ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ(ವೆಸ್ಟ್) ವತಿಯಿಂದ 'skilling for life' ಎಂಬ ಧ್ಯೇಯದೊಂದಿಗೆ 'EDUZI-21' ಕಾರ್ಯಾಗಾರ.
ಮಂಗಳೂರು: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ(ವೆಸ್ಟ್) ವತಿಯಿಂದ 'skilling for life' ಎಂಬ ಧ್ಯೇಯದೊಂದಿಗೆ 'EDUZI-21' ಕಾರ್ಯಾಗಾರ ಜೂನ್ 9 ರಿಂದ ಜೂನ್ 13ರವರೆಗೆ ಝೂಂ ಹಾಗೂ ಯುಟ್ಯೂಬ್ ಮೂಲಕ, ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ(ವೆಸ್ಟ್) ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಮಾಜಿ ಐ.ಎ.ಎಸ್. ಅಧಿಕಾರಿ ಸಸಿಕಾಂತ್ ಸೇಂತಿಲ್, ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ(ವೆಸ್ಟ್) ಸದಸ್ಯರಾದ ಮನ್ಸೂರ್ ಹಿಮಮಿ, CONVERZA ENGLISH HUB ತರಬೇತುದಾರರಾದ ಎ. ಆರ್. ನುಫೈಲ್, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕ್ಯಾಂಪಸ್ ಸಿಂಡಿಕೇಟ್ ಸದಸ್ಯರಾದ ಸಫ್ದಾರ್ ಹುಸೈನ್ ಹಾಗೂ ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಅಧ್ಯಕ್ಷರಾದ ಸಯ್ಯದ್ ಯೂಸುಫ್ ನವಾಝ್ ಅಲ್ ಹುಸೈನಿ ತರಬೇತಿ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಸ್ಸೆಸ್ಸೆಫ್ ದ.ಕ ಜಿಲ್ಲೆ(ವೆಸ್ಟ್) ಪ್ರ. ಕಾರ್ಯದರ್ಶಿ ಹೈದರ್ ಅಲಿ ಕಾಟಿಪಳ್ಳ, ಫೈನಾನ್ಸ್ ಸೆಕ್ರೆಟರಿ ಇಕ್ಬಾಲ್ ಮದ್ಯನಡ್ಕ ಹಾಗೂ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸದಸ್ಯರಾದ ಸಯ್ಯದ್ ಖುಬೈಬ್ ತಂಙಳ್ ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ದ.ಕ ಜಿಲ್ಲೆ(ವೆಸ್ಟ್) ಕ್ಯಾಂಪಸ್ ಕಾರ್ಯದರ್ಶಿ ಝುಹೈರ್ ಬಜ್ಪೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 التعليقات: