ ಈ ನೈಟ್​ ಕರ್ಫ್ಯೂ ಮುಂದುವರಿಯಲಿದೆ. ರಾತ್ರಿ ಹತ್ತರಿಂದ ಬೆಳಗಿನ ಜಾವ ಐದರ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಈ ಸಂಬಂಧ ನಾಳೆ ಪರಿಷ್ಕೃತ ಆದೇಶ ಹೊರಡಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಕರ್ನಾಟಕದಲ್ಲಿ 1987 ಕೊರೊನಾ ಸೋಂಕು ಪತ್ತೆ

ಕರ್ನಾಟಕದಲ್ಲಿ 1987 ಕೊರೊನಾ ಸೋಂಕು ಪತ್ತೆ


ಕರ್ನಾಟಕದಲ್ಲಿ 1987 ಕೊರೊನಾ ಸೋಂಕು ಪತ್ತೆ

ಬೆಂಗಳೂರು, ಜುಲೈ 31: ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ ನಿಯಂತ್ರಣಕ್ಕೆ ಬರುವಂತೆ ಕಾಣುತ್ತಿಲ್ಲ. ಕೊರೊನಾ ಮೂರನೇ ಅಲೆ ಭೀತಿಯ ನಡುವೆ ಕೇರಳ ಹಾಗೂ ತಮಿಳುನಾಡಿನಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 1987 ಕೊರೊನಾ ಸೋಂಕು ಪತ್ತೆಯಾಗಿದ್ದು, 1632 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 37 ಆಗಿದೆ.

ರಾಜ್ಯದಲ್ಲಿ ಈವರೆಗೆ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 29,05,124ಕ್ಕೆ ಏರಿಕೆಯಾಗಿದ್ದು, ಒಟ್ಟು ಸಾವಿನ ಪ್ರಕರಣಗಳ ಸಂಖ್ಯೆ- 36,562 ಆಗಿದೆ. ಇಲ್ಲಿಯವರೆಗೆ ಒಟ್ಟು 28,44,742 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜ್ಯದ ಪಾಸಿಟಿವಿಟಿ ದರ ಶೇ. 1.43ರಷ್ಟಿದ್ದು, ಕೋವಿಡ್ ಡೆತ್ ರೇಟ್ ಶೇ.1.86 ಇದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ವರದಿ ಮಾಡಿದೆ.

ವಿವಿಧ ಜಿಲ್ಲೆಗಳ ಕೋವಿಡ್ ವರದಿ

ಬೆಂಗಳೂರು ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 450 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 12,27,339 ಏರಿದ್ದರೆ, ಸಕ್ರಿಯ ಪ್ರಕರಣಗಳು 8529 ಇವೆ.

ಇನ್ನು ಕೇರಳ ಗಡಿ ಹಂಚಿಕೊಂಡಿರುವ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ 365 ಪ್ರಕರಣಗಳು, ಮೈಸೂರು ಜಿಲ್ಲೆಯಲ್ಲಿ 177 ಪ್ರಕರಣಗಳು, ಉಡುಪಿ ಜಿಲ್ಲೆಯಲ್ಲಿ 148 ಪ್ರಕರಣಗಳು, ತುಮಕೂರು ಜಿಲ್ಲೆಯಲ್ಲಿ 108 ಪ್ರಕರಣಗಳು, ಬೆಳಗಾವಿ 56, ಶಿವಮೊಗ್ಗ 40 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ.

ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 44, ಚಿಕ್ಕಮಗಳೂರು 55, ಹಾಸನ 105, ಕೊಡಗು 132, ಕೋಲಾರ 51, ಮಂಡ್ಯ ಜಿಲ್ಲೆಯಲ್ಲಿ 47 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.

ಬಾಗಲಕೋಟೆ 4, ಬಳ್ಳಾರಿ 15, ಬೀದರ್ 0 ಪ್ರಕರಣ ಸಾಧಿಸಿದೆ, ಚಾಮರಾಜನಗರ 23, ಚಿಕ್ಕಬಳ್ಳಾಪುರ 4, ಚಿತ್ರದುರ್ಗ 26, ಧಾರವಾಡ 19, ಗದಗ 3. ಹಾವೇರಿ 3, ಕಲಬುರಗಿ 6, ಕೊಪ್ಪಳ 7, ದಾವಣಗೆರೆಯಲ್ಲಿ 14 ಹೊಸ ಕೋವಿಡ್ ಪ್ರಕರಣ ದಾಖಲಾಗಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 75 ಸೋಂಕು ಪ್ರಕರಣಗಳು, ಯಾದಗಿರಿಯಲ್ಲಿ 1, ರಾಯಚೂರು ಜಿಲ್ಲೆಯಲ್ಲಿ 1 ಸೋಂಕು ಪ್ರಕರಣಗಳು ಪತ್ತೆಯಾಗಿವೆ.


 

 ನೂತನ ಸಿಎಂ ಬಗ್ಗೆ ದೊಡ್ಡ ನಿರೀಕ್ಷೆ ಇಲ್ಲ:   ಎಚ್.ಡಿ. ಕುಮಾರಸ್ವಾಮಿ

ನೂತನ ಸಿಎಂ ಬಗ್ಗೆ ದೊಡ್ಡ ನಿರೀಕ್ಷೆ ಇಲ್ಲ: ಎಚ್.ಡಿ. ಕುಮಾರಸ್ವಾಮಿ


ನೂತನ ಸಿಎಂ ಬಗ್ಗೆ ದೊಡ್ಡ ನಿರೀಕ್ಷೆ ಇಲ್ಲ: 
ಎಚ್.ಡಿ. ಕುಮಾರಸ್ವಾಮಿ

ಬೆಂಗಳೂರು, ಜು. 31: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೆರಳಿನಲ್ಲೇ ಇದ್ದಾರೆ. ಇವರ ಬಗ್ಗೆ ದೊಡ್ಡ ನಿರೀಕ್ಷೆ ಏನೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ನೆಲಮಂಗಲದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿಯೂ ಜನತಾ ಪರಿವಾರದ ಸಿಎಂ, ಬಿಜೆಪಿಯಲ್ಲೂ ಜನತಾ ಪರಿವಾರದ ಮುಖ್ಯಮಂತ್ರಿ. ಇವರಿಬ್ಬರ ಬೆಂಬಲದಿಂದ ನಾನೂ ಸಿಎಂ ಆಗಿ ಕೆಲಸ ಮಾಡಿದ್ದೇನೆ. ಎರಡು ವರ್ಷಗಳಿಂದ ಸಾಮಾನ್ಯ ಜನರು ಸಿಎಂ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ, ನಾನು ಸಿಎಂ ಆಗಿದ್ದ ವೇಳೆ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿ ಸಮಸ್ಯೆ ಕೇಳುತ್ತಿದ್ದೆ ಎಂದು ನೆನಪು ಮಾಡಿಕೊಂಡರು.

ಅರವಿಂದ್ ಬೆಲ್ಲದ್ ಮುಖ್ಯಮಂತ್ರಿಯಾಗಿ ಆಯ್ಕೆ ಆಗುತ್ತೇನೆಂಬ ನಿರೀಕ್ಷೆಯಲ್ಲಿ ಇದ್ದರು. ಎರಡು ತಿಂಗಳಲ್ಲಿ ಯಡಿಯೂರಪ್ಪ ತೆಗೆದುಕೊಂಡ ನಿರ್ಧಾರಗಳ ಫೈಲ್‍ಗಳನ್ನು ತರಿಸಿಕೊಂಡಿದ್ದರಂತೆ. ಇನ್ನೇನು ಸಿಎಂ ಆಗಿಯೇ ಬಿಡುತ್ತೇನೆಂದು ಬೆಲ್ಲದ್ ಅವರು ಈ ರೀತಿ ಮಾಡಿದರಂತೆ ಎಂಬ ವಿಷಯ ಯಾವುದೋ ಮಾಧ್ಯಮದಲ್ಲಿ ನೋಡಿದೆ. ಬಿಜೆಪಿಯಲ್ಲಿ ಅವರವರ ಮಧ್ಯೆಯೇ ಸಮನ್ವಯತೆ ಇಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.

ಕೋವಿಡ್ ಏರಿಕೆ: ಕೊರೋನ ಎರಡನೇ ಅಲೆ ಸಂದರ್ಭದಲ್ಲಿ ನಾನೇ ಮೊದಲಿಗೆ ಲಾಕ್‍ಡೌನ್ ಮಾಡಬೇಕು ಎಂದು ಹೇಳಿದ್ದೆ. ಸರಕಾರ ಈಗಿನಿಂದಲೇ ಎಚ್ಚೆತ್ತುಕೊಳ್ಳಬೇಕು. ಈಗಾಗಲೇ ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಮತ್ತೆ ಸರಕಾರ ಎಚ್ಚರ ತಪ್ಪದೇ ಸೂಕ್ತ ಕ್ರಮ ವಹಿಸಬೇಕು. ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಹೆಚ್ಚಾಗುತ್ತದೆ ಎಂದು ಕೆಲವು ತಜ್ಞರ ವರದಿಗಳು ಬರುತ್ತಿವೆ ಎಂದರು.

ರಾಜ್ಯದಲ್ಲಿ ಮತ್ತೊಂದು ಕಡೆ ಪ್ರವಾಹದ ಸ್ಥಿತಿ ಎದುರಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಜಿಲ್ಲಾ ಕೇಂದ್ರದಿಂದ ಕೆಲಸ ಮಾಡುವಂತೆ ಸೂಚಿಸಬೇಕು. ಜೊತೆಗೆ ನಮ್ಮ ರಾಜ್ಯದ ಗಡಿಗಳಲ್ಲಿ ಸೂಕ್ತ ಕಟ್ಟೆಚ್ಚರ ವಹಿಸಬೇಕು ಎಂದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇತ್ತೀಚೆಗೆ ಹದಗೆಡುತ್ತಿದೆ. ಸರಕಾರ ಹಾಗೂ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.

ಕೇವಲ 200, 300 ರೂ.ಗಳಿಗೆ ಕೊಲೆ ಮಾಡುವ ಪ್ರಕರಣಗಳು ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಹೆಚ್ಚುತ್ತಿವೆ. ಇದರ ಜೊತೆಗೆ ಸರಗಳ್ಳತನ, ದರೋಡೆ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಕುಮಾರಸ್ವಾಮಿ ಇದೇ ವೇಳೆ ಆಗ್ರಹಿಸಿದರು.


 


 ಐರ್ಲೆಂಡ್‌ ಸೋಲಿನಿಂದಾಗಿ ಕ್ವಾರ್ಟರ್‌ ಫೈನಲ್‌ ಗೇರಿದ ಭಾರತೀಯ ಮಹಿಳಾ ಹಾಕಿ ತಂಡ

ಐರ್ಲೆಂಡ್‌ ಸೋಲಿನಿಂದಾಗಿ ಕ್ವಾರ್ಟರ್‌ ಫೈನಲ್‌ ಗೇರಿದ ಭಾರತೀಯ ಮಹಿಳಾ ಹಾಕಿ ತಂಡ


ಐರ್ಲೆಂಡ್‌ ಸೋಲಿನಿಂದಾಗಿ ಕ್ವಾರ್ಟರ್‌ ಫೈನಲ್‌ ಗೇರಿದ ಭಾರತೀಯ ಮಹಿಳಾ ಹಾಕಿ ತಂಡ

ಟೋಕಿಯೋ: ಗ್ರೇಟ್ ಬ್ರಿಟನ್ ತಂಡವು 2-0 ಗೋಲುಗಳಿಂದ ಐರ್ಲೆಂಡ್ ಮಹಿಳಾ ಹಾಕಿ ತಂಡವನ್ನು ಸೋಲಿಸಿದ ಕಾರಣದಿಂದಾಗಿ ಭಾರತೀಯ ಮಹಿಳಾ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ಕ್ವಾರ್ಟರ್ ಫೈನಲ್‌ ಗೆ ಅರ್ಹತೆ ಪಡೆದಿದೆ.

ಈ ಮೊದಲು ಟೀಂ ಇಂಡಿಯಾ ತನ್ನ ಪೂಲ್ ಎ ಮಹಿಳಾ ಹಾಕಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 4-3 ಅಂತರದ ಗೆಲುವು ಸಾಧಿಸುವ ಮೂಲಕ ತಮ್ಮ ಕ್ವಾರ್ಟರ್‌ ಫೈನಲ್ ಅರ್ಹತೆಯ ಭರವಸೆಯನ್ನು ಜೀವಂತವಾಗಿರಿಸಿಕೊಂಡಿತ್ತು. ವಂದನಾ ಕಟಾರಿಯಾ ಮೂರು ಗೋಲುಗಳೊಂದಿಗೆ ಮಿಂಚಿದ್ದರು.

ಐರ್ಲೆಂಡ್ ತಂಡ ಸೋತ ಕಾರಣ ಭಾರತವು 41 ವರ್ಷಗಳ ಬಳಿಕ  ಕ್ವಾರ್ಟರ್ ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿತು. ಭಾರತೀಯ ಮಹಿಳಾ ತಂಡದ 1980 ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ತಲುಪುವುದರೊಂದಿಗೆ ಶ್ರೇಷ್ಟ ಸಾಧನೆ ಮಾಡಿತ್ತು.ಆದರೆ ನಾಲ್ಕನೆಯ ಸ್ಥಾನದೊಂದಿಗೆ ಗೇಮ್ಸ್ ಅನ್ನು ಕೊನೆಗೊಳಿಸಿತ್ತು.

 ಐರ್ಲೆಂಡ್ ಹಾಗೂ  ದಕ್ಷಿಣ ಆಫ್ರಿಕಾ ವಿರುದ್ಧ ಸತತ ಗೆಲುವಿನೊಂದಿಗೆ ಭಾರತವು ತನ್ನ ಎ ಗುಂಪಿನ ಲೀಗ್ ಪ್ರಕ್ರಿಯೆಯನ್ನು ಆರು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಮುಗಿಸಿದೆ.

ಸೋಮವಾರ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ  ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಪ್ರತಿ ಗುಂಪಿನಿಂದ ಅಗ್ರ ನಾಲ್ಕು ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸುತ್ತವೆ.


 ಬೆಂಗಳೂರು;   ದುಬಾರಿ ಕಾರಿನೊಂದಿಗೆ ಪರಾರಿ

ಬೆಂಗಳೂರು; ದುಬಾರಿ ಕಾರಿನೊಂದಿಗೆ ಪರಾರಿ

ಬೆಂಗಳೂರು; 
ದುಬಾರಿ ಕಾರಿನೊಂದಿಗೆ ಪರಾರಿ

ಬೆಂಗಳೂರು, ಜು.31: ಖರೀದಿಸುವ ಸೋಗಿನಲ್ಲಿ  ದುಬಾರಿ ಕಾರಿನೊಂದಿಗೆ ಪರಾರಿಯಾದ ಘಟನೆ ನೆಲಮಂಗಲದಲ್ಲಿ ನಡೆದಿದೆ. 

ಜಕ್ಕಸಂದ್ರದ ಮಂಜು ಎಂಬಾತ ಕಾರು ಕದ್ದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಜೆಪಿ ನಗರದ ವಾಣಿ ಅವರಿಗೆ ಸೇರಿದ 23 ಲಕ್ಷ ಬೆಲೆಬಾಳುವ ಕಾರಿಗೆ ಕೇವಲ 10 ಸಾವಿರ ರೂ. ಹಣ  ನೀಡಿ ಕಾರು ಸಮೇತ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ನೆಲಮಂಗಲ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.


 


 ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ 800 ಕೋಟಿ ರೂ. ನೆರವು: ಸಿಎಂ ಬೊಮ್ಮಾಯಿ

ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ 800 ಕೋಟಿ ರೂ. ನೆರವು: ಸಿಎಂ ಬೊಮ್ಮಾಯಿ


 ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ 800 ಕೋಟಿ ರೂ. ನೆರವು: ಸಿಎಂ ಬೊಮ್ಮಾಯಿ

ಬೆಂಗಳೂರು: ಕೋವಿಡ್ 3ನೇ ಅಲೆ ತಡೆಗಟ್ಟಲು ಆರೋಗ್ಯ ಮೂಲ ಸೌಕರ್ಯ ಅಭಿವೃದ್ಧಿ, ಐಸಿಯು, ಆಕ್ಸಿಜನ್, ಔಷಧಿ ಖರೀದಿಗೆ ರಾಜ್ಯಕ್ಕೆ 800 ಕೋಟಿ ರೂ. ಮಂಜೂರು ಮಾಡಲು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಸಮ್ಮತಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಹೊಸದಿಲ್ಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ ಸುಖ್ ಮಾಂಡವೀಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ರಾಜ್ಯಕ್ಕೆ 1.5 ಕೋಟಿ ಲಸಿಕೆ ಪೂರೈಸಲು ಕೋರಿಕೆ ಸಲ್ಲಿಸಿದ್ದು, 1 ಕೋಟಿ ಲಸಿಕೆ ಪೂರೈಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ. ಇದರಿಂದ ರಾಜ್ಯದಲ್ಲಿ ಪ್ರತಿದಿನ 2ರಿಂದ 3 ಲಕ್ಷ ಲಸಿಕೆ ಒದಗಿಸಲು ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕೋವಿಡ್ 3ನೇ ಅಲೆ ನಿಯಂತ್ರಣ, ಲಸಿಕೆ ಅಭಿಯಾನ ಹಾಗೂ ನೆರೆ ರಾಜ್ಯವಾದ ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ನಿಂದಾಗಿ ರಾಜ್ಯದ ಸರಹದ್ದು ಪ್ರವೇಶ ನಿಯಂತ್ರಿಸುವ ಕುರಿತು ಮಾರ್ಗಸೂಚಿ ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಸಚಿವರು ತಿಳಿಸಿರುವುದಾಗಿ ಮುಖ್ಯಮಂತ್ರಿ ವಿವರಿಸಿದ್ದಾರೆ.

 ಕೇರಳ-ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರು ಕೋವಿಡ್ ಲಸಿಕೆ ಪಡೆದಿದ್ದರೂ ನೆಗೆಟಿವ್ ವರದಿ ಕಡ್ಡಾಯ

ಕೇರಳ-ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರು ಕೋವಿಡ್ ಲಸಿಕೆ ಪಡೆದಿದ್ದರೂ ನೆಗೆಟಿವ್ ವರದಿ ಕಡ್ಡಾಯ


 ಕೇರಳ-ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರು ಕೋವಿಡ್ ಲಸಿಕೆ ಪಡೆದಿದ್ದರೂ ನೆಗೆಟಿವ್ ವರದಿ ಕಡ್ಡಾಯ

ಮಂಗಳೂರು: ಕೊರೋನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ ಮತ್ತು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಆಗಮಿಸುವವರು ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದಿದ್ದರೆ ಅಥವಾ ಪಡೆಯದಿದ್ದರೂ ಕೂಡ 72 ಗಂಟೆಯೊಳಗೆ ಮಾಡಿಸಿರುವ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯಗೊಳಿಸಿ ರಾಜ್ಯ ಸರಕಾರ ಶನಿವಾರ ಆದೇಶ ಹೊರಡಿಸಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಹೊರಡಿಸಿರುವ ಪರಿಷ್ಕೃತ ಸುತ್ತೋಲೆಯಲ್ಲಿ ವಿಮಾನ/ರೈಲು/ರಸ್ತೆ (ಬಸ್ ಮತ್ತಿತರ ಖಾಸಗಿ ವಾಹನಗಳ ಮೂಲಕ) ಮಾರ್ಗದಲ್ಲಿ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರು 72 ಗಂಟೆಯೊಳಗೆ ಮಾಡಿಸಿರುವ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗಟಿವ್ ವರದಿ ಹೊಂದುವುದು ಕಡ್ಡಾಯವಾಗಿದೆ. ಕೇರಳ ಮತ್ತು ಮಹಾರಾಷ್ಟ್ರದಿಂದ ಹೊರಡುವ ಎಲ್ಲಾ ವಿಮಾನಗಳಿಗೂ ಇದು ಅನ್ವಯವಾಗುತ್ತದೆ ಎಂದು ಸ್ಪಷ್ಪಡಿಸಿದ್ದಾರೆ. 72 ಗಂಟೆಯೊಳಗೆ ಮಾಡಿಸಿದ ಆರ್‌ಟಿ-ಪಿಸಿಆರ್ ನೆಗೆಟಿವ್ ಟೆಸ್ಟ್ ವರದಿಯನ್ನು ಹೊಂದುವ ಪ್ರಯಾಣಿಕರಿಗೆ ಮಾತ್ರವೇ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯವರು ಬೋರ್ಡಿಂಗ್ ಪಾಸ್ ನೀಡಬೇಕು. ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಆರ್‌ಟಿ-ಪಿಸಿಆರ್ ನೆಗೆಟಿವ್ ಟೆಸ್ಟ್ ವರದಿಯನ್ನು ಹೊಂದುವುದನ್ನು ರೈಲ್ವೆ ಪ್ರಾಧಿಕಾರವು ಖಚಿತಪಡಿಸಬೇಕು. ಬಸ್‌ಗಳ ಮೂಲಕ ಪ್ರಯಾಣಿಸುವವರು ಈ ವರದಿ ಹೊಂದುವುದನ್ನು ಖಾತ್ರಿಪಡಿಸುವ ಜವಾಬ್ದಾರಿ ಆಯಾ ಬಸ್‌ಗಳ ನಿರ್ವಾಹಕರದ್ದಾಗಿದೆ. ಕೇರಳದಿಂದ ಕರ್ನಾಟಕಕ್ಕೆ ವಿದ್ಯಾಭ್ಯಾಸ, ಕಚೇರಿ ಕೆಲಸ, ವ್ಯಾಪಾರ-ವಹಿವಾಟು ಸೇರಿದಂತೆ ಇತರ ಕಾರಣಗಳಿಗೆ ದಿನಂಪ್ರತಿ ಭೇಟಿ ನೀಡುವವರು ಪ್ರತೀ 15 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿಯನ್ನು ಹೊಂದುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ಕೇರಳಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಮಹಾರಾಷ್ಟ್ರದ ಗಡಿ ಜಿಲ್ಲೆಗಳಾದ ಬೆಳಗಾವಿ, ವಿಜಾಪುರ, ಕಲಬುರಗಿ, ಬೀದರ್ ಮೂಲಕ ರಾಜ್ಯಕ್ಕೆ ಪ್ರವೇಶಿಸುವ ವಾಹನಗಳ (ಚಾಲಕರು/ಸಹಾಯಕರು/ಪ್ರಯಾಣಿಕರು) ತಪಾಸಣೆಗೆ ಚೆಕ್‌ಪೋಸ್ಟ್‌ಗಳನ್ನು ತೆರೆಯಬೇಕು ಮತ್ತು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ವ್ಯವಸ್ಥೆಗೊಳಿಸಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.

ಆದರೆ ಸಾಂವಿಧಾನಿಕ ಕಾರ್ಯಕಾರಿಗಳು/ವೈದ್ಯರು/ವೈದ್ಯಕೀಯ ಸಿಬ್ಬಂದಿ ವರ್ಗ ಮತ್ತು ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ ಕೇರಳದಿಂದ ತುರ್ತು ಸಂದರ್ಭದಲ್ಲಿ (ಕುಟುಂಬದಲ್ಲಿ ಮರಣ ಸಂಭವಿಸಿದಲ್ಲಿ/ವೈದ್ಯಕೀಯ ಚಿಕಿತ್ಸೆ ಇತ್ಯಾದಿ)ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರ ಮಾದರಿಗಳನ್ನು ಪರೀಕ್ಷೆಗಾಗಿ ಕರ್ನಾಟಕದಲ್ಲೇ ಸಂಗ್ರಹಿಸಬೇಕು. ಈ ಪ್ರಯಾಣಿಕರ ಹೆಸರು/ವಿಳಾಸ/ಸಂಪರ್ಕ ಸಂಖ್ಯೆ ಇತ್ಯಾದಿ ಪೂರ್ಣ ವಿವರಗಳನ್ನು ಗುರುತಿನ ಚೀಟಿಯ ಆಧಾರದ ಮೇಲೆ ಪಡೆಯಲು ಮತ್ತು ಆರ್‌ಟಿಪಿಸಿಆರ್ ಪರೀಕ್ಷೆಯ ವರದಿಯ ಆಧಾರದ ಮೇಲೆ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಶಿಷ್ಟಾಚಾರದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

 ಮೇಘಾಲಯ: ಚಿಕನ್, ಮಟನ್ ಗಿಂತ ಹೆಚ್ಚು ಬೀಫ್ ತಿನ್ನಿ ಎಂದ ಬಿಜೆಪಿ ಸಚಿವ!

ಮೇಘಾಲಯ: ಚಿಕನ್, ಮಟನ್ ಗಿಂತ ಹೆಚ್ಚು ಬೀಫ್ ತಿನ್ನಿ ಎಂದ ಬಿಜೆಪಿ ಸಚಿವ!


 ಮೇಘಾಲಯ: ಚಿಕನ್, ಮಟನ್ ಗಿಂತ ಹೆಚ್ಚು ಬೀಫ್ ತಿನ್ನಿ ಎಂದ ಬಿಜೆಪಿ ಸಚಿವ!

ಶಿಲ್ಲಾಂಗ್ : ಚಿಕನ್, ಮಟನ್ ಹಾಗೂ ಮೀನಿಗಿಂತ ಹೆಚ್ಚಾಗಿ ರಾಜ್ಯದ ಜನರು ಬೀಫ್ ತಿನ್ನಬೇಕೆಂದು ಹೇಳಿ ಮೇಘಾಲಯದ ಬಿಜೆಪಿ ಸರಕಾರದಲ್ಲಿ ಸಚಿವರಾಗಿರುವ ಸನ್ಬೋರ್ ಶುಲ್ಲೈ ಹೇಳಿದ್ದಾರೆ.

ಕಳೆದ ವಾರವಷ್ಟೇ ಸಂಪುಟಕ್ಕೆ ಸೇರ್ಪಡೆಗೊಂಡ ಹಾಗೂ ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಖಾತೆಯ ಜವಾಬ್ದಾರಿ ಹೊತ್ತಿರುವ ಈ ಹಿರಿಯ ನಾಯಕನ ಹೇಳಿಕೆ ಸಾಕಷ್ಟು ಚರ್ಚೆಗೀಡಾಗಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರಿಗೂ ತಮಗಿಷ್ಟವಾದುದನ್ನು ತಿನ್ನುವ ಸ್ವಾತಂತ್ರ್ಯವಿದೆ ಎಂದೂ ಅವರು ಹೇಳಿದ್ದಾರೆ.

"ಚಿಕನ್, ಮಟನ್ ಅಥವಾ ಮೀನಿಗಿಂತ ಜನರು ಹೆಚ್ಚು ಬೀಫ್ ತಿನ್ನಲು ನಾನು ಪ್ರೋತ್ಸಾಹಿಸುತ್ತೇನೆ. ಹೀಗೆ ಮಾಡುವುದರಿಂದ, ಬಿಜೆಪಿ ಸರಕಾರ ಗೋಹತ್ಯೆಯ ಮೇಲೆ ನಿಷೇಧ ಹೇರಲಿದೆ ಎಂಬ ಭಾವನೆ ದೂರವಾಗಲಿದೆ,'' ಎಂದು ಶುಕ್ರವಾರ ಸುದ್ದಿಗಾರರ ಜತೆ ಮಾತನಾಡುತ್ತಾ ಅವರು ಹೇಳಿದ್ದಾರೆ.

ನೆರೆಯ ಅಸ್ಸಾಂ ರಾಜ್ಯದಲ್ಲಿ ಹೊಸ ಗೋ ಕಾಯಿದೆ ಜಾರಿಯಾಗಿರುವುದರಿಂದ ಅಲ್ಲಿಂದ ಮೇಘಾಲಯಕ್ಕೆ ಗೋಸಾಗಾಟ ಬಾಧಿತವಾಗದಂತೆ ನೋಡಿಕೊಳ್ಳಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರಿಗೆ ಪತ್ರ ಬರೆಯುವುದಾಗಿಯೂ ಅವರು ತಿಳಿಸಿದ್ದಾರೆ.

 ಎಬಿವಿಪಿ ದೂರಿನ ನಂತರ ಪೊಲೀಸರ ಎಚ್ಚರಿಕೆ: ವೆಬಿನಾರ್ ನಿಂದ ಹಿಂದೆ ಸರಿದ ಮಧ್ಯಪ್ರದೇಶ ವಿವಿ

ಎಬಿವಿಪಿ ದೂರಿನ ನಂತರ ಪೊಲೀಸರ ಎಚ್ಚರಿಕೆ: ವೆಬಿನಾರ್ ನಿಂದ ಹಿಂದೆ ಸರಿದ ಮಧ್ಯಪ್ರದೇಶ ವಿವಿ


 ಎಬಿವಿಪಿ ದೂರಿನ ನಂತರ ಪೊಲೀಸರ ಎಚ್ಚರಿಕೆ: ವೆಬಿನಾರ್ ನಿಂದ ಹಿಂದೆ ಸರಿದ ಮಧ್ಯಪ್ರದೇಶ ವಿವಿ

ಹೊಸದಿಲ್ಲಿ: ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯ ಡಾ ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗವು  ಆಯೋಜಿಸಿದ್ದ ವೆಬಿನಾರ್ ಒಂದು ಆರಂಭಗೊಳ್ಳಲು ಕೆಲವೇ ಗಂಟೆಗಳಿರುವಾಗ ವಿಶ್ವವಿದ್ಯಾಲಯ ಅದರ ಆಯೋಜಕತ್ವದಿಂದ ಹಿಂದೆ ಸರಿದಿದೆ. ಧಾರ್ಮಿಕ ಮತ್ತು ಜಾತಿ ಭಾವನೆಗಳಿಗೆ ನೋವುಂಟು ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ಪೊಲೀಸರು ವಿವಿ ಉಪಕುಲಪತಿಗಳಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ವೆಬಿನಾರ್ ನಿಂದ ವಿವಿ ಹಿಂದೆ ಸರಿದಿದೆ. ಎಬಿವಿಪಿ ಈ ಕುರಿತಂತೆ ದಾಖಲಿಸಿದ ದೂರಿನ ಆಧಾರದಲ್ಲಿ ಪೊಲೀಸರು ಇಂತಹ ಕ್ರಮ ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.

ಈ ವೆಬಿನಾರ್‍ನಲ್ಲಿ ಮಾಜಿ ಸಿಎಸ್‍ಐಆರ್ ವಿಜ್ಞಾನಿ ಗೌಹರ್ ರಝಾ, ದಿಲ್ಲಿ ವಿವಿಯ ಪ್ರೊಫೆಸರ್ ಅಪೂರ್ವಾನಂದ್, ಮೆಸಾಚುಸೆಟ್ಸ್ ನ ಬ್ರಿಡ್ಜ್ ವಾಟರ್ ಸ್ಟೇಟ್ ವಿವಿಯ ಸಹಾಯಕ ಪ್ರೊಫೆಸರ್ ಡಾ ಅಸೀಂ ಹಸ್ನೈನ್ ಹಾಗೂ ಐಐಟಿ ಹೈದರಾಬಾದ್‍ನ ಪ್ರೊಫೆಸರ್ ಹರ್ಜಿಂದರ್ ಸಿಂಗ್ ಭಾಗವಹಿಸುವವರಿದ್ದರು. "ವೈಜ್ಞಾನಿಕ ಮನೋಭಾವನೆ  ಬೆಳೆಸುವಲ್ಲಿ ಸಾಂಸ್ಕೃತಿಕ ಮತ್ತು ಭಾಷಾ ಅಡ್ಡಿಗಳು" ಎಂಬ ವಿಚಾರದಲ್ಲಿ ಈ ವೆಬಿನಾರ್ ಅನ್ನು ಗುರುವಾರ ಅಮೆರಿಕಾದ ಮೊಂಟ್‍ಕ್ಲೇರ್ ಸ್ಟೇಟ್ ವಿವಿ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

ವೆಬಿನಾರ್ ಶುಕ್ರವಾರ ನಿಗದಿಯಂತೆ ನಡೆದರೂ ಹರಿಸಿಂಗ್ ಗೌರ್ ವಿವಿ ಅದರ ಸಂಚಾಲಕ ಸ್ಥಾನದಿಂದ ಹಿಂದೆ ಸರಿದಿತ್ತು.

ಈ ವೆಬಿನಾರ್ ನಲ್ಲಿ ರಝಾ ಹಾಗೂ ಅಪೂರ್ವಾನಂದ್ ಅವರ ಭಾಗವಹಿಸುವಿಕೆಯನ್ನು ಪ್ರಶ್ನಿಸಿ ಎಬಿವಿಪಿ ಪೊಲೀಸರಿಗೆ ದೂರಿತ್ತೆನ್ನಲಾಗಿದ್ದು ಅವರಿಬ್ಬರು ದೇಶವಿರೋಧಿ ಭಾವನೆಗಳನ್ನು ಹೊಂದಿದ್ದಾರೆ ಹಾಗೂ ಅಂತಹ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ವೆಬಿನಾರ್‍ನಲ್ಲಿ ಭಾಷಣ ಮಾಡಲಿರುವವರ ಪೂರ್ವ ಇತಿಹಾಸ ಅವರ ದೇಶವಿರೋಧ ಭಾವನೆ ಹಾಗೂ ಅವರು ಹಿಂದೆ ನೀಡಿರುವ ಜಾತಿ ಸಂಬಂಧಿ ಹೇಳಿಕೆಗಳ ಕುರಿತು ತಮಗೆ ಮಾಹಿತಿ ದೊರಕಿದೆ ಎಂದು ಸಾಗರ ಜಿಲ್ಲಾ ಎಸ್‍ಪಿ ಅತುಲ್ ಸಿಂಗ್ ಅವರು ವಿವಿಗೆ ಗುರುವಾರ ಕಳುಹಿಸಿದ ಪತ್ರದಲ್ಲಿ ವಿವರಿಸಲಾಗಿದೆ.

ವೆಬಿನಾರ್‍ನಲ್ಲಿ ಚರ್ಚೆಯಾಗುವ ವಿಷಯಗಳು ಹಾಗೂ ಅಲ್ಲಿ ಪ್ರಸ್ತುತಪಡಿಸಲಾಗುವ ವಿಚಾರಗಳ ಕುರಿತು  ಮುಂಚಿತವಾಗಿಯೇ ನಿರ್ಧರಿಸಬೇಕು ಹಾಗೂ ಸಾರ್ವಜನಿಕವಾಗಿ ಸಮಸ್ಯೆಯುಂಟುಮಾಡುವ ಹೇಳಿಕೆಗಳಿಗೆ ಐಪಿಸಿ ಸೆಕ್ಷನ್ 505 ಅನ್ವಯ  ಕ್ರಮ ಕೈಗೊಳ್ಳಲಾಗುವುದು ಎಂದೂ ಪತ್ರದಲ್ಲಿ ಎಚ್ಚರಿಸಲಾಗಿದೆಯೆನ್ನಲಾಗಿದೆ.

 ಪಾಕಿಸ್ತಾನದ ಇಬ್ಬರು ನುಸುಳುಕೋರರನ್ನು ಗುಂಡಿಕ್ಕಿ ಕೊಂದ ಬಿಎಸ್ ಎಫ್

ಪಾಕಿಸ್ತಾನದ ಇಬ್ಬರು ನುಸುಳುಕೋರರನ್ನು ಗುಂಡಿಕ್ಕಿ ಕೊಂದ ಬಿಎಸ್ ಎಫ್


 ಪಾಕಿಸ್ತಾನದ ಇಬ್ಬರು ನುಸುಳುಕೋರರನ್ನು ಗುಂಡಿಕ್ಕಿ ಕೊಂದ ಬಿಎಸ್ ಎಫ್

ಚಂಡೀಗಡ: ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪಂಜಾಬಿನ ತಾರ್ನ್ ತರನ್ ಜಿಲ್ಲೆಯಲ್ಲಿ ಇಬ್ಬರು ಪಾಕಿಸ್ತಾನಿ ನುಸುಳುಕೋರರನ್ನು ಗಡಿ ಭದ್ರತಾ ಪಡೆ ಗುಂಡಿಕ್ಕಿ ಸಾಯಿಸಿದೆ ಎಂದು ಬಿಎಸ್ ಎಫ್ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಬಿಎಸ್‌ಎಫ್ ಪಡೆಗಳು ಶುಕ್ರವಾರ ರಾತ್ರಿ 8.48 ಕ್ಕೆ ಗಡಿ ಬೇಲಿ ಬಳಿ ಅನುಮಾನಾಸ್ಪದ ಚಲನವಲನವನ್ನು ಗಮನಿಸಿವೆ ಎಂದು ಅವರು ಹೇಳಿದರು.

ಬಿಎಸ್‌ಎಫ್ ಸಿಬ್ಬಂದಿ ನುಸುಳುಕೋರರನ್ನು ನಿಲ್ಲುವಂತೆ ಕೇಳಿದರು. ಆದರೆ ಅವರು ಪದೇ ಪದೇ ಎಚ್ಚರಿಕೆ ನೀಡಿದರೂ ಅದನ್ನು ಗಮನಿಸಲಿಲ್ಲ. ಬೆದರಿಕೆಯನ್ನು ಗ್ರಹಿಸಿದ ಬಿಎಸ್‌ಎಫ್ ಪಡೆಗಳು ಗುಂಡಿನ ದಾಳಿ ನಡೆಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಒಲಿಂಪಿಕ್ಸ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ರೋಚಕ ಜಯ, ಕ್ವಾರ್ಟರ್ ಫೈನಲ್ ಆಸೆ ಜೀವಂತ

ಒಲಿಂಪಿಕ್ಸ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ರೋಚಕ ಜಯ, ಕ್ವಾರ್ಟರ್ ಫೈನಲ್ ಆಸೆ ಜೀವಂತ


 ಒಲಿಂಪಿಕ್ಸ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ರೋಚಕ ಜಯ, ಕ್ವಾರ್ಟರ್ ಫೈನಲ್ ಆಸೆ ಜೀವಂತ

ಟೋಕಿಯೊ: ಭಾರತದ ಮಹಿಳಾ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್ ನ ಎ ಗುಂಪಿನ ಕೊನೆಯ  ಪಂದ್ಯದಲ್ಲಿ ಕೆಳ ಶ್ರೇಯಾಂಕದ ದ.ಆಫ್ರಿಕಾ ತಂಡವನ್ನು 4-3 ಗೋಲುಗಳ ಅಂತರದಿಂದ ಸೋಲಿಸಿದೆ. ಸತತ 2ನೇ ಜಯ ದಾಖಲಿಸಿದ ಭಾರತವು ಒಲಿಂಪಿಕ್ಸ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪುವ ಆಸೆ ಜೀವಂತವಾಗಿರಿಸಿಕೊಂಡಿದೆ.

ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಪರವಾಗಿ ವಂದನಾ ಕಟಾರಿಯ(4ನೇ, 17ನೇ, 49ನೇ ನಿಮಿಷ)ಹ್ಯಾಟ್ರಿಕ್ ಗೋಲು ಗಳಿಸಿದರು. ಯುವ ಆಟಗಾರ್ತಿ ನೇಹಾ ಗೋಯಲ್(32ನೇ ನಿ.)ಏಕೈಕ ಗೋಲು ಗಳಿಸಿದರು.

ದ.ಆಫ್ರಿಕಾದ ಪರವಾಗಿ ಟರಿನ್ ಗ್ಲಾಸ್ಬಿ(15ನೇ ನಿ.), ನಾಯಕಿ ಎರಿನ್ ಹಂಟರ್(30ನೇ ನಿ.)ಹಾಗೂ ಮರಿಝನ್ ಮರಾಯಸ್(39ನೇ)ತಲಾ 1 ಗೋಲು ಗಳಿಸಿದರು.

ಎ ಗುಂಪಿನ ಕೊನೆಯ 2 ಪಂದ್ಯಗಳಲ್ಲಿ ಜಯ ಸಾಧಿಸಿರುವ  ಭಾರತವು 5 ಪಂದ್ಯಗಳಲ್ಲಿ ಒಟ್ಟು 6 ಅಂಕವನ್ನು ಗಳಿಸಿದೆ.

ಶನಿವಾರ ನಡೆಯಲಿರುವ ಗ್ರೇಟ್ ಬ್ರಿಟನ್ ಹಾಗೂ ಐರ್ಲೆಂಡ್ ನಡುವಿನ ಕೊನೆಯ ಎ ಗುಂಪಿನ ಪಂದ್ಯದ ಫಲಿತಾಂಶದ ಮೇಲೆ ಭಾರತದ ಮುಂದಿನ ಸುತ್ತಿನ ಭವಿಷ್ಯ ನಿಂತಿದೆ. ಐರ್ಲೆಂಡ್ ತಂಡ ಸೋತರೆ ಇಲ್ಲವೇ ಡ್ರಾ ಸಾಧಿಸಿದರೆ ಭಾರತವು ಕ್ವಾರ್ಟರ್ ಫೈನಲ್ ತಲುಪಲಿದೆ.

Friday, 30 July 2021

 ಗಡಿ ಸಂಘರ್ಷ: ಅಸ್ಸಾಂ ಸಿಎಂ ವಿರುದ್ಧ ಮಿಜೋರಾಂ ಪೊಲೀಸರಿಂದ ಪ್ರಕರಣ

ಗಡಿ ಸಂಘರ್ಷ: ಅಸ್ಸಾಂ ಸಿಎಂ ವಿರುದ್ಧ ಮಿಜೋರಾಂ ಪೊಲೀಸರಿಂದ ಪ್ರಕರಣ


 ಗಡಿ ಸಂಘರ್ಷ: ಅಸ್ಸಾಂ ಸಿಎಂ ವಿರುದ್ಧ ಮಿಜೋರಾಂ ಪೊಲೀಸರಿಂದ ಪ್ರಕರಣ

ಗುವಾಹತಿ: ಎರಡು ಈಶಾನ್ಯ ರಾಜ್ಯಗಳ ನಡುವಿನ ಗಡಿ ವಿವಾದದ ನಡುವೆಯೇ ಮಿಜೋರಾಂ ಪೊಲೀಸರು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ವಿರುದ್ಧ ಎಫ್.ಐ.ಆರ್. ದಾಖಲಿಸಿದ್ದಾರೆ. ಹಿಮಾಂತ ಬಿಸ್ವ ಶರ್ಮಾ ಆಡಳಿತದ ಆರು ಮಂದಿ ಉನ್ನತ ಅಧಿಕಾರಿಗಳು ಹಾಗೂ 200 ಮಂದಿ ಅನಾಮಧೇಯ ಪೊಲೀಸ್ ಸಿಬ್ಬಂದಿಯ ಹೆಸರನ್ನೂ ಪ್ರಕರಣದಲ್ಲಿ ಸೇರಿಸಲಾಗಿದೆ.

ಪ್ರಕರಣದಲ್ಲಿ ಹೆಸರಿಸಿರುವ ಪೊಲೀಸ್ ಅಧಿಕಾರಿಗಳ ಪೈಕಿ ಅಸ್ಸಾಂ ಇನ್‌ಸ್ಪೆಕ್ಟರ್ ಜನರಲ್, ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಹಾಗೂ ಪೊಲೀಸ್ ಅಧೀಕ್ಷಕರ ಹೆಸರೂ ಸೇರಿದೆ. ಕಚಾರ್ ಜಿಲ್ಲಾಧಿಕಾರಿ ಹೆಸರೂ ಎಫ್‌ಐಆರ್‌ನಲ್ಲಿ ದಾಖಲಾಗಿದೆ.

ಅಸ್ಸಾಂನ ಕಚಾರ್ ಗಡಿಗೆ ಹೊಂದಿಕೊಂಡಿರುವ ಮಿಜೋರಾಂನ ಕೊಲಾಸಿಬ್ ಜಿಲ್ಲೆಯ ವೈರೆಂಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದಕ್ಕೂ ಮುನ್ನ ಅಸ್ಸಾಂ ಪೊಲೀಸರು ಮಿಜೋರಾಂ ಸಂಸದ ಸೇರಿದಂತೆ ಹಲವು ಮಂದಿ ಗಣ್ಯರ ವಿರುದ್ಧ ಸಮನ್ಸ್ ಜಾರಿ ಮಾಡಿದ್ದರು. ಸಮನ್ಸ್ ನೀಡುವ ಸಲುವಾಗಿ ಪೊಲೀಸರು ಹೊಸದಿಲ್ಲಿಯಲ್ಲಿ ಸಂಸದರ ನಿವಾಸಕ್ಕೆ ಭೇಟಿ ನೀಡಿದ್ದರು. ಹಲವು ದಶಕಗಳಿಂದ ಉಭಯ ರಾಜ್ಯಗಳ ನಡುವೆ ಗಡಿ ವಿವಾದವಿದ್ದರೂ, ಈ ವಾರ ಅದು ಉಲ್ಬಣಗೊಂಡಿತ್ತು.

ಕಳೆದ ಸೋಮವಾರ ಈ ಎರಡು ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದ್ದು, ಆರು ಮಂದಿ ಅಸ್ಸಾಂ ಪೊಲೀಸರು ಹತರಾಗಿದ್ದರು. ಎರಡೂ ಕಡೆಗಳ ಪೊಲೀಸರಿಗೆ ಗಾಯಗಳಾಗಿದ್ದವು. ಹಿಂಸೆಗೆ ಪರಸ್ಪರರ ಮೇಲೆ ದೋಷಾರೋಪ ಮಾಡಲಾಗುತ್ತಿದೆ.

 ಕೇರಳ: ಕೋವಿಡ್ ಪ್ರಕರಣಗಳ ಏರಿಕೆ ನಡುವೆಯೇ ಲಸಿಕೆ ಕೊರತೆ

ಕೇರಳ: ಕೋವಿಡ್ ಪ್ರಕರಣಗಳ ಏರಿಕೆ ನಡುವೆಯೇ ಲಸಿಕೆ ಕೊರತೆ


 ಕೇರಳ: ಕೋವಿಡ್ ಪ್ರಕರಣಗಳ ಏರಿಕೆ ನಡುವೆಯೇ ಲಸಿಕೆ ಕೊರತೆ

ಹೊಸದಿಲ್ಲಿ: ಕೇರಳದಲ್ಲಿ ಶೇಕಡ 50ಕ್ಕಿಂತಲೂ ಅಧಿಕ ಮಂದಿಗೆ ಇನ್ನೂ ಕೋವಿಡ್-19 ಸೋಂಕು ತಗುಲಿಲ್ಲವಾದ ಕಾರಣ, ಕೋವಿಡ್‌ನ ಪ್ರಸಕ್ತ ಟ್ರೆಂಡ್ ನಿರೀಕ್ಷಿತವಾಗಿತ್ತು ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಈ ಸಾಂಕ್ರಾಮಿಕವನ್ನು ನಿಭಾಯಿಸಲು ಯೋಜಿತ ಕಾರ್ಯಕ್ರಮದ ಫಲಿತಾಂಶ ಇದೀಗ ಕಂಡುಬರುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ನಮ್ಮ ರಕ್ಷಣಾತ್ಮಕ ಕ್ರಮಗಳು ಅತ್ಯುತ್ತಮವಾಗಿವೆ" ಎಂದು ಹೇಳಿರುವ ಅವರು, ಇದೀಗ ನಮ್ಮ ಗಮನ ಇರುವುದು ಲಸಿಕೆಯ ಬಗ್ಗೆ. ಆದರೆ ರಾಜ್ಯದಲ್ಲಿ ಶೀಘ್ರವಾಗಿ ಲಸಿಕೆ ಬರಿದಾಗುತ್ತಿದೆ ಎಂದು ಹೇಳಿದ್ದಾರೆ.

"ಕೇರಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇದನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ? ಆಸ್ಪತ್ರೆಗಳಲ್ಲಿ ರೋಗಿಗಳು ಭರ್ತಿಯಾಗಿರುವ ಅಂಕಿಅಂಶವನ್ನು ನೋಡಿ. ಆಸ್ಪತ್ರೆಗಳಿಗೆ, ಐಸಿಯು ಬೆಡ್‌ಗಳಿಗೆ ಮತ್ತು ಆಮ್ಲಜನಕ ಬೆಂಬಲಕ್ಕೆ ಕೂಡಾ ಬೇಡಿಕೆ ಕಡಿಮೆ ಇದೆ. ಅಂದರೆ ರೋಗದ ತೀವ್ರತೆ ಕಡಿಮೆ ಇದೆ ಎಂಬ ಅರ್ಥ" ಎಂದು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಭಿಪ್ರಾಯಪಟ್ಟರು.

"ಕೆಲ ವಾರ ಹಿಂದೆ ಕೇಂದ್ರ ತಂಡ ಕೇರಳದ ವಿವಿಧ ಪ್ರದೇಶಗಳಿಗೆ, ಆಸ್ಪತ್ರೆಗಳಿಗೆ ಭೇಟಿ ನೀಡಿತ್ತು. ಹಲವು ಜಿಲ್ಲೆಗಳಿಗೂ ತಂಡ ತೆರಳಿತ್ತು. ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ತಂಡದ ಸದಸ್ಯರು ತೃಪ್ತಿ ವ್ಯಕ್ತಪಡಿಸಿದರು. ಈ ಹಂತದಲ್ಲಿ ಪ್ರಕರಣಗಳ ಪ್ರಮಾಣ ಕಡಿಮೆಯಾಗುವುದು ನಿರೀಕ್ಷಿತ ಎಂದು ಅವರು ಹೇಳಿದ್ದಾರೆ"" ಎಂದು ವಿವರಿಸಿದರು. ಈ ಬಗ್ಗೆ ಇತರ ಹಲವು ತಜ್ಞರು ಮತ್ತು ವೈರಾಣು ತಜ್ಞರು ಕೂಡಾ ಈ ಬಗ್ಗೆ ಮರು ಖಾತರಿ ನೀಡಿದ್ದಾರೆ ಎಂದು ವಿವರಿಸಿದರು.

ಶುಕ್ರವಾರ ಕೇರಳದಲ್ಲಿ 20,772 ಪ್ರಕರಣಗಳು ವರದಿಯಾಗಿದ್ದು, ಸತತ ನಾಲ್ಕನೇ ದಿನ 20 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದವು. ಟಿಪಿಆರ್ (ಪರೀಕ್ಷೆ ಧನಾತ್ಮಕತೆ ದರ) 13.61ರಷ್ಟಾಗಿದೆ. 116 ಮಂದಿ ಸಾವಿಗೀಡಾಗಿದ್ದಾರೆ.

ಜುಲೈ 29ರವರೆಗೆ ದೇಶದಲ್ಲಿ ವರದಿಯಾಗುತ್ತಿರುವ ಒಟ್ಟು ಪ್ರಕರಣಗಳ ಪೈಕಿ ಶೇಕಡ 50ರಷ್ಟು ಪ್ರಕರಣಗಳು ಕೇರಳದಿಂದ ವರದಿಯಾಗುತ್ತಿವೆ. ದೇಶದ ಶೇಕಡ 40ರಷ್ಟು ಸಕ್ರಿಯ ಪ್ರಕರಣಗಳು ಈ ರಾಜ್ಯದಲ್ಲಿವೆ. ದೈನಿಕ ಪ್ರಕರಣಗಳ ಏರಿಕೆ ಪ್ರಮಾಣ ಶೇಕಡ 50ರಷ್ಟಿದ್ದು, ರಾಷ್ಟ್ರಮಟ್ಟದಲ್ಲಿ ಇದು ಶೇಕಡ 6ರಷ್ಟಿದೆ.

ಎಸ್ ಎಸ್ ಎಫ್  ಚಿಕ್ಕಮಂಗಳೂರು ಜಿಲ್ಲಾ ಬ್ಲಡ್ ಸೈಬೋ ಇಂದು

ಎಸ್ ಎಸ್ ಎಫ್ ಚಿಕ್ಕಮಂಗಳೂರು ಜಿಲ್ಲಾ ಬ್ಲಡ್ ಸೈಬೋ ಇಂದು


ಎಸ್ ಎಸ್ ಎಫ್  ಚಿಕ್ಕಮಂಗಳೂರು ಜಿಲ್ಲಾ ಬ್ಲಡ್ ಸೈಬೋ ಇಂದು  

ದಿನಾಂಕ 31-7-21 ಶನಿವಾರ ಬೆಳಿಗ್ಗೆ 9ಗಂಟೆಗೆ ಎಸ್ ಎಸ್ ಎಫ್  ಚಿಕ್ಕಮಂಗಳೂರು ಜಿಲ್ಲಾ ಬ್ಲಡ್ ಸೈಬೋ  ಇದರ 9ನೇ ರಕ್ತದಾನ ಶಿಬಿರವನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಸಹಯೋಗದಿಂದ ಎಸ್ ಎಸ್ ಎಫ್  ಕೊಪ್ಪ ಡಿವಿಷನ್ ವ್ಯಾಪ್ತಿಯಲ್ಲಿ ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆಸಲು ತೀರ್ಮಾನಿಸಿದ್ದೇವೆ. ಈ ಶಿಬಿರಕ್ಕೆ ತಾವುಗಳು ಬಂದು ಸಂಪೂರ್ಣ ಸಹಕರಿಸಬೇಕಾಗಿ ವಿನಂತಿ.

   


ಅಂತರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ ಆಗಸ್ಟ್ 31ರ ವರೆಗೆ ವಿಸ್ತರಣೆ

ಅಂತರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ ಆಗಸ್ಟ್ 31ರ ವರೆಗೆ ವಿಸ್ತರಣೆ


ಅಂತರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ ಆಗಸ್ಟ್ 31ರ ವರೆಗೆ ವಿಸ್ತರಣೆ

ಹೊಸದಿಲ್ಲಿ, ಜು. 30: ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ಆಗಸ್ಟ್ 31ರ ವರೆಗೆ ವಿಸ್ತರಿಸಲಾಗಿದೆ ಎಂದು ಡಿಜಿಸಿಎ ನಿಯಂತ್ರಣಾಧಿಕಾರಿ ಶುಕ್ರವಾರ ತಿಳಿಸಿದ್ದಾರೆ. ಆದರೆ, ಪರಿಸ್ಥಿತಿಗೆ ಅನುಗುಣವಾಗಿ ನಿಗದಿತ ಮಾರ್ಗದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಸಂಬಂಧಿತ ಪ್ರಾಧಿಕಾರ ಅವಕಾಶ ನೀಡಲಿದೆ ಎಂದು ಅದು ತಿಳಿಸಿದೆ. 

ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು 2020 ಮಾರ್ಚ್ 23ರಂದು ರದ್ದುಗೊಳಿಸಲಾಗಿತ್ತು. ಆದರೆ, 2020 ಮೇಯಿಂದ ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ಹಾಗೂ 2020 ಜುಲೈಯಿಂದ ದ್ವಿಪಕ್ಷೀಯ ‘ಏಯರ್ ಬಬಲ್’ ವ್ಯವಸ್ಥೆ ಅಡಿಯಲ್ಲಿ ನಿಗದಿತ ರಾಷ್ಟ್ರಗಳಿಗೆ ವಿಶೇಷ ಅಂತಾರಾಷ್ಟ್ರೀಯ ವಿಮಾನಗಳು ಸಂಚಾರ ನಡೆಸುತ್ತಿದ್ದವು. 

ಭಾರತ ಅಮೆರಿಕ, ಬ್ರಿಟನ್, ಯುಎಇ, ಕೆನ್ಯಾ, ಭೂತಾನ್ ಹಾಗೂ ಫ್ರಾನ್ಸ್ ಸೇರಿದಂತೆ ಸುಮಾರು 24 ದೇಶಗಳೊಂದಿಗೆ ‘ಏರ್ ಬಬಲ್’ ಒಪ್ಪಂದ ಮಾಡಿಕೊಂಡಿದೆ. ಉಭಯ ರಾಷ್ಟ್ರಗಳ ನಡುವಿನ ‘ಏರ್ ಬಬಲ್’ ಒಪ್ಪಂದದ ಅಡಿಯಲ್ಲಿ ಉಭಯ ರಾಷ್ಟ್ರಗಳ ವಿಮಾನ ಯಾನ ಸಂಸ್ಥೆಗಳು ವಿಶೇಷ ಅಂತಾರಾಷ್ಟ್ರೀಯ ವಿಮಾನಗಳು ಯಾನ ನಡೆಸಬಹುದಾಗಿತ್ತು. ಅಂತಾರಾಷ್ಟ್ರೀಯ ಕಾರ್ಗೋ ವಿಮಾನಗಳ ಸಂಚಾರಕ್ಕೆ ಈ ನಿರ್ಬಂಧ ಅನ್ವಯವಾಗುವುದಿಲ್ಲ ಎಂದು ಡಿಜಿಸಿಎ ಸುತ್ತೋಲೆ ತಿಳಿಸಿದೆ.

 ಕೇರಳದಲ್ಲಿ ಹಾಡಹಗಲೇ ವಿದ್ಯಾರ್ಥಿನಿಗೆ ಗುಂಡಿಟ್ಟು ಹತ್ಯೆ

ಕೇರಳದಲ್ಲಿ ಹಾಡಹಗಲೇ ವಿದ್ಯಾರ್ಥಿನಿಗೆ ಗುಂಡಿಟ್ಟು ಹತ್ಯೆ


ಕೇರಳದಲ್ಲಿ ಹಾಡಹಗಲೇ ವಿದ್ಯಾರ್ಥಿನಿಗೆ ಗುಂಡಿಟ್ಟು ಹತ್ಯೆ

ಕೊಚ್ಚಿ: ಕೇರಳದಲ್ಲಿ ಹಾಡಹಗಲೇ ಭೀಕರ ಕೊಲೆ ನಡೆದಿದ್ದು, ದಂತ ವೈದ್ಯಕೀಯ ವಿದ್ಯಾರ್ಥಿನಿಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಕೇರಳದ ಕೊಚ್ಚಿಯಿಂದ 35 ಕಿಮೀ ದೂರದಲ್ಲಿರುವ ಕೋತಮಂಗಲಂ ಸಮೀಪದ ನೆಲ್ಲಿಕುಳಿಯಲ್ಲಿ ಈ ಘಟನೆ ನಡೆದಿದೆ. 240 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿನಿ ಪಿವಿ ಮಾನಸ ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಪೊಲೀಸರ ಪ್ರಕಾರ, ಕೊಲೆಗಾರನನ್ನು ರಾಖಿಲ್ (24 ವರ್ಷ|) ಎಂದು ಗುರುತಿಸಲಾಗಿದ್ದು, ಮಾನಸ ಪಿ ವಿ (24) ನಾಲ್ಕನೇ ವರ್ಷದ ವಿದ್ಯಾರ್ಥಿಯಾಗಿದ್ದರು. ಕೋತಮಂಗಲಂನ ಇಂದಿರಾಗಾಂಧಿ ಕಾಲೇಜಿನಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. ಆರೋಪಿ ಮತ್ತು ಸಂತ್ರಸ್ಥೆ ಇಬ್ಬರೂ ಕಣ್ಣೂರು ಜಿಲ್ಲೆಯವರು ಎಂದು ತಿಳಿದುಬಂದಿದೆ. ಇಬ್ಬರ ನಡುವಿನ ವೈಯಕ್ತಿಕ ದ್ವೇಷವೇ ಕೊಲೆಗೆ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಕೊತಮಂಗಲಂನ ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಬಳಿ ಮಧ್ಯಾಹ್ನ 3: 30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಾನಸ ಪೇಯಿಂಗ್ ಗೆಸ್ಟ್ ಆಗಿ ವಾಸಿಸುತ್ತಿದ್ದ ಸ್ಥಳದ ಸಮೀಪದಲ್ಲೇ ಈ ಘಟನೆ ನಡೆದಿದೆ.

ಮಾನಸ ಪಿಜಿಯಲ್ಲಿರುವಾಗಲೇ ಕಾರಿನಲ್ಲಿ ಬಂದ ದುಷ್ಕರ್ಮಿ ರಾಖಿಲ್ ನೇರವಾಗಿ ಪಿಜಿಯೊಳಗೆ ನುಗ್ಗಿ ಮಾನಸ ಮೇಲೆ ಗುಂಡು ಹಾರಿಸಿದ್ದಾನೆ. ಈ ಬಗ್ಗೆ ಹೆಚ್ಚಿನ ವಿವರ ಕಲೆಹಾಕುತ್ತಿದ್ದೇವೆ ಎಂದು ಕೋತಮಂಗಲಂ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಹಿಂದೆ ತಮ್ಮ ಮಗಳನ್ನು ಹಿಂಬಾಲಿಸುತ್ತಿದ್ದ ಮತ್ತು ಕಿರುಕುಳ ನೀಡುತ್ತಿದ್ದ ಎಂದು ಮಾನಸ ಪೋಷಕರು ಈ ಹಿಂದೆ ಕಣ್ಣೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೇ ಕೋಪದಿಂದ ರಾಖಿಲ್ ಆಕೆಯನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ.


 ಏರ್ ಕಾರ್ಗೋ ಅಧಿಕಾರಿಗಳ ಕಾರ್ಯಾಚರಣೆ : 6 ಕೋಟಿ ಮೌಲ್ಯದ ರಕ್ತಚಂದನ ವಶ

ಏರ್ ಕಾರ್ಗೋ ಅಧಿಕಾರಿಗಳ ಕಾರ್ಯಾಚರಣೆ : 6 ಕೋಟಿ ಮೌಲ್ಯದ ರಕ್ತಚಂದನ ವಶ


ಏರ್ ಕಾರ್ಗೋ ಅಧಿಕಾರಿಗಳ ಕಾರ್ಯಾಚರಣೆ : 6 ಕೋಟಿ ಮೌಲ್ಯದ ರಕ್ತಚಂದನ ವಶ

ದೇವನಹಳ್ಳಿ: ಅಕ್ರಮವಾಗಿ ಸರಕು ಸಾಗಿಣಿಕೆಯ ಮೂಲಕ ವಿದೇಶಕ್ಕೆ ರಪ್ತು ಮಾಡಲು ಯತ್ನಿಸಿದ ರಕ್ತ ಚಂದನವನ್ನ ಏರ್ ಕಾರ್ಗೋ ಕಸ್ಟಮ್ಸ್ ಅಧಿಕಾರಿಗಳು‌ ವಶಪಡಿಸಿಕೊಂಡಿದ್ದಾರೆ.

ದೇವನಹಳ್ಳಿ‌ ಬಳಿಯ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಮೂಲಕ ದುಬೈಗೆ ಕೋಟಿ ಕೋಟಿ ಬೆಲೆ ಬಾಳುವ ರಕ್ತ ಚಂದನವನ್ನ ಕೆಲವರು ಪೈಪುಗಳೆಂದು ಹೇಳಿಕೊಂಡು ಪಾರ್ಸಲ್ ಮಾಡಿದ್ದಾರೆ. ಆದರೆ ಪಾರ್ಸಲ್ ಮೇಲೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಪಾರ್ಸಲ್ ಅನ್ನ ಒಪನ್ ಮಾಡಿ ನೋಡಿದಾಗ ಅದರಲ್ಲಿ ಆರು ಕೋಟಿಗೂ ಅಧಿಕ ಮೌಲ್ಯದ ರಕ್ತ ಚಂದನವನ್ನ ಪಾರ್ಸಲ್ ಮಾಡ್ತಿರೂದು ಬೆಳಕಿಗೆ ಬಂದಿದೆ.

ಹೀಗಾಗಿ ಪಾರ್ಸಲ್ ನಲ್ಲಿದ್ದ ರಕ್ತ ಚಂದನದ ತುಂಡುಗಳನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಯಾರು ಅಕ್ರಮವಾಗಿ ನಿಷೇದಿತ ರಕ್ತ ಚಂದನ ರವಾನೆ ಮಾಡ್ತಿದ್ರು ಅನ್ನೋ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


 ಶಿವಮೊಗ್ಗ; ಸಾಗರ ಬಳಿ ಕೆರೆಗೆ ಬಿದ್ದ ಕೆಎಸ್‌ಆರ್‌ಟಿಸಿ ಬಸ್

ಶಿವಮೊಗ್ಗ; ಸಾಗರ ಬಳಿ ಕೆರೆಗೆ ಬಿದ್ದ ಕೆಎಸ್‌ಆರ್‌ಟಿಸಿ ಬಸ್


ಶಿವಮೊಗ್ಗ; ಸಾಗರ ಬಳಿ ಕೆರೆಗೆ ಬಿದ್ದ ಕೆಎಸ್‌ಆರ್‌ಟಿಸಿ ಬಸ್

ಶಿವಮೊಗ್ಗ, ಜುಲೈ 30; ಸಾಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಈ ಅಪಘಾತದಲ್ಲಿ ಒಬ್ಬ ಪ್ರಯಾಣಿಕರು ಮೃತಪಟ್ಟಿದ್ದಾರೆ, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.

ಶುಕ್ರವಾರ ಬೆಳಗ್ಗೆ ಸಾಗರ ತಾಲೂಕಿನ ಕಾಸ್ಪಾಡಿ ಎಂಬಲ್ಲಿ 27 ಜನರಿದ್ದ ಕೆಎಸ್‌ಆರ್‌ಟಿಸಿ ಬಸ್ ಕೆರೆಗೆ ಉರುಳಿದೆ. ಪೊಲೀಸರು, ಅಗ್ನಿ ಶಾಮಕ ದಳ ಮತ್ತು ಸ್ಥಳೀಯರು ತಕ್ಷಣಾ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಪ್ರಯಾಣಿಕರನ್ನು ಬಸ್‌ನಿಂದ ಮೇಲೆ ಕರೆ ತಂದರು.

ಎದುರಿನಿಂದ ಬಂದ ಬೈಕ್‌ಗೆ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಚಾಲಕನ ನಿಯಂತ್ರಣತಪ್ಪಿದೆ. ರಸ್ತೆಯ ಪಕ್ಕದಲ್ಲಿದ್ದ ಕೆರೆಗೆ ಉರುಳಿದೆ. ಅಪಘಾತದಲ್ಲಿ ಶಿವಮೊಗ್ಗದ ಗುರುಪುರದ ನಿವಾಸಿ 35 ವರ್ಷದ ದೀಪಕ್ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ದೀಪಕ್ ಮತ್ತು ಶಬರೀಶ್ ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತಿತ್ತು. ಮಾರ್ಗ ಮಧ್ಯೆ ದೀಪಕ್ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಚಿಕ್ಕಪುಟ್ಟಗಾಯಗಳಾಗಿದ್ದ ಪ್ರಯಾಣಿಕರಿಗೆ ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಗರ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಸಹಕಾರ ನೀಡಿದರು. ಪ್ರಕರಣದ ಬಗ್ಗೆ ತನಿಖೆಯನ್ನು ಸಹ ನಡೆಸುತ್ತಿದ್ದಾರೆ.

ಸಾಗರದಿಂದ ಶಿವಮೊಗ್ಗ ಮೂಲಕ ದಾವಣಗೆರೆಗೆ ತೆರಳಬೇಕಿದ್ದ ಕೆಎಸ್‍ಆರ್‍ಟಿಸಿ ಬಸ್‍, ಕಾಸ್ಪಾಡಿ ಕ್ರಾಸ್‍ ಬಳಿ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ರಸ್ತೆ ಮಧ್ಯೆಕ್ಕೆ ಬಂದಿದೆ. ಬೈಕ್‍ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸುವ ಬಸ್ ಚಾಲಕನ ಪ್ರಯತ್ನ ವಿಫಲವಾಗಿದೆ. ಈ ವೇಳೆ ಬೈಕ್‍ಗೆ ಡಿಕ್ಕಿ ಹೊಡೆದ ಬಸ್, ಕೆರೆಗೆ ಪಲ್ಟಿ ಹೊಡೆದಿದೆ. ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಅವರನ್ನು ದೀಪಕ್ ಮತ್ತು ಪ್ರಜ್ವಲ್ ಎಂದು ಗುರುತಿಸಲಾಗಿದೆ. ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಕೆಎಸ್‌ಆರ್‌ಟಿಸಿ ಬಸ್ ಅಪಘಾತದ ಸದ್ದು ಕೇಳುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಕೆರೆಗೆ ಉರುಳಿದ್ದ ಬಸ್‌ನಿಂದ ಪ್ರಯಾಣಿಕರನ್ನು ಹೊರಗೆಳೆದು ತಂದಿದ್ದಾರೆ. ಅಪಘಾತದಿಂದ ವಿಚಲಿತರಾಗಿದ್ದ ಪ್ರಯಾಣಿಕರಿಗೆ ಸಮಾಧನಪಡಿಸಿ, ನಂತರ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕಳುಹಿಸಲಾಯಿತು.

ಗಂಭೀರವಾಗಿ ಗಾಯಗೊಂಡಿದ್ದ ಶಿವಮೊಗ್ಗದ ಗಾಂಧಿ ಬಜಾರ್ ನಿವಾಸಿ ದೀಪಕ್, ಕೊನೆಯುಸಿರೆಳೆದಿದ್ದಾನೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ದೀಪಕ್ ಸಾವನ್ನಪ್ಪಿದ್ದಾನೆ. ಪ್ರಜ್ವಲ್ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

"ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಐಗಿನಬೈಲು ಕ್ರಾಸ್, ಕಾಸ್ಪಾಡಿ ಕೆರೆ ತಿರುವು, ಉಳ್ಳೂರು ಕೆರೆ ತಿರುವಿನಲ್ಲಿ ಅಪಘಾತಗಳು ಸಾಮಾನ್ಯ ಎನ್ನುವಂತಾಗಿದೆ. ಪ್ರತಿ ವರ್ಷ ಈ ಮೂರು ಕಡೆಗಳಲ್ಲಿ ಹತ್ತಾರು ಮಂದಿ ಅಪಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಭಾಗದಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು,'' ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

 ನೀರಿನ ಸಂಪ್ ಒಳಗೆ ಬಿದ್ದು 3 ವರ್ಷದ ಬಾಲಕ ಸಾವು

ನೀರಿನ ಸಂಪ್ ಒಳಗೆ ಬಿದ್ದು 3 ವರ್ಷದ ಬಾಲಕ ಸಾವು

ನೀರಿನ ಸಂಪ್ ಒಳಗೆ ಬಿದ್ದು 3 ವರ್ಷದ ಬಾಲಕ ಸಾವು

ಹಾವೇರಿ: ಮನೆ ಮುಂಭಾಗ ಆಟವಾಡುತ್ತಿದ್ದ ಎರಡು ವರ್ಷದ ಬಾಲಕನೋರ್ವ ಆಕಸ್ಮಿಕವಾಗಿ ನೀರಿನ ಸಂಪ್​ ಒಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಾನಗಲ್ ಪಟ್ಟಣದ ನವನಗರದಲ್ಲಿ ನಡೆದಿದೆ.

ಚರಣ್ (3 ಚರ್ಷ) ನೀರಿನ ಸಂಪ್ ಒಳಗೆ ಬಿದ್ದು ಮೃತಪಟ್ಟ ಬಾಲಕ. ಮೃತ ಚರಣ್, ದುರಗಪ್ಪ ವಿಭೂತಿ ಎಂಬುವವರ ಪುತ್ರನಾಗಿದ್ದು, ಕಳೆದ ಹಲವು ವರ್ಷಗಳಿಂದ ಮನೆಗಳಿಲ್ಲದೇ ಶೆಡ್ ಗಳಲ್ಲಿ ವಾಸಿಸುತ್ತಿರುವ ಸುಡುಗಾಡ ಸಿದ್ದರು ಎಂದು ತಿಳಿದು ಬಂದಿದೆ.ಈ ಸಂಬಂಧ ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 ಪ್ರಧಾನಿ ಮೋದಿಯನ್ನು ಭೇಟಿಯಾದ ಸಿಎಂ ಬೊಮ್ಮಾಯಿ

ಪ್ರಧಾನಿ ಮೋದಿಯನ್ನು ಭೇಟಿಯಾದ ಸಿಎಂ ಬೊಮ್ಮಾಯಿ


ಪ್ರಧಾನಿ ಮೋದಿಯನ್ನು ಭೇಟಿಯಾದ ಸಿಎಂ ಬೊಮ್ಮಾಯಿ

ನವದೆಹಲಿ: ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಇದೇ ಮೊದಲ ಸಲ ದೆಹಲಿಗೆ ತೆರಳಿರುವ ಬಸವರಾಜ ಬೊಮ್ಮಾಯಿ, ಅಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಆಗಿ ಚರ್ಚೆ ಮಾಡಿದ್ದಾರೆ. ಮೋದಿ-ಬೊಮ್ಮಾಯಿ ಅವರ ಈ ಭೇಟಿಯಿಂದ ಸಚಿವಾಕಾಂಕ್ಷಿಗಳ ಎದೆಬಡಿತ ಹೆಚ್ಚಾಗಿದ್ದರೆ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ರಾಯಚೂರು ಜಿಲ್ಲೆಯವರಲ್ಲಿ ಸಂತಸ ಉಂಟಾಗಿದೆ.

ಪ್ರಧಾನಿ ಮೋದಿಯವರನ್ನು ಭೇಟಿಯಾದ ಸಿಎಂ ಬೊಮ್ಮಾಯಿ, ಹುಬ್ಬಳ್ಳಿ-ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡುವಂತೆ ಹಾಗೂ ರಾಯಚೂರಿಗೆ ಏಮ್ಸ್ ಮಾದರಿಯ ವೈದ್ಯಕೀಯ ಸಂಸ್ಥೆ ಮಂಜೂರು ಮಾಡುವಂತೆ ಮನವಿ ಮಾಡಿದರು. ಜೊತೆಗೆ ಕಲಬುರಗಿಯ ಇಎಸ್‌ಐ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಪ್ರಾದೇಶಿಕ ಏಮ್ಸ್ ಮಾದರಿಯ ಸಂಸ್ಥೆಯನ್ನಾಗಿ ಉನ್ನತೀಕರಿಸುವಂತೆ ಕೋರಿಕೊಂಡರು.

ಇದೇ ವೇಳೆ ನೂತನ ಮುಖ್ಯಮಂತ್ರಿಯವರಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ಕರ್ನಾಟಕದ ಅಭಿವೃದ್ಧಿಗೆ ಎಲ್ಲ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಮೋದಿಯನ್ನು ಭೇಟಿಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಬೊಮ್ಮಾಯಿ, ಮತ್ತಷ್ಟು ಸಂಗತಿಯನ್ನು ಹೊರಹಾಕಿದರು. ಇದೇ ವೇಳೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್​ ಷಾ, ರಾಜನಾಥ್ ಸಿಂಗ್​ ಮುಂತಾದವರನ್ನೂ ಭೇಟಿಯಾಗಿದ್ದಾರೆ.

ಸಂಪುಟ ರಚನೆ ಸಂಬಂಧ ಇನ್ನೊಮ್ಮೆ ದೆಹಲಿಗೆ ಬರುವ ಸಾಧ್ಯತೆ ಜಾಸ್ತಿ ಇದೆ. ಸದ್ಯ ರಾಜ್ಯದ ನೆರೆ ಪರಿಸ್ಥಿತಿ, ಕೋವಿಡ್ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರಿಗೆ ಹೇಳಿದ್ದೇನೆ ಎಂದು ತಿಳಿಸಿದ ಬೊಮ್ಮಾಯಿ, ಸಚಿವ ಸಂಪುಟ ವಿಸ್ತರಣೆ ಕುರಿತು ಕೂಡ ಮಾತನಾಡಿದರು. ಅಲ್ಲದೆ ಇನ್ನೊಂದು ವಾರದಲ್ಲಿ ಸಂಪುಟ ವಿಸ್ತರಣೆ ಆಗಲಿದೆ ಎಂಬ ಮಾಹಿತಿಯನ್ನೂ ನೀಡಿದರು. ಇದರಿಂದ ಸಚಿವ ಸ್ಥಾನಾಕಾಂಕ್ಷಿಗಳ ಎದೆಬಡಿತ ಹೆಚ್ಚಾದಂತಾಗಿದೆ.


 ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ಗೆ ಭಾರತದ ಹಾಕಿ ತಂಡ.   ಜಪಾನ್ ವಿರುದ್ಧ ಭಾರತ ತಂಡದ ಜಯಭೇರಿ.

ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ಗೆ ಭಾರತದ ಹಾಕಿ ತಂಡ. ಜಪಾನ್ ವಿರುದ್ಧ ಭಾರತ ತಂಡದ ಜಯಭೇರಿ.


ಒಲಿಂಪಿಕ್ಸ್: ಕ್ವಾರ್ಟರ್ ಫೈನಲ್ ಗೆ ಭಾರತದ ಹಾಕಿ ತಂಡ. 
ಜಪಾನ್ ವಿರುದ್ಧ ಭಾರತ ತಂಡದ ಜಯಭೇರಿ.

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಶುಕ್ರವಾರ ನಡೆದ 'ಎ' ಗುಂಪಿನ ಪಂದ್ಯದಲ್ಲಿ ಜಪಾನ್ ವಿರುದ್ಧ ಜಯಭೇರಿ ಬಾರಿಸಿ ಎರಡನೇ ಸ್ಥಾನ ಗಳಿಸಿದ ಭಾರತೀಯ ಪುರುಷರ ಹಾಕಿ ತಂಡವು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.ಶುಕ್ರವಾರ ನಡೆದ 'ಎ' ಗುಂಪಿನ ಪಂದ್ಯದಲ್ಲಿ ಆತಿಥೇಯ ಜಪಾನ್ ವಿರುದ್ಧ ಭಾರತವು 5-3 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿದೆ. ಈಗಾಗಲೇ ಕ್ವಾರ್ಟರ್ ಫೈನಲ್ ಸ್ಥಾನವನ್ನು ದೃಢಪಡಿಸಿಕೊಂಡಿದ್ದ  ಭಾರತದ ಪರ ಶುಕ್ರವಾರ ನಡೆದ ಪಂದ್ಯದಲ್ಲಿ ಗುರ್ಜಂತ್ ಸಿಂಗ್ (17 ನೇ, 56 ನೇ ನಿಮಿಷ), ಹರ್ಮನ್‌ಪ್ರೀತ್ ಸಿಂಗ್ (13 ನೇ), ಶಂಶೇರ್ ಸಿಂಗ್ (34 ನೇ) ಹಾಗೂ  ನೀಲಕಂಠ ಶರ್ಮಾ (51 ನೇ) ಗೋಲು ಗಳಿಸಿದರು. ಈ ಮೂಲಕ ಭಾರತವು ಸತತ ಮೂರನೇ ಜಯವನ್ನು ದಾಖಲಿಸಿತು.

ಈ ಗೆಲುವಿನಿಂದಾಗಿ, ಭಾರತವು ಐದು ಪಂದ್ಯಗಳಲ್ಲಿ ನಾಲ್ಕನೇ ಗೆಲುವು ದಾಖಲಿಸಿದೆ. ಆಸ್ಟ್ರೇಲಿಯಾದ ನಂತರ 'ಎ' ಗುಂಪಿನಲ್ಲಿ ಎರಡನೇ ಸ್ಥಾನ ಗಳಿಸಿತು.

 ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ; ಕೇರಳ ವಿಧಾನಸಭೆಯಲ್ಲಿ ಕಲಾಪಕ್ಕೆ ಅಡ್ಡಿ

ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ; ಕೇರಳ ವಿಧಾನಸಭೆಯಲ್ಲಿ ಕಲಾಪಕ್ಕೆ ಅಡ್ಡಿ


 ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ; ಕೇರಳ ವಿಧಾನಸಭೆಯಲ್ಲಿ ಕಲಾಪಕ್ಕೆ ಅಡ್ಡಿ

ತಿರುವನಂತಪುರಂ: ಶಿಕ್ಷಣ ಸಚಿವ ವಿ.ಶಿವನ್‌ ಕುಟ್ಟಿ ಅವರ ರಾಜೀನಾಮೆಗೆ ಒತ್ತಾಯಿಸಿ ವಿರೋಧ ಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಒಕ್ಕೂಟದ ಸದಸ್ಯರು ನಡೆಸಿದ ಪ್ರತಿಭಟನೆ, ಗದ್ದಲದಿಂದಾಗಿ ಶುಕ್ರವಾರವೂ ಕೇರಳ ವಿಧಾನಸಭೆಯಲ್ಲಿ ಕಲಾಪಕ್ಕೆ ಅಡ್ಡಿಯುಂಟಾಯಿತು.

2015ರ ಕೇರಳ ವಿಧಾನಸಭೆಯಲ್ಲಿ ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ ಸಚಿವ ಶಿವನ್‌ ಕುಟ್ಟಿ ಸೇರಿದಂತೆ ಎಲ್‌ಡಿಎಫ್‌ನ ಕೆಲ ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ಹಿಂಪಡೆಯಲು ಸುಪ್ರೀಂ ಕೋರ್ಟ್‌ ಅನುಮತಿ ನಿರಾಕರಿಸಿದ ನಂತರ, ವಿರೋಧ ಪಕ್ಷದ ಶಾಸಕರು ಸದನದಲ್ಲಿ ಶಿವನ್‌ ಕುಟ್ಟಿ ರಾಜೀನಾಮೆಗೆ ಪಟ್ಟು ಹಿಡಿದು, ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದಾಗಿ ಸತತ ಎರಡನೇ ದಿನವೂ ಸದನ ಕಲಾಪಕ್ಕೆ ಅಡ್ಡಿಯುಂಟಾಗಿದೆ.

'ಶಿವನ್‌ ಕುಟ್ಟಿ ಅವರ ರಾಜೀನಾಮೆ ಪಡೆಯಲು, ಯಾವುದೇ ಸಕಾರಣವಿಲ್ಲ. ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಅವರ ವಿರುದ್ಧ ಯಾವುದೇ ನಿರ್ದಿಷ್ಟ ಪ್ರಕರಣಗಳೂ ಉಲ್ಲೇಖವಾಗಿಲ್ಲ' ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುನರುಚ್ಚರಿಸಿದ್ದಾರೆ.

ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿರೋಧ ಪಕ್ಷಗಳ ಸದಸ್ಯರು ಶುಕ್ರವಾರ ಸಭಾತ್ಯಾಗ ಮಾಡಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿವೆ.

 ಮಂಗಳೂರು: ಮರವೂರು ಸೇತುವೆಯಲ್ಲಿ ಸಂಚಾರ ಪುನರಾರಂಭ

ಮಂಗಳೂರು: ಮರವೂರು ಸೇತುವೆಯಲ್ಲಿ ಸಂಚಾರ ಪುನರಾರಂಭ


 ಮಂಗಳೂರು: ಮರವೂರು ಸೇತುವೆಯಲ್ಲಿ ಸಂಚಾರ ಪುನರಾರಂಭ

ಮಂಗಳೂರು: ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿಯ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ ಮರವೂರು ಸೇತುವೆಯಲ್ಲಿ ಶುಕ್ರವಾರ ಅಪರಾಹ್ನದ ವೇಳೆಗೆ ವಾಹನಗಳ ಸಂಚಾರ ಪುನರಾರಂಭಗೊಂಡಿದೆ.

ಮುಲ್ಕಿ-ಮೂಡುಬಿದಿರೆ ಶಾಸಕ ಉಮನಾಥ ಕೋಟ್ಯಾನ್ ವಾಹನ ಮತ್ತು ಜನಸಂಚಾರಕ್ಕೆ ಚಾಲನೆ ನೀಡಿದ್ದಾರೆ.

ಜೂ.14ರ ತಡರಾತ್ರಿಯ ವೇಳೆ ಈ ಸೇತುವೆಯಲ್ಲಿ ಬಿರುಕು ಮೂಡಿತ್ತು. ಅಲ್ಲದೆ ಪಿಲ್ಲರ್ ಕುಸಿದಿತ್ತು. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಸಂಬಂಧಪಟ್ಟವರ ಗಮನ ಸೆಳೆದಿದ್ದರು. ಅದರಂತೆ ತಕ್ಷಣ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ ಪಿಡಬ್ಲ್ಯೂಡಿ ಇಲಾಖೆಯ ತಜ್ಞ ಇಂಜಿನಿಯರ್‌ಗಳು ಪರಿಶೀಲಿಸಿದ್ದರು. ಹಾಗಾಗಿ ಸುಮಾರು 45 ದಿನಗಳ ಕಾಲ ಈ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಮಂಗಳೂರು ವಿಮಾನ ನಿಲ್ದಾಣ, ಬಜ್ಪೆ, ಕಟೀಲು, ಅದ್ಯಪಾಡಿ ಕಡೆಗೆ ತೆರಳುವವರು ಸುತ್ತು ಬಳಸಿ ಹೋಗುವಂತಾಗಿತ್ತು.

ಸೇತುವೆಯ ಕುಸಿದ ಪಿಲ್ಲರ್‌ನ್ನು ಯಥಾಸ್ಥಿತಿಗೆ ತಂದ ಬಳಿಕ ಗುರುವಾರ ಸೇತುವೆ ಮೇಲೆ ಹೆವಿ ವೈಟ್ ಸ್ಟ್ರೈಸ್ ಟೆಸ್ಟ್ ಮಾಡಲಾಗಿತ್ತು. ಈ ಪರೀಕ್ಷೆ ಯಶಸ್ವಿಯಾಗಿದ್ದರಿಂದ ಶುಕ್ರವಾರ ಅಪರಾಹ್ನದಿಂದಲೇ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಜನರು, ವಾಹನಿಗರು ಭಾರೀ ಖುಷಿಯಿಂದ ಸೇತುವೆಯಲ್ಲಿ ಸಂಚರಿಸತೊಡಗಿದ್ದಾರೆ. ಕಾಂಗ್ರೆಸ್ ಗೆ ಮಧು ಬಂಗಾರಪ್ಪ ಸೇರ್ಪಡೆ

ಕಾಂಗ್ರೆಸ್ ಗೆ ಮಧು ಬಂಗಾರಪ್ಪ ಸೇರ್ಪಡೆ


 ಕಾಂಗ್ರೆಸ್ ಗೆ ಮಧು ಬಂಗಾರಪ್ಪ ಸೇರ್ಪಡೆ

ಶಿವಮೊಗ್ಗ : ಮಾಜಿ ಶಾಸಕ ಮಧು ಬಂಗಾರಪ್ಪ ಇಂದು ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

ಹುಬ್ಬಳಿಯ ಗೋಕುಲ ಗಾರ್ಡನ್ ನಲ್ಲಿ ಶುಕ್ರವಾರ  ನಡೆದ  ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಧು ಬಂಗಾರಪ್ಪ ಅವರಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ, ಎ.ಐ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮಾಜಿ ಸಿಎಂ, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ತಂಡ ಪಕ್ಷದ ಧ್ವಜ ನೀಡುವ ಮೂಲಕ  ಪಕ್ಷಕ್ಕೆ ಬರ ಮಾಡಿಕೊಂಡರು. ಇದೇ ಸಂದರ್ಭ  ಮಧು ಬಂಗಾರಪ್ಪ ಜೊತೆ ಹಲವು ಮಂದಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.

ಕಳೆದ ಲೋಕಸಭಾ ಚುನಾವಣಾ ನಂತರ ಜೆಡಿಎಸ್ ನ ಸಕ್ರೀಯ ಚಟುವಟಿಕೆಗಳಿಂದ ದೂರವಿದ್ದ ಮಧು ಬಂಗಾರಪ್ಪ ಕಾಂಗ್ರೆಸ್ ಗೆ ಅಧಿಕೃತ ವಾಗಿ ಸೇರ್ಪಡೆಗೊಂಡಿದ್ದಾರೆ.

ಈ ಸಂದರ್ಭ ಎ.ಐ.ಸಿ.ಸಿ ಕಾರ್ಯದರ್ಶಿ ಮಧು ಯಾಕ್ಷಿಗೌಡ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ಹಿರಿಯ ನಾಯಕರಾದ ಕೆ.ಎಚ್. ಮುನಿಯಪ್ಪ, ಎಚ್.ಕೆ. ಪಾಟೀಲ್, ಅಲ್ಲಂ ವೀರಭದ್ರಪ್ಪ, ಶಾಸಕ ಪ್ರಸಾದ್ ಅಬ್ಬಯ್ಯ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ.ಆರ್.ಎಂ.ಮಂಜುನಾಥ ಗೌಡ, ಕಾಂಗ್ರೆಸ್ ಮುಖಂಡರಾದ ಜಿ.ಡಿ.ಮಂಜುನಾಥ್ ಹಾಗೂ ಮಧು ಬಂಗಾರಪ್ಪ ಅವರ ಬೆಂಬಲಿಗರು ಹಾಜರಿದ್ದರು.

ತವರಿನಲ್ಲಿ ಸಂಭ್ರಮಾಚರಣೆ

ಹುಬ್ಬಳ್ಳಿಯಲ್ಲಿ ಅಧಿಕೃತವಾಗಿ ಮಧು ಬಂಗಾರಪ್ಪ ಕಾಂಗ್ರೆಸ್ ಸೇರುತ್ತಿದ್ದಂತೆ ತವರು ಕ್ಷೇತ್ರ ಸೊರಬದಲ್ಲಿ ಅಭಿಮಾನಿಗಳು, ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ- ಹಾಲು ಹಂಚಿ ಸಂಭ್ರಮಿಸಿದರು. ಸೊರಬ ಪುರಸಭೆ ಸದಸ್ಯ ಪ್ರಸನ್ನ ಕುಮಾರ್ ದೊಡ್ಮನೆ ನೇತೃತ್ವದಲ್ಲಿ ಸೊರಬದ ಶ್ರೀರಂಗನಾಥ ಹಾಗೂ ದುರ್ಗಮ್ಮ ದೇವಿಗೆ ವಿಶೇಷ‌ ಪೂಜೆ ಸಲ್ಲಿಸಿದರು.

ಬಳಿಕ ಸೊರಬದ ರಂಗನಾಥ ಬಡಾವಣೆ, ಆಟೋ ಸ್ಟ್ಯಾಂಡ್ ಹಾಗೂ ರಂಗನಾಥ ದೇವಾಲಯದ‌ ಮುಂದೆ ಮಧು ಅಭಿಮಾನಿಗಳು ಸಾರ್ವಜನಿಕರಿಗೆ ಹಾಲು ಸಿಹಿ ವಿತರಿಸಿದರು. ಈ ಸಂದರ್ಭ ಪುರಸಭಾ ಸದಸ್ಯರಾದ ಮೆಹಬೂಬ್ ಬಾಷಾ, ಸಿರಾಜುದ್ದೀನ್, ನಾಗರಾಜ್, ಶೋಭಾ ಸೇರಿದಂತೆ ಹಲವರಿದ್ದರು.

 ಡೆಲ್ಟಾ ರೂಪಾಂತರಿ ವೈರಸ್‌ ಚಿಕನ್‌ ಪಾಕ್ಸ್‌ ನಷ್ಟೇ ವೇಗವಾಗಿ ಹರಡಬಹುದು: ವರದಿ

ಡೆಲ್ಟಾ ರೂಪಾಂತರಿ ವೈರಸ್‌ ಚಿಕನ್‌ ಪಾಕ್ಸ್‌ ನಷ್ಟೇ ವೇಗವಾಗಿ ಹರಡಬಹುದು: ವರದಿ


 ಡೆಲ್ಟಾ ರೂಪಾಂತರಿ ವೈರಸ್‌ ಚಿಕನ್‌ ಪಾಕ್ಸ್‌ ನಷ್ಟೇ ವೇಗವಾಗಿ ಹರಡಬಹುದು: ವರದಿ

ನ್ಯೂಯಾರ್ಕ್: ಕೋವಿಡ್-19ನ ಡೆಲ್ಟಾ ರೂಪಾಂತರಿ ಹಿಂದಿನ ರೂಪಾಂತರಿಗಳಿಗಿಂತ ತೀವ್ರವಾಗಿ ಜನರನ್ನು ಕಾಡಬಹುದು ಹಾಗೂ ಸಿಡುಬು ಅಥವಾ ಚಿಕನ್‍ ಪಾಕ್ಸ್ ಹರಡುವಷ್ಟೇ ವೇಗವಾಗಿ ಹರಡಬಹುದು ಎಂದು ಅಮೆರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಎಂಡ್ ಪ್ರಿವೆನ್ಶನ್‍ನ ಇನ್ನೂ ಪ್ರಕಟಗೊಳ್ಳದೇ ಇರುವ ವರದಿಯನ್ನಾಧರಿಸಿ ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ.

ಮೊದಲು ಭಾರತದಲ್ಲಿ ಕಂಡು ಬಂದ ಡೆಲ್ಟಾ ರೂಪಾಂತರಿ ಎರಡೂ ಡೋಸ್ ಲಸಿಕೆ ಪಡೆದವರಿಂದಲೂ ಅಥವಾ ಪಡೆಯದೇ ಇರುವವರಿಂದಲೂ ಒಂದೇ ರೀತಿಯಲ್ಲಿ ಹರಡಬಹುದು ಎಂದು ವರದಿಗಳು ಸೂಚಿಸಿವೆ.

ಇತ್ತೀಚೆಗೆ ನಡೆಸಲಾದ ಇನ್ನೊಂದು ಅಧ್ಯಯನದ ಪ್ರಕಾರ ಡೆಲ್ಟಾ ರೂಪಾಂತರಿಯಿಂದ ಸೋಂಕಿಗೊಳಗಾದ ವ್ಯಕ್ತಿಯಲ್ಲಿ ಈ ಹಿಂದಿನ ಕೋವಿಡ್ ರೂಪಾಂತರಿಗಿಂತಲೂ ಹೆಚ್ಚಿನ ಪ್ರಮಾಣದ ವೈರಸ್ ಇರುತ್ತದೆ.

ಲಸಿಕೆ ಪಡೆದವರಿಗೆ ಸೋಂಕಿನಿಂದ ಅಪಾಯ ಕಡಿಮೆಯಾದರೂ ಇತರರಂತೆಯೇ ಅವರು ಸೋಂಕು ಹರಡಬಲ್ಲರು ಆದರೆ ಲಸಿಕೆ ಪಡೆದವರು ಹೆಚ್ಚು ಸುರಕ್ಷಿತವಾಗಿರುತ್ತಾರೆ ಎಂದು ವರದಿ ಹೇಳಿದೆ. ಇದೇ ಕಾರಣದಿಂದ ಲಸಿಕಾ ಅಭಿಯಾನದ ಹೊರತಾಗಿಯೂ ಡೆಲ್ಟಾ ರೂಪಾಂತರಿ ಸಮುದಾಯದಲ್ಲಿ ಬಹಳ ವೇಗವಾಗಿ ಹರಡಬಹುದು  ಎಂದು ಅವರು ಹೇಳಿದ್ದಾರೆ.

 ಒಲಿಂಪಿಕ್ಸ್: ಬರಿಗೈಯಲ್ಲಿ ವಾಪಸಾದ ಭಾರತದ ಪಿಸ್ತೂಲ್ ಶೂಟರ್ ಗಳು

ಒಲಿಂಪಿಕ್ಸ್: ಬರಿಗೈಯಲ್ಲಿ ವಾಪಸಾದ ಭಾರತದ ಪಿಸ್ತೂಲ್ ಶೂಟರ್ ಗಳು


 ಒಲಿಂಪಿಕ್ಸ್: ಬರಿಗೈಯಲ್ಲಿ ವಾಪಸಾದ ಭಾರತದ ಪಿಸ್ತೂಲ್ ಶೂಟರ್ ಗಳು

ಟೋಕಿಯೊ: ಶುಕ್ರವಾರ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟರ್ ಗಳಾದ ಮನು ಭಾಕರ್ ಮತ್ತು ರಾಹಿ ಸರ್ನೋಬತ್ 25 ಮೀಟರ್ ಪಿಸ್ತೂಲ್ ಅರ್ಹತಾ ಸುತ್ತಿನಲ್ಲಿ ಸೋಲನುಭವಿಸಿ ಹೊರ ನಡೆದರು. ಇಬ್ಬರೂ ಕ್ರಮವಾಗಿ ಅಗ್ರ-8 ರಲ್ಲಿ ಸ್ಥಾನ ಪಡೆಯಲು ವಿಫಲರಾದರು.

ಪಿಸ್ತೂಲ್ ಶೂಟರ್‌ಗಳು ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಬಾರಿಗೆ ಬರಿಗೈಯಲ್ಲಿ ಮನೆಗೆ ಮರಳುತ್ತಿದ್ದಾರೆ.

ಮನು ಭಾಕರ್ ತನ್ನ ಮೊದಲ ಈವೆಂಟ್‌ನಲ್ಲಿ  ಮಹಿಳೆಯರ 10 ಮೀ ಏರ್ ಪಿಸ್ತೂಲ್  ಅರ್ಹತೆಯ ಸಮಯದಲ್ಲಿ ಪ್ರಮುಖ ಪಿಸ್ತೂಲ್  ದೋಷದಿಂದಾಗಿ ಸುಮಾರು 20 ನಿಮಿಷಗಳ ಆಟವನ್ನು ಕಳೆದುಕೊಂಡಿದ್ದರು.

ಸೌರಭ್ ಚೌಧರಿ ಅವರೊಂದಿಗೆ ಮನು ಭಾಕರ್ ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೊದಲ ಹಂತದ ಅರ್ಹತಾ ಪಂದ್ಯವನ್ನು ಮುನ್ನಡೆಸಿದ ನಂತರ ಇಬ್ಬರೂ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ಭಾಕರ್ ಶುಕ್ರವಾರ ನಡೆದ ತನ್ನ ಕೊನೆಯ ಈವೆಂಟ್‌ನಲ್ಲಿ  ಅಗ್ರ -8 ರಲ್ಲಿ ಸ್ಥಾನ ಪಡೆಯಲಾಗದೆ ನಿರ್ಗಮಿಸಿದರು.  ಅರ್ಹತಾ ಸುತ್ತಿನಲ್ಲಿ ಅಗ್ರ -8 ಶೂಟರ್‌ಗಳು ಫೈನಲ್‌ಗೆ ಪ್ರವೇಶಿಸುತ್ತಾರೆ. ಟೋಕಿಯೊ ಕ್ರೀಡಾಕೂಟದಲ್ಲಿ ಮೂರು ಸ್ಪರ್ಧೆಗಳಲ್ಲಿ ಭಾಗವಹಿಸಿದ ಏಕೈಕ ಭಾರತೀಯ ಶೂಟರ್ ಭಾಕರ್. ಆದರೆ ಅವರಿಗೆ ಒಂದು ಸ್ಪರ್ಧೆಯಲ್ಲೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

 ಕೇರಳದಲ್ಲಿ ಕೊರೋನ ಹಾವಳಿ: ಕಾಳಜಿ ವಹಿಸಿ ಎಂದು ರಾಹುಲ್ ಗಾಂಧಿ ಮನವಿ

ಕೇರಳದಲ್ಲಿ ಕೊರೋನ ಹಾವಳಿ: ಕಾಳಜಿ ವಹಿಸಿ ಎಂದು ರಾಹುಲ್ ಗಾಂಧಿ ಮನವಿ


 ಕೇರಳದಲ್ಲಿ ಕೊರೋನ ಹಾವಳಿ: ಕಾಳಜಿ ವಹಿಸಿ ಎಂದು ರಾಹುಲ್ ಗಾಂಧಿ ಮನವಿ

ಹೊಸದಿಲ್ಲಿ: ಕೇರಳದಲ್ಲಿ ಕೊರೋನ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿರುವ ಆತಂಕಕಾರಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಶುಕ್ರವಾರ ಮಾಡಿದ್ದಾರೆ.

ಎಲ್ಲಾ ಸುರಕ್ಷಿತ ಕ್ರಮಗಳು ಹಾಗೂ ಮಾರ್ಗಸೂಚಿಗಳನ್ನು ಅನುಸರಿಸುವಂತೆ ನಾನು ರಾಜ್ಯದ ನಮ್ಮ ಸಹೋದರರು ಹಾಗೂ ಸಹೋದರಿಯರಿಗೆ ಮನವಿ ಮಾಡುತ್ತೇನೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ದಯವಿಟ್ಟು ಕಾಳಜಿ ವಹಿಸಿ ಎಂದು ಮನವಿ ಮಾಡಿದ್ದಾರೆ.

ದೇಶದ ಬೇರೆ ರಾಜ್ಯಗಳಲ್ಲಿ ಕೊರೋನ ಆರ್ಭಟ ಇಳಿಯುತ್ತಿದ್ದರೆ ಕೇರಳದಲ್ಲಿ ಮಾತ್ರ ಏರಿಕೆಯಾಗುತ್ತಿದೆ. ದೇಶದ ಸಕ್ರಿಯ ಪ್ರಕರಣಗಳ ಪೈಕಿ ಶೇ.37.ರಷ್ಟು ಕೇರಳದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಎಸ್.ಕೆ. ಸಿಂಗ್ ನೇತೃತ್ವದ 6 ಸದಸ್ಯರ ತಂಡವು ಇಂದು ಕೇರಳ ತಲುಪಿದೆ. ಕೋವಿಡ್ ಹೆಚ್ಚಿರುವ ಜಿಲ್ಲೆಗಳಿಗೆ ಭೇಟಿ ನೀಡಲಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

 ಭಾರತ ಕ್ರಿಕೆಟಿಗರಾದ ಚಾಹಲ್, ಕೃಷ್ಣಪ್ಪ ಗೌತಮ್ ಗೆ ಕೊರೋನ

ಭಾರತ ಕ್ರಿಕೆಟಿಗರಾದ ಚಾಹಲ್, ಕೃಷ್ಣಪ್ಪ ಗೌತಮ್ ಗೆ ಕೊರೋನ


 ಭಾರತ ಕ್ರಿಕೆಟಿಗರಾದ ಚಾಹಲ್, ಕೃಷ್ಣಪ್ಪ ಗೌತಮ್ ಗೆ ಕೊರೋನ

ಹೊಸದಿಲ್ಲಿ:  ಭಾರತೀಯ ಕ್ರಿಕೆಟಿಗರಾದ ಯುಜ್ವೇಂದ್ರ ಚಾಹಲ್ ಹಾಗೂ  ಕೃಷ್ಣಪ್ಪ ಗೌತಮ್ ಶ್ರೀಲಂಕಾದಲ್ಲಿ ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ.

ಆತಿಥೇಯ ಶ್ರೀಲಂಕಾ ವಿರುದ್ಧದ ಸೀಮಿತ ಓವರ್ ಗಳ ಸರಣಿಯಲ್ಲಿ ಭಾಗವಹಿಸಲು ಈ ಜೋಡಿ ಭಾರತೀಯ ತಂಡದೊಂದಿಗೆ ಇತ್ತು. ಆದರೆ ಕೃನಾಲ್ ಪಾಂಡ್ಯ ಅವರ ಸಂಪರ್ಕಕ್ಕೆ ಬಂದ ನಂತರ ಎರಡನೇ ಮತ್ತು ಮೂರನೇ ಟ್ವೆಂಟಿ-20 ಪಂದ್ಯಗಳನ್ನು ಆಡಲಿಲ್ಲ.

ಕೃನಾಲ್ ಪಾಂಡ್ಯ ಕೊರೋನ ಸೋಂಕಿಗೆ ಒಳಗಾದ ಬಳಿಕ ಎರಡನೇ ಟಿ-20  ಪಂದ್ಯವನ್ನು ಒಂದು ದಿನ ಮುಂದೂಡಲಾಗಿತ್ತು.

 ಸಚಿವ ಸಂಪುಟ ರಚನೆಯಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ : ಯಡಿಯೂರಪ್ಪ

ಸಚಿವ ಸಂಪುಟ ರಚನೆಯಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ : ಯಡಿಯೂರಪ್ಪ


 ಸಚಿವ ಸಂಪುಟ ರಚನೆಯಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ : ಯಡಿಯೂರಪ್ಪ

ಚಾಮರಾಜನಗರ : ರಾಜ್ಯ ಸರ್ಕಾರದ ಸಚಿವ ಸಂಪುಟ ರಚನೆಯಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ, ಯಾರನ್ನು ಸಚಿವರನ್ನಾಗಿ ಮಾಡ ಬೇಕೆಂಬುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಿರ್ಧಾರ ಮಾಡುವರು, ಅವರು ಸಚಿವ ಸಂಪುಟ ರಚನೆಗೆ ಸ್ವತಂತ್ರರಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಚಾಮರಾಜನಗರದಲ್ಲಿ ಹೇಳಿದರು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ಯಡಿಯೂರಪ್ಪ ಅವರ ಅಭಿಮಾನಿ ರವಿ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಲು ಗುಂಡ್ಲುಪೇಟೆಗೆ ಆಗಮಿಸಿದ ಯಡಿಯೂರಪ್ಪ ಮಾದ್ಯಮದವರೊಂದಿಗೆ ಮಾತನಾಡಿದರು.

ವಿರೋಧ ಪಕ್ಷದವರು ಮನಸ್ಸಿಗೆ ಘಾಸಿಯಾಗುವಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹೇಳಿದ ಯಡಿಯೂರಪ್ಪ, ಮುಂದಿನ ಗಣೇಶನ ಹಬ್ಬದ ಬಳಿಕ ಪ್ರತಿ ವಾರ ಒಂದೊಂದು ಜಿಲ್ಲೆಗೆ ಪ್ರವಾಸ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ. 2023ರ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಯಲ್ಲಿ 130ರಿಂದ135 ಸ್ಥಾನಗಳನ್ನು ಬಿಜೆಪಿ ಶಾಸಕರು ಗೆಲ್ಲಿಸುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆಯಾಗುವಂತೆ ಮಾಡಲು ನಿರ್ಧಾರ ಮಾಡಿರುವುದಾಗಿ ತಿಳಿಸಿದರು.

Thursday, 29 July 2021

 7 ವಿಕೆಟ್ ಗಳಿಂದ ಸರಣಿ ಗೆದ್ದ ಶ್ರೀಲಂಕಾ

7 ವಿಕೆಟ್ ಗಳಿಂದ ಸರಣಿ ಗೆದ್ದ ಶ್ರೀಲಂಕಾ

 

7 ವಿಕೆಟ್ ಗಳಿಂದ ಸರಣಿ ಗೆದ್ದ ಶ್ರೀಲಂಕಾ

ಕೊಲಂಬೊ: ಭಾರತ-ಶ್ರೀಲಂಕಾ ನಡುವಿನ ಕೊನೆಯ ಟಿ-20 ಪಂದ್ಯದಲ್ಲಿ ಲಂಕಾ ಬೌಲಿಂಗ್​ ದಾಳಿಗೆ ತತ್ತರಿಸಿರುವ ಟೀಂ ಇಂಡಿಯಾ 20 ಓವರ್​ಗಳಲ್ಲಿ 8ವಿಕೆಟ್ ​ನಷ್ಟಕ್ಕೆ ಕೇವಲ 81 ರನ್​ಗಳಿಕೆ ಮಾಡಿದೆ.

ಲಂಕಾ ಗೆಲುವಿಗೆ 82ರನ್​ಗಳ ಸಾಧಾರಣ ಟಾರ್ಗೆಟ್​ ನೀಡಿದೆ.ಲಂಕಾ ಪರ 4 ಓವರ್​ ಎಸೆದ ಹಸರಂಗ 9ರನ್​ ನೀಡಿ ಪ್ರಮುಖ 4 ವಿಕೆಟ್​ ಪಡೆದುಕೊಂಡು ಟೀಂ ಇಂಡಿಯಾಗೆ ವೈಫಲ್ಯಕ್ಕೆ ಕಾರಣವಾಗಿದ್ದಾರೆ.

ಆರಂಭಿಕ ಓವರ್​ನಲ್ಲಿ ಶಿಖರ್ ಧವನ್ ​(0), ಗಾಯ್ಕವಾಡ(14), ಪಡಿಕ್ಕಲ್​(9) ಹಾಗೂ ಸಂಜು ಸ್ಯಾಮನ್ಸ್​​​(0) ವಿಕೆಟ್​ ಒಪ್ಪಿಸಿದರು. ಇದಾದ ಬಳಿಕ ನಿತೀಶ್ ರಾಣಾ ಕೂಡ 6ರನ್​ಗಳಿಕೆ ಮಾಡಿ ಔಟ್​ ಆದರು.

ಇದಾದ ಬಳಿಕ ಭುವನೇಶ್ವರ್ ಕುಮಾರ್(16)​​ ಹಾಗೂ ಕುಲ್ದೀಪ್​ ಯಾದವ್​​(23)ರನ್​​ಗಳಿಕೆ ಮಾಡಿ ತಂಡ 50ರನ್​ ಗಡಿದಾಟುವಂತೆ ಮಾಡಿತು. ಬಳಿಕ ಬಂದ ಚಹರ್​​(5) ಹಾಗೂ ಸಕಾರಿಯಾ(5)ರನ್​ಗಳಿಕೆ ಮಾಡಿದರು. ತಂಡ ಕೊನೆಯದಾಗಿ 20 ಓವರ್​ಗಳಲ್ಲಿ 8ವಿಕೆಟ್ ಕಳೆದುಕೊಂಡು 81ರನ್​ಗಳಿಕೆ ಮಾಡಿದ್ದು, ಲಂಕಾ ಗೆಲುವಿಗೆ 82ರನ್​ ಟಾರ್ಗೆಟ್​ ನೀಡಿದೆ.

 ಎಸ್ಸೆಸ್ಸೆಫ್ ಮತ್ತು ಎಸ್ ವೈ ಎಸ್ ಇಸಾಬ ಟೀಮ್ ಸರಳಿಕಟ್ಟೆ ಸೆಕ್ಟರ್ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಎಸ್ಸೆಸ್ಸೆಫ್ ಮತ್ತು ಎಸ್ ವೈ ಎಸ್ ಇಸಾಬ ಟೀಮ್ ಸರಳಿಕಟ್ಟೆ ಸೆಕ್ಟರ್ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ


 ಎಸ್ಸೆಸ್ಸೆಫ್ ಮತ್ತು ಎಸ್ ವೈ ಎಸ್ ಇಸಾಬ ಟೀಮ್ ಸರಳಿಕಟ್ಟೆ ಸೆಕ್ಟರ್ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ 

ಸರಳಿಕಟ್ಟೆ: ಎಸ್ಸೆಸ್ಸೆಫ್ ಮತ್ತು ಎಸ್ ವೈ ಎಸ್ ಇಸಾಬ ಟೀಮ್ ಸರಳಿಕಟ್ಟೆ ಸೆಕ್ಟರ್ ವತಿಯಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಜಿ.ಎಂ ಕುಞಿ ಅವರ ಅಧ್ಯಕ್ಷತೆಯಲ್ಲಿ ಅಶ್ರಫ್ ಸಖಾಫಿ ಮೂಡಡ್ಕ ರವರು ದುಆದ ಮೂಲಕ ಚಾಲನೆ ನೀಡಿದರು. 

  ಸುಮಾರು 6 ಕಿಲೋಮೀಟರ್  ದೂರದ ವರೆಗೆ ಕ್ರಮಿಸಿ ಬೀದಿ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
 7 ಕೋಟಿ ತಲುಪಿದ ಪ್ರಧಾನಿ ಮೋದಿಯ ಟ್ವಿಟರ್ ಫಾಲೋವರ್ಸ್ ಸಂಖ್ಯೆ

7 ಕೋಟಿ ತಲುಪಿದ ಪ್ರಧಾನಿ ಮೋದಿಯ ಟ್ವಿಟರ್ ಫಾಲೋವರ್ಸ್ ಸಂಖ್ಯೆ


 7 ಕೋಟಿ ತಲುಪಿದ ಪ್ರಧಾನಿ ಮೋದಿಯ ಟ್ವಿಟರ್ ಫಾಲೋವರ್ಸ್ ಸಂಖ್ಯೆ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಗೆ ಈಗ ಟ್ವಿಟರ್ ‍ನಲ್ಲಿ 7 ಕೋಟಿ ಫಾಲೋವರ್ಸ್ ಇದ್ದು  ಈ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿದ ಜಾಗತಿಕ ನಾಯಕರಲ್ಲಿ ಅವರು ಮೊದಲ ಸ್ಥಾನದಲ್ಲಿದ್ದಾರೆ  ಎಂದು ವರದಿಯಾಗಿದೆ.

ಮೋದಿ ಅವರ ನಂತರದ ಸ್ಥಾನದಲ್ಲಿ ಪೋಪ್ ಫ್ರಾನ್ಸಿಸ್ ಅವರಿದ್ದು, ಅವರಿಗೆ ಟ್ವಿಟರ್‍ನಲ್ಲಿ 5.3 ಕೋಟಿ ಅನುಯಾಯಿಗಳಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಟ್ವಿಟರ್‍ನಲ್ಲಿ 3.9 ಕೋಟಿ ಫಾಲೋವರ್ಸ್ ಇದ್ದಾರೆ.

ಭಾರತದಲ್ಲಿ ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ವಿಟ್ಟರ್‍ನಲ್ಲಿ 2.63 ಕೋಟಿ ಫಾಲೋವರ್ಸ್ ಇದ್ದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ 1.94 ಕೋಟಿ ಫಾಲೋವರ್ಸ್ ಇದ್ದಾರೆ.

 ಪೊಲೀಸ್ ಆಯುಕ್ತರಾಗಿ ರಾಕೇಶ್ ಅಸ್ತಾನಾ ನೇಮಕ ವಿರುದ್ಧ ದಿಲ್ಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಪೊಲೀಸ್ ಆಯುಕ್ತರಾಗಿ ರಾಕೇಶ್ ಅಸ್ತಾನಾ ನೇಮಕ ವಿರುದ್ಧ ದಿಲ್ಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ


 ಪೊಲೀಸ್ ಆಯುಕ್ತರಾಗಿ ರಾಕೇಶ್ ಅಸ್ತಾನಾ ನೇಮಕ ವಿರುದ್ಧ ದಿಲ್ಲಿ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ಹೊಸದಿಲ್ಲಿ: ಸಿಬಿಐ ಮಾಜಿ ಅಧಿಕಾರಿ ರಾಕೇಶ್ ಅಸ್ತಾನಾ ಅವರನ್ನು ದಿಲ್ಲಿ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿರುವುದರ ವಿರುದ್ಧ ದಿಲ್ಲಿ ವಿಧಾನಸಭೆ ನಿರ್ಣಯವೊಂದನ್ನು ಅಂಗೀಕರಿಸಿದೆ. ನಿರ್ಣಯದಲ್ಲಿ ರಾಕೇಶ್ ಅಸ್ತಾನಾ ನೇಮಕಾತಿಯನ್ನು ಹಿಂದಕ್ಕೆ ಪಡೆಯುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಲಾಗಿದೆ.

ದಿಲ್ಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣದಲ್ಲಿದ್ದಾರೆ.

ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ಅಸ್ತಾನಾ ಅವರು ನಿವೃತ್ತಿಗೆ ಕೇವಲ ಮೂರು ದಿನಗಳ ಮೊದಲು ಮಂಗಳವಾರ ನೇಮಕಾತಿಯನ್ನು ಪಡೆದಿದ್ದರು.

“ಸಾರ್ವಜನಿಕ ಹಿತದೃಷ್ಟಿಯಿಂದ" ರಾಕೇಶ್ ಅಸ್ತಾನಾ ಅವರ ಸೇವೆಯನ್ನು ಒಂದು ವರ್ಷ ವಿಸ್ತರಿಸಲಾಗಿದ್ದು, ಅವರು ದಿಲ್ಲಿ ಪೊಲೀಸ್ ಮುಖ್ಯಸ್ಥರಾಗಲಿದ್ದಾರೆ ಎಂದು ಮಂಗಳವಾರ ಸಂಜೆ ಹೊರಡಿಸಿರುವ ಆದೇಶದಲ್ಲಿ ಗೃಹ ಸಚಿವಾಲಯ ತಿಳಿಸಿದೆ. 

 ಹೊಸ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಉತ್ತರಪ್ರದೇಶದಲ್ಲಿ ಯಾತ್ರೆ: ಬಿಜೆಪಿ ಯೋಜನೆ

ಹೊಸ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಉತ್ತರಪ್ರದೇಶದಲ್ಲಿ ಯಾತ್ರೆ: ಬಿಜೆಪಿ ಯೋಜನೆ


 ಹೊಸ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಉತ್ತರಪ್ರದೇಶದಲ್ಲಿ ಯಾತ್ರೆ: ಬಿಜೆಪಿ ಯೋಜನೆ

ಹೊಸದಿಲ್ಲಿ: ಕೆಲವೇ ತಿಂಗಳುಗಳಲ್ಲಿ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ, ಇತ್ತೀಚೆಗೆ ಸಂಪುಟ ಪುನರ್ರಚನೆಯಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ರಾಜ್ಯದ ಏಳು ನಾಯಕರನ್ನು ಒಳಗೊಂಡ ಕಾರ್ಯಕ್ರಮವನ್ನು ಆಯೋಜಿಸಲು ಬಿಜೆಪಿ ಯೋಜಿಸುತ್ತಿದೆ.

ಬಿಜೆಪಿಯಿಂದ ಆರು ಹಾಗೂ  ಅಪ್ನಾ ದಳದ ಅನುಪ್ರಿಯಾ ಪಟೇಲ್ ಸೇರಿದಂತೆ 7 ಸಚಿವರು ಪಕ್ಷದ ಅಧ್ಯಕ್ಷ  ಜೆ.ಪಿ.ನಡ್ಡಾ ಅವರಿಂದ ಸೂಚನೆಗಳನ್ನು ಪಡೆದಿದ್ದಾರೆ ಹಾಗೂ  'ಸಾರ್ವಜನಿಕರಿಂದ ಆಶೀರ್ವಾದ ಪಡೆಯಲು' ಮೂರು-ನಾಲ್ಕು ಸಂಸದೀಯ ಕ್ಷೇತ್ರಗಳು ಹಾಗೂ  ನಾಲ್ಕು-ಐದು ಜಿಲ್ಲೆಗಳನ್ನು ಒಳಗೊಂಡ 300-400 ಕಿ.ಮೀ. ದೂರದ ಜನ ಆಶೀರ್ವಾದ್ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ .

ಯಾತ್ರೆಯು ಆಗಸ್ಟ್ 15 ರ ನಂತರ ನಡೆಯಲಿದ್ದು, ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಸಚಿವರಿಗೆ ತಿಳಿಸಲಾಗಿದೆ.

ಇದಲ್ಲದೆ, ಪಕ್ಷವು ಆಗಸ್ಟ್ 5 ರಂದು ರಾಜ್ಯದಲ್ಲಿ ಅನ್ನ ಮಹೋತ್ಸವ್ (ಆಹಾರ ಧಾನ್ಯ ಹಬ್ಬ) ವನ್ನು ಆಚರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಸುಮಾರು 80,000 ಪಡಿತರ ವಿತರಕರೊಂದಿಗೆ ವೀಡಿಯೊ ಲಿಂಕ್ ಮೂಲಕ ಮಾತನಾಡುವ ನಿರೀಕ್ಷೆಯಿದೆ.

ಎಲ್ಲಾ ಸಂಸದರು ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳಿಗೆ ಭೇಟಿ ನೀಡಲು ಹಾಗೂ  ಲಸಿಕೆಯ ಎರಡನೆಯ ಡೋಸ್ (ಅಥವಾ ಮೊದಲನೆಯ) ತೆಗೆದುಕೊಳ್ಳಲು ಪ್ರೇರೇಪಿಸುವಂತೆ ನಿರ್ದೇಶಿಸಲಾಗಿದೆ.

 ಸಿಎಂ‌ ಬಸವರಾಜ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಮಾಜಿ ಸಚಿವರ ಕಾರು ಢಿಕ್ಕಿ

ಸಿಎಂ‌ ಬಸವರಾಜ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಮಾಜಿ ಸಚಿವರ ಕಾರು ಢಿಕ್ಕಿ


 ಸಿಎಂ‌ ಬಸವರಾಜ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಮಾಜಿ ಸಚಿವರ ಕಾರು ಢಿಕ್ಕಿ

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬೆಂಗಾವಲು ವಾಹನಕ್ಕೆ ಮಾಜಿ ಸಚಿವರಾದ ಶಿವರಾಮ್ ಹೆಬ್ಬಾರ್ ಅವರ ಕಾರು ಢಿಕ್ಕಿಯಾಗಿರುವ ಬಗ್ಗೆ ವರದಿಯಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಬಳಿಯಲ್ಲಿ ಸಿಎಂ ಅವರ ಬೆಂಗಾವಲು ವಾಹನಕ್ಕೆ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅವರ ಕಾರು ಢಿಕ್ಕಿಯಾಗಿದ್ದು,  ವಿಮಾನ ನಿಲ್ದಾಣದಿಂದ ಸಿಎಂ ಹೊರ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಮಾಜಿ ಸಚಿವ ಶಿವರಾಮ ಹೆಬ್ಬಾರ್, ಸಿಎಂ ಬೆಂಗಾವಲು ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಿಎಂ ಕಾರು ಹಿಂಬಾಲಿಸುವ ಭರದಲ್ಲಿ ಆಪಘಾತ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

 ಆರ್ಚರಿ: ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಅತನು ದಾಸ್ ಗೆ ಜಯ

ಆರ್ಚರಿ: ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಅತನು ದಾಸ್ ಗೆ ಜಯ


 ಆರ್ಚರಿ: ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಅತನು ದಾಸ್ ಗೆ ಜಯ

ಟೋಕಿಯೊ: ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ವಿರುದ್ದ ಅಮೋಘ ಜಯ ದಾಖಲಿಸಿರುವ ಭಾರತದ ಬಿಲ್ಲುಗಾರ ಅತನು ದಾಸ್ ಅವರು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್  ತಲುಪಿದ್ದಾರೆ.

ಒಲಿಂಪಿಕ್ಸ್ ನಲ್ಲಿ ಗುರುವಾರ ನಡೆದ ಆರ್ಚರಿ ಪುರುಷರ ವೈಯಕ್ತಿಕ ವಿಭಾಗದಲ್ಲಿ ಅತನು ದಾಸ್ ಅವರು ವಿಶ್ವದ ನಂ.3ನೇ ರ್ಯಾಂಕಿನ ದಕ್ಷಿಣ ಕೊರಿಯಾದ ಓಹ್ ಜಿನ್ ಹಿಯೆಕ್ ವಿರುದ್ಧ 6-5 ಅಂತರದ ರೋಚಕ ಜಯ ದಾಖಲಿಸಿದರು.

ಭಾರತದ ಅಗ್ರ ಬಿಲ್ಲುಗಾರ ಅತನು, ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ಯೂ-ಚೆಂಗ್ ವಿರುದ್ಧ ಗೆಲುವು ಸಾಧಿಸಿದರು. ಬಳಿಕ ಅದೇ ಲಯ ಕಾಪಾಡಿಕೊಂಡು ಜಿನ್ ಹಿಯೆಕ್ ವಿರುದ್ಧವೂ ಮೇಲುಗೈ ಸಾಧಿಸುವಲ್ಲಿ ಯಶ ಕಂಡರು.

ಅತನುದಾಸ್ ಅವರ ಪತ್ನಿ ದೀಪಿಕಾ ಕುಮಾರಿ ಬುಧವಾರ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದರು. ವಿಶ್ವದ ಅಗ್ರ ಶ್ರೇಯಾಂಕಿತೆ ದೀಪಿಕಾ ಅವರು ಭಾರತದ ಪದಕದ ಭರವಸೆಯಾಗಿದ್ದಾರೆ.

 ಕೇರಳದಲ್ಲಿ ಸಂಪೂರ್ಣ ವಾರಾಂತ್ಯದ ಲಾಕ್‌ಡೌನ್

ಕೇರಳದಲ್ಲಿ ಸಂಪೂರ್ಣ ವಾರಾಂತ್ಯದ ಲಾಕ್‌ಡೌನ್


 ಕೇರಳದಲ್ಲಿ ಸಂಪೂರ್ಣ ವಾರಾಂತ್ಯದ ಲಾಕ್‌ಡೌನ್

 ಕೊಚ್ಚಿ: ದೈನಂದಿನ ಕೋವಿಡ್-19 ಪ್ರಕರಣಗಳಲ್ಲಿ ಆತಂಕಕಾರಿ ಏರಿಕೆಗೆ ಸಾಕ್ಷಿಯಾಗಿರುವ ಕೇರಳವು ಈ ವಾರದಿಂದ ವಾರಾಂತ್ಯದ ಲಾಕ್‌ಡೌನ್ ಅನ್ನು ಇನ್ನಷ್ಟು ವಿಸ್ತರಿಸಿದೆ.

ಕೇಂದ್ರ ಸರಕಾರವು ಆರು ಸದಸ್ಯರ ತಂಡವನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದಿಂದ ರಾಜ್ಯಕ್ಕೆ ಕಳುಹಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

"ಕೇರಳದಲ್ಲಿ ಈಗಲೂ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಕೋವಿಡ್ ನಿರ್ವಹಣೆಯಲ್ಲಿ ರಾಜ್ಯದ ನಿರಂತರ ಪ್ರಯತ್ನಗಳಿಗೆ ತಂಡವು ನೆರವಾಗಲಿದೆ" ಎಂದು ಮಾಂಡವಿಯಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರಕಾರ ಎನ್‌ಸಿಡಿಸಿ ನಿರ್ದೇಶಕರ ನೇತೃತ್ವದಲ್ಲಿ 6 ಸದಸ್ಯರ ತಂಡವನ್ನು ಕೇರಳಕ್ಕೆ ಕಳುಹಿಸುತ್ತಿದೆ.

ಈ ಹಿಂದೆ ಕೋವಿಡ್ ನಿರ್ವಹಣೆಯಲ್ಲಿ ಪ್ರಶಂಸಿಸಲ್ಪಟ್ಟಿದ್ದ ಕೇರಳ ರಾಜ್ಯವು ಈಗ ದೇಶದಲ್ಲಿ ಪ್ರತಿದಿನ ಸುಮಾರು 40 ಪ್ರತಿಶತದಷ್ಟು ಪಾಸಿಟಿವ್  ಪ್ರಕರಣಗಳಿಗೆ ಕೊಡುಗೆ ನೀಡುತ್ತಿದೆ.Wednesday, 28 July 2021

 ದ್ವಿತೀಯ ಟ್ವೆಂಟಿ-20: ಭಾರತ ವಿರುದ್ದ ಶ್ರೀಲಂಕಾಕ್ಕೆ ಜಯ

ದ್ವಿತೀಯ ಟ್ವೆಂಟಿ-20: ಭಾರತ ವಿರುದ್ದ ಶ್ರೀಲಂಕಾಕ್ಕೆ ಜಯ


ದ್ವಿತೀಯ ಟ್ವೆಂಟಿ-20: ಭಾರತ ವಿರುದ್ದ ಶ್ರೀಲಂಕಾಕ್ಕೆ ಜಯ

ಕೊಲಂಬೊ: ಧನಂಜಯ ಡಿ’ಸಿಲ್ವಾ ಹಾಗೂ ಮಿನೊದ್ ಭಾನುಕ ಅವರ ಸಾಂದರ್ಭಿಕ ಬ್ಯಾಟಿಂಗ್  ನೆರವಿನಿಂದ ಶ್ರೀಲಂಕಾ ತಂಡ ಭಾರತ ವಿರುದ್ಧದ 2ನೇ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯವನ್ನು 4 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ.

ಗೆಲ್ಲಲು 133 ರನ್ ಗುರಿ ಪಡೆದ ಶ್ರೀಲಂಕಾ ತಂಡವು 19.4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು. ಭಾನುಕಾ 36 ರನ್ ಗಳಿಸಿದರೆ, ಧನಂಜಯ ಔಟಾಗದೆ 40 ರನ್ (34 ಎಸೆತ)ಗಳಿಸಿದರು. ಭಾರತದ ಪರ ಕುಲದೀಪ್ ಯಾದವ್ (2-30)ಯಶಸ್ವಿ ಬೌಲರ್ ಎನಿಸಿಕೊಂಡರು.

ಇದಕ್ಕೂ ಮೊದಲು ಆಫ್ ಸ್ಪಿನ್ನರ್ ಅಕಿಲ ದನಂಜಯ ನೇತೃತ್ವದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಶ್ರೀಲಂಕಾ ಬೌಲರ್ ಗಳು  ಭಾರತ ಕ್ರಿಕೆಟ್ ತಂಡವನ್ನು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 132 ರನ್ ಗೆ ನಿಯಂತ್ರಿಸಿತ್ತು.


 ಬೊಮ್ಮಾಯಿ ಸಿಎಂ ಆಗ್ತಿದ್ದಂತೆ ಅಚ್ಚರಿ ನಿರ್ಧಾರ ಕೈಗೊಂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್

ಬೊಮ್ಮಾಯಿ ಸಿಎಂ ಆಗ್ತಿದ್ದಂತೆ ಅಚ್ಚರಿ ನಿರ್ಧಾರ ಕೈಗೊಂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್


ಬೊಮ್ಮಾಯಿ ಸಿಎಂ ಆಗ್ತಿದ್ದಂತೆ ಅಚ್ಚರಿ ನಿರ್ಧಾರ ಕೈಗೊಂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್

ಬೆಂಗಳೂರು: ಸಂಪುಟ ಸೇರದಿರಲು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿರ್ಧರಿಸಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದ್ದಾರೆ.

ನನಗೆ ಸಚಿವ ಸ್ಥಾನ ಬೇಡವೆಂದು ಶೆಟ್ಟರ್ ಹೇಳಿದ್ದು. ಕಿರಿಯರಿಗೆ ಸಚಿವ ಸ್ಥಾನ ಕೊಡುವಂತೆ ಸಲಹೆ ನೀಡಿದ್ದಾರೆ. ಮಾಜಿ ಸಿಎಂ ಆಗಿದ್ದರೂ, ಬಿ.ಎಸ್.ವೈ. ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅವರು, ಸಿಎಂ ಬದಲಾದ ಹಿನ್ನಲೆಯಲ್ಲಿ ಸಂಪುಟಕ್ಕೆ ಸೇರದಿರಲು ತೀರ್ಮಾನಿಸಿದ್ದಾರೆ.

ಯಡಿಯೂರಪ್ಪ ಹಿರಿಯರಾದ ಕಾರಣ ಅವರ ಸಂಪುಟದಲ್ಲಿ ಸಚಿವನಾಗಿದ್ದೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿರುವುದು ಖುಷಿ ತಂದಿದೆ. ಅವರ ಸಂಪುಟದಲ್ಲಿ ಸಚಿವನಾಗಲು ಆಸಕ್ತಿ ಇಲ್ಲ. ಕಟೀಲು ಆಡಿಯೋಗೂ ಇದಕ್ಕೂ ಸಂಬಂಧವಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರವಾಗಿದೆ. ನನ್ನ ನಿರ್ಧಾರದ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಮಾಜಿ ಸಿಎಂ ಯಡಿಯೂರಪ್ಪನವರ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದ್ದಾರೆ.

ನೈತಿಕ ಕಾರಣದಿಂದ ನಾನು ಸಂಪುಟಕ್ಕೆ ಸೇರುವುದಿಲ್ಲ ಎಂದು ತಿಳಿಸಿದ್ದು, ಈ ಹಿಂದೆ ನಾನು ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಿದ್ದೇನೆ. ಈಗಲೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

 ಅಮರನಾಥ ಬಳಿ ಮೇಘ ಸ್ಪೋಟ : ಬೇಸ್ ಕ್ಯಾಂಪ್ ಹಾನಿ

ಅಮರನಾಥ ಬಳಿ ಮೇಘ ಸ್ಪೋಟ : ಬೇಸ್ ಕ್ಯಾಂಪ್ ಹಾನಿ


ಅಮರನಾಥ ಬಳಿ ಮೇಘ ಸ್ಪೋಟ : ಬೇಸ್ ಕ್ಯಾಂಪ್ ಹಾನಿ

ಶ್ರೀನಗರ: ಉತ್ತರಖಾಂಡ, ಕಾಶ್ಮಿರ, ಹಿಮಾಚಲ ಪ್ರದೇಶಗಳಲ್ಲಿ ಮೇಘಸ್ಪೋಟವಾಗುತ್ತಿದ್ದು, ಪ್ರಾಣ ಹಾನಿ ಮತ್ತು ಬಹಳಷ್ಟು ಹಾನಿ ಉಂಟಾಗುತ್ತಿದೆ. ಇದೀಗ ಅಮರನಾಥ ಗುಹೆ ಬಳಿಯ ಬೇಸ್ ಕ್ಯಾಂಪ್‌ನಲ್ಲಿ ಮೇಘ ಸ್ಫೋಟಗೊಂಡಿದೆ.

ಅಮರನಾಥ ಗುಗೆ ಬಳಿ ಮೇಘ ಸ್ಪೋಟಗೊಂಡ ಹಿನ್ನೆಲೆ ಬೇಸ್‌ಕ್ಯಾಂಪ್‌ ಹಾನಿಯಾಗಿದ್ದು, ಸಾವುನೋವುಗಳು ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಎಸ್‌ಡಿಆರ್‌ಎಫ್‌ನ ಎರಡು ಅಮರನಾಥ ಗುಹೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡುತ್ತಿವೆ ಎನ್ನಲಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಅಮರನಾಥ ಯಾತ್ರೆ ಮುಂದೂಡಲ್ಪಟ್ಟಿದೆಯಾದರೂ ಭದ್ರತಾ ಪಡೆ ಸಿಬ್ಬಂದಿ, ಆರೋಗ್ಯ ಇಲಾಖೆ, ಇತರ ಇಲಾಖೆಗಳ ನೌಕರರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಈ ದೇಶದ ಜನರು ಭಾರತಕ್ಕೆ ಪ್ರಯಾಣಿಸಿದರೆ 3 ವರ್ಷಗಳ ಪ್ರಯಾಣ ನಿಷೇಧ, ಭಾರೀ ದಂಡ