ಕೋವಿನ್ ಮೂಲಕ ಮಾತ್ರ ಲಸಿಕೆ ಆದೇಶ ನೀಡಬೇಕು: ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರ ಸರಕಾರ ಸೂಚನೆ
ಹೊಸದಿಲ್ಲಿ: ಖಾಸಗಿ ಆಸ್ಪತ್ರೆಗಳು ಕೋವಿನ್(CoWIN) ಮೂಲಕ ಕೋವಿಡ್ ಲಸಿಕೆ ಆದೇಶ ನೀಡಬೇಕು. ಕೋವಿನ್ ನಲ್ಲಿ ಅದು ನೋಂದಾಯಿಸಿಕೊಳ್ಳಬೇಕು. ಇನ್ನು ಮುಂದೆ ಉತ್ಪಾದಕರಿಂದ ನೇರವಾಗಿ ಡೋಸೇಜ್ ಖರೀದಿಸಲು ಸಾಧ್ಯವಿಲ್ಲ ಎಂದು ಸರಕಾರ ಮಂಗಳವಾರ ತಿಳಿಸಿದೆ.
ಸೀಮಿತ ಪೂರೈಕೆಯನ್ನು ಸಮತೋಲನಗೊಳಿಸಲು ಹಾಗೂ ವ್ಯರ್ಥವಾಗುವುದನ್ನು ತಡೆಯಲು ಖಾಸಗಿ ಆಸ್ಪತ್ರೆಯು ಒಂದು ತಿಂಗಳವರೆಗೆ ಆದೇಶಿಸಬಹುದಾದ ಡೋಸೇಜ್ಗಳ ಮೇಲೆ ಸರಕಾರವು ಕ್ಯಾಪ್ ಅಥವಾ "ಗರಿಷ್ಠ ಮಿತಿ" ಯನ್ನು ವಿಧಿಸಿದೆ.
ಹೊಸ ಮಾರ್ಗಸೂಚಿಗಳು ಜುಲೈ 1 ರಿಂದ ಜಾರಿಗೆ ಬರುತ್ತವೆ ಹಾಗೂ ಇದು ಒಂದು ಸೂತ್ರವನ್ನು ಒಳಗೊಂಡಿರುತ್ತದೆ .
ಮೊದಲ ಬಾರಿಗೆ ವ್ಯಾಕ್ಸಿನೇಷನ್ ಡ್ರೈವ್ಗೆ ಸೇರುವ ಆಸ್ಪತ್ರೆಗಳಿಗೆ ಲಭ್ಯವಿರುವ ಹಾಸಿಗೆಗಳ ಸಂಖ್ಯೆಯನ್ನು ಆಧರಿಸಿ ಲಸಿಕೆಗಳನ್ನು ಹಂಚಲಾಗುತ್ತದೆ.
ಎಲ್ಲಾ ಖಾಸಗಿ ಆಸ್ಪತ್ರೆಗಳು ಅಗತ್ಯ ವಿವರಗಳನ್ನು ಕೋವಿನ್ ಡೇಟಾಬೇಸ್ಗೆ ನಮೂದಿಸುತ್ತವೆ. ಅದು ಮಾಹಿತಿಯನ್ನು ಉತ್ಪಾದಕರಿಗೆ ತಲುಪಿಸುವ ಮೊದಲು ಜಿಲ್ಲೆ ಹಾಗೂ ರಾಜ್ಯವಾರು ಬೇಡಿಕೆಯನ್ನು ಒಟ್ಟುಗೂಡಿಸುತ್ತದೆ. ಸರಕಾರಿ ಅಧಿಕಾರಿಗಳಿಂದ ಯಾವುದೇ ಪೂರ್ವ ಅನುಮೋದನೆ ಅಗತ್ಯವಿಲ್ಲ.
0 التعليقات: